alex Certify
ಕನ್ನಡ ದುನಿಯಾ       Mobile App
       

Kannada Duniya

ಇಂಗ್ಲಿಷ್ ವ್ಯಾಕರಣ ಬೋರಿಂಗ್ ಎನಿಸಿದ್ರೆ ಇದನ್ನೊಮ್ಮೆ ನೋಡಿ….

man_facebook_759

ವ್ಯಾಕರಣ ಅಂದ್ರೆ ಸಾಕು ಮಕ್ಕಳಿಗೆಲ್ಲಾ ಬೇಸರ. ಗ್ರಾಮರ್ ಪಾಠ ಬೋರಿಂಗ್ ಆಗಿರುತ್ತೆ ಅಂತಾನೇ ಪ್ರತಿಯೊಬ್ಬರೂ ಹೇಳ್ತಾರೆ. ಆದ್ರೆ ವ್ಯಾಕರಣವನ್ನು ಕೂಡ ತಮಾಷೆಯಾಗಿ ಕಲಿಯಬಹುದು ಅನ್ನೋದನ್ನು ಇಲ್ಲೊಬ್ಬರು ತೋರಿಸಿಕೊಟ್ಟಿದ್ದಾರೆ. ಇದನ್ನು ನೋಡಿದ್ರೆ ಇಂಗ್ಲಿಷ್ ವ್ಯಾಕರಣವೂ ಇಷ್ಟೊಂದು ರಸವತ್ತಾಗಿರುತ್ತಾ ಅಂತಾ ನೀವು ಅಚ್ಚರಿಪಡೋದು ಗ್ಯಾರಂಟಿ.

ಈ ವ್ಯಾಕರಣ ಪಾಠದ ವಿಡಿಯೋ ಫೇಸ್ ಬುಕ್ ನಲ್ಲಿ ಹರಿದಾಡ್ತಾ ಇದೆ. ಟೆನ್ಸ್, ಸಿಂಗ್ಯುಲರ್, ಪ್ಲೂರಲ್, ವರ್ಬ್ಸ್ ಎಲ್ಲವನ್ನೂ ಇಂಟ್ರೆಸ್ಟಿಂಗ್ ಆಗಿ ಅವರು ಹೇಳಿಕೊಡ್ತಾರೆ. ಪ್ರೆಸೆಂಟ್ ಕಂಟಿನಿಯಸ್ ಟೆನ್ಸ್ ಬಗ್ಗೆ ಅವರು ಪಾಠ ಮಾಡುವ ವಿಡಿಯೋ ವೈರಲ್ ಆಗಿದೆ.

ಹಾಡು ಹೇಳುತ್ತ, ಡ್ಯಾನ್ಸ್ ಮಾಡುತ್ತ ಇಂಗ್ಲಿಷ್ ವ್ಯಾಕರಣವನ್ನು ತಿಳಿಹೇಳ್ತಿದ್ದಾರೆ. ಹಾಡಿನ ರೂಪದ ಪಾಠವನ್ನು ವಿದ್ಯಾರ್ಥಿಗಳು ಕೂಡ ರಿಪೀಟ್ ಮಾಡಬೇಕು. ಪ್ರೆಸೆಂಟ್ ಪರ್ಫೆಕ್ಟ್ ಟೆನ್ಸ್, ಪಾಸ್ಟ್ ಇಂಡೆಫಿನೆಟ್ ಟೆನ್ಸ್ ಎಲ್ಲವನ್ನೂ ಹಾಡುತ್ತ ಕುಣಿಯುತ್ತ ಪಾಠ ಮಾಡಿದ್ದಾರೆ. ವಿದ್ಯಾರ್ಥಿಗಳು ಖುಷಿಖುಷಿಯಾಗಿ ವ್ಯಾಕರಣದ ತರಗತಿಯನ್ನು ಎಂಜಾಯ್ ಮಾಡ್ತಿದ್ದಾರೆ. ಇದ್ರೆ ಇಂತಹ ಶಿಕ್ಷಕರು ಇರಬೇಕು ಎನ್ನುತ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಡೋನಾಲ್ಡ್ ಟ್ರಂಪ್ ಅಮೆರಿಕಾ ಅಧ್ಯಕ್ಷರಾದ ಬಳಿಕ ಜನಾಂಗೀಯ ದ್ವೇಷ ಹೆಚ್ಚಾಗುತ್ತಿದೆಯೇ..?

    View Results

    Loading ... Loading ...