
ಆಗ್ರಾದಲ್ಲಿ 3 ಮಹಡಿ ಕಟ್ಟಡವೊಂದನ್ನು ಇಲಿಗಳೇ ನೆಲಸಮ ಮಾಡಿವೆ. ಈ ಕಟ್ಟಡದ ಕೆಳಗೆ ಹಲವು ವರ್ಷಗಳಿಂದ ಸಾವಿರಾರು ಇಲಿಗಳು ಬೀಡುಬಿಟ್ಟಿದ್ದವು. ದೊಡ್ಡ ದೊಡ್ಡ ಬಿಲಗಳನ್ನು ತೋಡಿದ್ದವು. ಪರಿಣಾಮ ಕಟ್ಟಡ ಈಗ ಕುಸಿದು ಬಿದ್ದಿದೆ.
ಈ ಭಾಗದಲ್ಲಿ ಮೊದಲಿನಿಂದ್ಲೂ ಇಲಿಗಳ ಕಾಟ ಹೆಚ್ಚಾಗಿತ್ತು. ಕಟ್ಟಡದ ಕೆಳಗೆ ಬಿಲ ತೋಡಿದ್ದರಿಂದ ಚರಂಡಿ ನೀರು ಹರಿದು ಹೋಗುತ್ತಿದ್ದ ಪೈಪ್ ಗೂ ಹಾನಿಯಾಗಿದೆ. ಶನಿವಾರ ಭಾರೀ ಮಳೆ ಸುರಿದಿದ್ದು, ನೀರಿನ ಒತ್ತಡ ಹೆಚ್ಚಾಗಿ ಕಟ್ಟದ ಕುಸಿದು ಬಿತ್ತು.
ಕಟ್ಟಡದ ನೆಲ ಮಹಡಿಯಲ್ಲಿ ನೀರು ತುಂಬಿಕೊಂಡಿತ್ತು. ಆತಂಕಗೊಂಡ ನಿವಾಸಿಗಳು ಅಲ್ಲಿಂದ ಹೊರಟು ಹೋಗಿದ್ದರು. ತೆರವು ಮಾಡಿ ಕೆಲವೇ ಗಂಟೆಗಳ ಬಳಿಕ ಕಟ್ಟಡ ಕುಸಿದಿದೆ. ಕಟ್ಟಡ ಕುಸಿದು ಬೀಳುತ್ತಿರುವ ದೃಶ್ಯ ಕ್ಯಾಮರಾದಲ್ಲೂ ಸೆರೆಯಾಗಿದೆ.