alex Certify
ಕನ್ನಡ ದುನಿಯಾ       Mobile App
       

Kannada Duniya

ಇಲಿರಾಯನ ದರ್ಬಾರ್ ತಡೆಯಲು ಸರಳ ಉಪಾಯ

how to avoid mouse at homeನಿಮ್ಮ ಮನೆಯಲ್ಲಿ ಇಲಿಯ ಕಾಟ ಹೆಚ್ಚಾಗಿದ್ದರೆ ಕೆಲವು ಸರಳ ವಿಧಾನದಿಂದ ಇಲಿಗಳನ್ನು ಓಡಿಸಬಹುದು. ಅಂತಹ ಕೆಲವು ಉಪಾಯಗಳು ಇಲ್ಲಿವೆ.

ಈರುಳ್ಳಿ:  ಈರುಳ್ಳಿಯ ವಾಸನೆಯನ್ನು ಇಲಿ ಸಹಿಸುವುದಿಲ್ಲ. ಹಾಗಾಗಿ ಇಲಿ ಬರುವ ಕಡೆ ಈರುಳ್ಳಿಯನ್ನು ಗೋಲವಾಗಿ ಕತ್ತರಿಸಿ ಇಡಿ.

ಹತ್ತಿ: ಹತ್ತಿಯನ್ನು ಉಂಡೆಯನ್ನಾಗಿ ಮಾಡಿ ಅದನ್ನು ಪುದೀನಾ ಎಣ್ಣೆಯಲ್ಲಿ ಅದ್ದಿ ಇಲಿ ಬರುವ ಜಾಗದಲ್ಲಿ ಇಡಿ.

ಫಿನೈಲ್ ಗುಳಿಗೆ: ಫಿನೈಲ್ ಗುಳಿಗೆಗಳ ವಾಸನೆಗೆ ಇಲಿಗಳು ಹತ್ತಿರ ಸುಳಿಯುವುದಿಲ್ಲ.

ಡಿಟರ್ಜೆಂಟ್: ಎರಡು ಚಮಚ ಡಿಟರ್ಜೆಂಟ್ ಮತ್ತು ಎರಡು ಕಪ್ ಅಮೋನಿಯಾವನ್ನು ನೀರಿನೊಂದಿಗೆ ಸೇರಿಸಿ ಇಲಿ ಬರುವ ಜಾಗದಲ್ಲಿಡಿ.

ಮೆಣಸಿನ ಪುಡಿ: ಇಲಿ ಬರುವ ಸ್ಥಳಕ್ಕೆ ಮೆಣಸಿನ ಪೌಡರ್ ಹಾಕಿದರೆ ಅದರ ಘಾಟು ವಾಸನೆಗೆ ಇಲಿ ಬರುವುದಿಲ್ಲ.

ಮಸಾಲೆ ಎಲೆ: ಇಲಿ ಬರುವ ಜಾಗದಲ್ಲಿ ಮಸಾಲೆ ಎಲೆಗಳನ್ನಿಡಿ. ಈ ಎಲೆಗಳನ್ನು ಅವು ಆಹಾರವೆಂದು ಭಾವಿಸಿ ತಿನ್ನುತ್ತವೆ. ಇದು ಇಲಿಗಳ ಆರೋಗ್ಯಕ್ಕೆ ಹಾನಿಕಾರಕ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...