alex Certify
ಕನ್ನಡ ದುನಿಯಾ       Mobile App
       

Kannada Duniya

ಅನೇಕ ದಿನ ಸೆಕ್ಸ್ ನಿಂದ ದೂರವಿದ್ರೆ ಏನು ನಷ್ಟ ಗೊತ್ತಾ?

couple-bed-intimacy-smile-bedroom-sex-happy

ಬಿಡುವಿಲ್ಲದ ಕೆಲಸದಿಂದಾಗಿ ದಂಪತಿ ಪರಸ್ಪರ ಸಮಯ ನೀಡುವುದಿಲ್ಲ. ಇದು ಅವರ ಸೆಕ್ಸ್ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಕೆಲಸದ ಕಾರಣ ಅನೇಕ ದಿನ ಶಾರೀರಿಕ ಸಂಬಂಧ ಬೆಳೆಸದೆ ದಂಪತಿ ದೂರವಿರುತ್ತಾರೆ. ಬಹಳ ದಿನ ಸೆಕ್ಸ್ ಲೈಫ್ ನಿಂದ ದೂರವಿದ್ರೆ ಸಾಕಷ್ಟು ಅನಾನುಕೂಲಗಳನ್ನು ಎದುರಿಸಬೇಕಾಗುತ್ತದೆ.

ಅನೇಕ ದಿನಗಳಿಂದ ನೀವು ಶಾರೀರಿಕ ಸಂಬಂಧ ಬೆಳೆಸಿಲ್ಲವೆಂದಾದ್ರೆ ನೀವು ಹಿಂದೆ ಎಂದು ಸಂಬಂಧ ಬೆಳೆಸಿದ್ದೆವು ಎಂಬುದನ್ನು ಯೋಚನೆ ಮಾಡ್ತೀರಾ. ಆ ಕ್ಷಣವನ್ನು ನೆನೆಪಿಸಿಕೊಳ್ಳಲು ಪ್ರಯತ್ನಿಸುತ್ತೀರಿ. ಇದೇ ವಿಚಾರ ನಿಮ್ಮನ್ನು ಎಮೋಷನಲ್ ಮಾಡುವ ಸಾಧ್ಯತೆಯೂ ಇದೆ.

ಬಹಳ ದಿನ ಶಾರೀರಿಕ ಸಂಬಂಧದಿಂದ ದೂರವಿದ್ರೆ ಅದ್ರ ಬಗ್ಗೆಯೇ ಮನಸ್ಸು ಯೋಚನೆ ಮಾಡಲು ಶುರುಮಾಡುತ್ತದೆ. ದಿನದ 24 ಗಂಟೆ ಇದೇ ವಿಚಾರ ತಲೆಯಲ್ಲಿ ಹರಿದಾಡುತ್ತಿರುತ್ತದೆ. ಸೆಕ್ಸ್ ಬಗ್ಗೆ ಇಮ್ಯಾಜಿನ್ ಮಾಡಿಕೊಳ್ಳುತ್ತೀರಿ. ರಿಯಲ್ ಸೆಕ್ಸ್ ನ ಭಾವನೆ ಹೇಗಿರುತ್ತೆ ಎಂಬುದು ಇದ್ರಿಂದ ಮರೆತು ಹೋಗುತ್ತದೆ. ಇಂಥ ಸ್ಥಿತಿಯಲ್ಲಿ ಜನರು ಸೆಕ್ಸ್ ಬಗ್ಗೆ ಮಾತನಾಡಲು ಬಯಸುವುದಿಲ್ಲ. ಪರಸ್ಪರ ಪ್ರೀತಿಸುವ ಹಾಗೂ ಸಂಬಂಧಕ್ಕೆ ಸಮಯ ನೀಡುವ ದಂಪತಿಯನ್ನು ಇವರು ದ್ವೇಷಿಸಲು ಶುರುಮಾಡ್ತಾರೆ.

ಸೆಕ್ಸ್ ನಿಂದ ಬಹಳ ದಿನ ದೂರವಿದ್ದರೆ ಫ್ರೆಸ್ಟ್ರೇಷನ್ ಲೆವಲ್ ಜಾಸ್ತಿಯಾಗುತ್ತದೆ. ಕೆಲವರು ಮನೆಯಿಂದ ಹೊರಗೆ ಬೇರೆ ಸಂಬಂಧ ಹುಡುಕಲು ಶುರುಮಾಡ್ತಾರೆ. ಡೇಟಿಂಗ್ ಸೈಟ್ ನಲ್ಲಿ ತಮ್ಮ ಹೆಸರು ನೋಂದಾಯಿಸುವವರೂ ಇದ್ದಾರೆ. ಒನ್ ನೈಟ್ ಸ್ಟ್ಯಾಂಡ್ ಬಗ್ಗೆ ಕೂಡ ಯೋಚನೆ ಬರುತ್ತದೆ. ಪತ್ನಿಗೆ ಮೋಸ ಮಾಡಲು ಮುಂದಾಗ್ತಾರೆ. ಮಾಜಿ ಪ್ರೇಮಿಗಳಿಗೆ ಕರೆ ಮಾಡಿ ಅವ್ರ ಜೊತೆ ಸಂಬಂಧ ಬೆಳೆಸುವ ಯೋಚನೆ ಮಾಡುವವರೂ ಇದ್ದಾರೆ.

ಅನೇಕ ದಿನಗಳವರೆಗೆ ಸೆಕ್ಸ್ ನಿಂದ ದೂರವಿದ್ದವರು ಜೀವನದಲ್ಲಿ ಯಾವುದೂ ಶಾಶ್ವತವಲ್ಲ ಎನ್ನುವ ಹಂತ ತಲುಪುತ್ತಾರೆ. ಈ ಸಮಯ ಕೂಡ ಶಾಶ್ವತವಲ್ಲ ಎಂದುಕೊಳ್ಳುವ ಕೆಲವು ಮಂದಿ ಮತ್ತೆ ತಮ್ಮ ಟ್ರ್ಯಾಕ್ ಗೆ ಮರಳುತ್ತಾರೆ.

ದಂಪತಿ ಮಧ್ಯೆ ನಡೆಯುವ ಗಲಾಟೆಗೂ ಇದೇ ಕಾರಣ. ಶಾರೀರಿಕ ಸಂಬಂಧ ಬೆಳೆಸದೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ದೂರವಾಗಿರುವ ದಂಪತಿ ಕಿರಿಕಿರಿ ಅನುಭವಿಸುತ್ತಾರೆ. ಸಣ್ಣ-ಸಣ್ಣ ವಿಚಾರಕ್ಕೂ ದಂಪತಿ ಕಿತ್ತಾಡುತ್ತಾರೆ. ಕಾರಣವಿಲ್ಲದೆ ಮುನಿಸಿಕೊಳ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...