alex Certify
ಕನ್ನಡ ದುನಿಯಾ       Mobile App
       

Kannada Duniya

ದಪ್ಪ ಅನ್ನೋ ಮುಜುಗರಕ್ಕೆ ಪರಿಹಾರ ಹುಡುಕಿದ್ದಾಳೆ ಈ ಮಹಿಳೆ

yoga

34 ವರ್ಷದ ಡಾಲಿ ಸಿಂಗ್ ಸಾಮಾಜಿಕ ತಾಣಗಳಲ್ಲಿ ಸಾವಿರಾರು ಫಾಲೋವರ್ಗಳನ್ನು ಸಂಪಾದಿಸಿದ್ದಾಳೆ. ಬಾಡಿ ಪಾಸಿಟಿವಿಟಿ ಬಗ್ಗೆ ಡಾಲಿ ಅರಿವು ಮೂಡಿಸೋ ಪ್ರಯತ್ನ ಮಾಡ್ತಿದ್ದಾಳೆ. ದಪ್ಪಗಿದ್ರೂ ಯೋಗದ ಕಠಿಣ ಆಸನಗಳನ್ನು ಸಲೀಸಾಗಿ ಮಾಡಬಹುದು ಅನ್ನೋದನ್ನು ಡಾಲಿ ಸಾಬೀತುಪಡಿಸಿದ್ದಾಳೆ.

yoga-1

ಡಾಲಿ ಕೇವಲ 4 ಅಡಿ 11 ಇಂಚು ಎತ್ತರವಿದ್ದಾಳೆ. 4 ವರ್ಷಗಳ ಹಿಂದೆ ಇವಳ ತೂಕ ಬರೋಬ್ಬರಿ 90 ಕೆಜಿ ಇತ್ತು. ಪಾದದ ಕೀಲು ನೋವು ಶುರುವಾಗಿದ್ದರಿಂದ ತೂಕ ಇಳಿಸುವಂತೆ ವೈದ್ಯರು ಸಲಹೆ ನೀಡಿದ್ರು. ತೂಕ ಇಳಿಸಲು ಡಾಲಿ ಆಯ್ಕೆ ಮಾಡಿಕೊಂಡಿದ್ದು ಯೋಗಾಸನವನ್ನ.

yoga-2

ಯೋಗ ಕ್ಲಾಸ್ ಗೆ ಜಾಯಿನ್ ಆದ ಡಾಲಿ, ಆನ್ ಲೈನ್ ನಲ್ಲೂ ಕೆಲವು ವಿಡಿಯೋಗಳನ್ನು ವೀಕ್ಷಿಸಿ ಸಾಕಷ್ಟು ಸಲಹೆಗಳನ್ನು ಪಡೆದುಕೊಂಡ್ಲು. ತರಗತಿಗಳಲ್ಲಿ ಮುಜುಗರ, ಅವಮಾನ ಆಗುವಂತಹ ಪ್ರಸಂಗಗಳನ್ನೆಲ್ಲ ಧೈರ್ಯವಾಗಿ ಎದುರಿಸಿದ್ಲು. ತಾನು ಮಾಡುವ ಆಸನಗಳನ್ನೆಲ್ಲ ವಿಡಿಯೋ ಮಾಡಿ ಅದನ್ನು ಇನ್ ಸ್ಟಾಗ್ರಾಮ್ ನಲ್ಲಿ ಡಾಲಿ ಅಪ್ ಲೋಡ್ ಮಾಡ್ತಾಳೆ.

yoga-3

ಡಾಲಿಯ ಯೋಗಾಸನಕ್ಕೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಎಷ್ಟೋ ಮಹಿಳೆಯರು ಇವಳಿಂದ ಪ್ರೇರಣೆ ಪಡೆದಿದ್ದಾರೆ. ಫಿಟ್ನೆಸ್ ಬಗ್ಗೆ ಗಮನ ಹರಿಸುತ್ತಿದ್ದಾರೆ. ಇನ್ನು ಕೆಲವರು ದಪ್ಪಗಿದ್ದಾಳೆ ಅನ್ನೋ ಕಾರಣಕ್ಕೆ ಡಾಲಿಗೆ ಅವಮಾನ ಕೂಡ ಮಾಡಿದ್ದಾರೆ. ಆದ್ರೆ ಅಂತಹ ಟ್ರೋಲ್ ಮತ್ತು ಕಮೆಂಟ್ ಗಳನ್ನೆಲ್ಲ ಡಾಲಿ ಅಲಕ್ಷಿಸ್ತಾಳೆ.

ಸದ್ಯ ಡಾಲಿಯ ತೂಕ 73 ಕೆಜಿಗೆ ಇಳಿದಿದೆ. ಯೋಗಾಸನದ ಮೂಲಕವ ದೇಹದ ಆರೋಗ್ಯವನ್ನು ಡಾಲಿ ಕಾಪಾಡಿಕೊಳ್ತಿದ್ದಾಳೆ. ನೋವಿಗೂ ಮದ್ದು ಕಂಡುಕೊಂಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...