alex Certify
ಕನ್ನಡ ದುನಿಯಾ       Mobile App
       

Kannada Duniya

ವಾರಂಗಲ್ ಪೊಲೀಸರ ವಿಶ್ವ ದಾಖಲೆ….

warangal_police_record-e1482459980997

ಒಂದೇ ಸ್ಥಳದಲ್ಲಿ ಅತಿದೊಡ್ಡ ಸ್ವಯಂ ರಕ್ಷಣೆ ತರಬೇತಿ ಶಿಬಿರ ನಡೆಸಿಕೊಡುವ ಮೂಲಕ ತೆಲಂಗಾಣದ ವಾರಂಗಲ್ ಪೊಲೀಸರು ವಿಶ್ವದಾಖಲೆ ಮಾಡಿದ್ದಾರೆ. ಕಾಲೇಜು ವಿದ್ಯಾರ್ಥಿನಿಯರು, ಉದ್ಯೋಗಸ್ಥ ಮಹಿಳೆಯರು ಸೇರಿದಂತೆ ಈ ತರಬೇತಿ ಕಾರ್ಯಾಗಾರದಲ್ಲಿ 21,276 ಮಂದಿ ಪಾಲ್ಗೊಂಡಿದ್ದರು.

ನಗರದ ಕಾಲೇಜು ಯುವತಿಯರು, ವಿದೇಶಿ ಮಹಿಳೆಯರು ಹಾಗೂ ವೃತ್ತಿನಿರತ ಸ್ತ್ರೀಯರಿಗೆ ಸ್ವಯಂ ರಕ್ಷಣಾ ಕೌಶಲ್ಯಗಳ ಬಗ್ಗೆ ತರಬೇತಿ ನೀಡಲಾಗಿದೆ ಅಂತಾ ವಾರಂಗಲ್ ಪೊಲೀಸ್ ಆಯುಕ್ತ ಜಿ.ಸುಧೀರ್ ಬಾಬು ತಿಳಿಸಿದ್ದಾರೆ.

ಜವಾಹರ ಲಾಲ್ ನೆಹರೂ ಮೈದಾನದಲ್ಲಿ 52 ನಿಮಿಷಗಳ ಕಾಲ ನಡೆದ ಈ ಕಾರ್ಯಕ್ರಮ ಗಿನ್ನಿಸ್ ಬುಕ್ ನಲ್ಲಿ ವಿಶ್ವ ದಾಖಲೆಯ ಪುಟ ಸೇರಿದೆ. ಒಂದೇ ಸ್ಥಳದಲ್ಲಿ ನಡೆದ ಅತಿ ದೊಡ್ಡ ಸ್ವಯಂ ರಕ್ಷಣಾ ತರಬೇತಿ ಕಾರ್ಯಕ್ರಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಬ್ರೆಜಿಲ್ ಹೆಸರಲ್ಲಿತ್ತು. 2010 ರಲ್ಲಿ ರಿಯೋ ಜಿ ಜನೆರಿಯೋದಲ್ಲಿ ನಡೆದ ತರಬೇತಿ ಕಾರ್ಯಾಗಾರದಲ್ಲಿ 2212 ಮಂದಿ ಭಾಗವಹಿಸಿದ್ದರು. ಸ್ವಯಂ ರಕ್ಷಣಾ ತಂತ್ರಗಳ ಬಗ್ಗೆ ಯುವತಿಯರು ಹಾಗೂ ಮಹಿಳೆಯರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ವಾರಂಗಲ್ ಪೊಲೀಸರು ಈ ವಿಶಿಷ್ಟ ತರಬೇತಿ ಹಮ್ಮಿಕೊಂಡಿದ್ದರು. ಸರ ಅಪಹರಣ, ಬ್ಯಾಗ್ ಅಪಹರಣ, ಚುಡಾಯಿಸುವುದು ಇಂತಹ ಸಂದರ್ಭಗಳಲ್ಲೆಲ್ಲ ಕಿಡಿಗೇಡಿಗಳನ್ನು ಎದುರಿಸಲು ನೆರವಾಗುವಂತಹ 15 ಕೌಶಲ್ಯಗಳನ್ನು ಹೇಳಿಕೊಡಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...