alex Certify
ಕನ್ನಡ ದುನಿಯಾ       Mobile App
       

Kannada Duniya

499 ರೂ. ಖರ್ಚು ಮಾಡಿ ನೀರಿಲ್ಲದೆ ಸ್ನಾನ ಮಾಡಿ…!

ಚಳಿಗಾಲದಲ್ಲಿ ಸ್ನಾನ ಮಾಡೋದು ದೊಡ್ಡ ತಲೆನೋವಿನ ಕೆಲಸ. ಚಳಿ-ಚಳಿಯಲ್ಲಿ ಯಾರು ಸ್ನಾನ ಮಾಡ್ತಾರೆ ಅಂತಾ ಮೂಗು ಮುರಿಯುವವರೇ ಜಾಸ್ತಿ. ಐಐಟಿ ಮತ್ತು ಐಐಎಂ ವಿದ್ಯಾರ್ಥಿಗಳು ನೀರಿಲ್ಲದೆ ಸ್ನಾನ ಮಾಡುವ ವಿಧಾನವನ್ನು ಕಂಡು ಹಿಡಿದಿದ್ದಾರೆ. ಈ ವಿಧಾನದಲ್ಲಿ ಸ್ನಾನ ಮಾಡಿದ್ರೂ ತಾಜಾತನ ಹಾಗೂ ಸ್ವಚ್ಛತೆ ನೀರಿನಲ್ಲಿ ಸ್ನಾನ ಮಾಡಿದಷ್ಟೆ ಇರುತ್ತದೆಯಂತೆ.

ಈ ಶಾಂಪೂವಿನಿಂದ ಸ್ನಾನ ಮಾಡಿದ್ರೆ ನೀರು ಉಳಿಯುತ್ತೆ ಎಂಬುದು ವಿದ್ಯಾರ್ಥಿಗಳ ವಾದ. ಒಂದು ಬಾಟಲ್ ಶಾಂಪೂವಿನಲ್ಲಿ 350 ಲೀಟರ್ ನೀರುಳಿಸುವ ಶಕ್ತಿಯಿದೆಯಂತೆ. ನೀರಿಲ್ಲದ ಶಾಂಪೂವಿನ ಬೆಲೆ 499 ರೂಪಾಯಿ. 100 ಮಿಲಿಲೀಟರ್ ವಾಟರ್ಲೆಸ್ ಶಾಂಪೂವನ್ನು ನೀವು 549 ರೂಪಾಯಿಗೆ ಖರೀದಿ ಮಾಡಬೇಕಾಗುತ್ತದೆ.

ಇಡೀ ದೇಹಕ್ಕೆ 25 ಮಿಲಿ ಶಾಂಪೂ ಸಾಕು. ಇದ್ರಿಂದ ಯಾವುದೇ ಅಡ್ಡಪರಿಣಾಮವಿಲ್ಲವಂತೆ. ಕಂಪನಿ, ನೌಕಾಪಡೆ ಸೇರಿದಂತೆ ರಕ್ಷಣಾ ಸಿಬ್ಬಂದಿಗೆ ಇದನ್ನು ಸರಬರಾಜು ಮಾಡಲು ಶುರುಮಾಡಿದೆ. ರೋಗಿಗಳಿಗೂ ಈ ಲೋಷನ್ ಪ್ರಯೋಜನಕಾರಿ. ಕೇವಲ ತಣ್ಣೀರಿನಲ್ಲಿ ಸ್ನಾನ ಮಾಡಲು ಬೇಸರ ಮಾಡಿಕೊಳ್ಳುವವರಿಗೆ ಮಾತ್ರ ಇದು ಸೀಮಿತವಲ್ಲ. ನೀರಿನಲ್ಲಿ ಸ್ನಾನ ಮಾಡಲು ಸಾಧ್ಯವಾಗದ ರೋಗಿಗಳು ಹಾಗೂ ನೀರು ಸಿಗದೆ ಸ್ನಾನ ಮಾಡಲು ಸಾಧ್ಯವಾಗದ ಸೈನಿಕರಿಗೂ ಅನುಕೂಲ ಎನ್ನುತ್ತದೆ ಕಂಪನಿ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...