alex Certify
ಕನ್ನಡ ದುನಿಯಾ       Mobile App
       

Kannada Duniya

ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ವಿಶಿಷ್ಟ ಸಾಧನೆಗೆ ಮುಂದಾದ ಉದ್ಯಮಿ

ವಿಶಾಖಪಟ್ಟಣದ 37 ವರ್ಷದ ಬ್ಯುಸಿನೆಸ್ ಮ್ಯಾನ್ ರಾಣಾ ಉಪ್ಪಾಲಪಟ್ಟಿ ಒಂದು ಸಾಮಾಜಿಕ ಉದ್ದೇಶಕ್ಕಾಗಿ ಭಾರೀ ಸಾಹಸಕ್ಕೆ ಕೈ ಹಾಕಿದ್ದಾರೆ. ಹುಟ್ಟು ಆಶಾವಾದಿಯಾಗಿರುವ ರಾಣಾ ಹೆಣ್ಣು ಮಗುವಿನ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ 6000 ಕಿ.ಮೀ. ಸ್ಕೇಟಿಂಗ್ ಮೂಲಕ ಚಲಿಸೋದಕ್ಕೆ ನಿರ್ಧರಿಸಿದ್ದಾರೆ.

ಈ ಹಂತದಲ್ಲಿ ರಾಣಾ ದೇಶದ ಹಲವು ನಗರಗಳಿಗೆ ಭೇಟಿ ನೀಡಲಿದ್ದಾರಂತೆ. ಸೆಪ್ಟೆಂಬರ್ 5ರಂದು ರಾಣಾರ ಈ ವಿಶೇಷ ಯಾತ್ರೆ ಶುರುವಾಗಿದೆ. 90 ದಿನಗಳ ಅವಧಿಯಲ್ಲಿ ದೇಶದ 20 ಪ್ರಮುಖ ನಗರಗಳಿಗೆ ಅವರು ಸ್ಕೇಟಿಂಗ್ ಮೂಲಕ ತೆರಳಲಿದ್ದಾರೆ. ಅದರಲ್ಲಿ ನಾಲ್ಕು ಮೆಟ್ರೋ ಪಾಲಿಟಿನ್ ಸಿಟಿಗಳು ಸೇರಿವೆ.

ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುತ್ತಾ 25,000 ಹೆಣ್ಣು ಮಕ್ಕಳಿಗಾಗಿ ಸುಮಾರು 9 ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸೋ ಗುರಿಯನ್ನು ಅವರು ಹೊಂದಿದ್ದಾರೆ. ಈಗಾಗ್ಲೇ ಅವರು 2500 ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಬೇಕಾಗುವಷ್ಟು ಹಣವನ್ನು ತಮ್ಮ ಸ್ಕೇಟಿಂಗ್ನಿಂದ ಸಂಗ್ರಹಿಸಿದ್ದಾರಂತೆ. ಟೈಟನ್ ಸಾಮಾಜಿಕ ಜವಾಬ್ದಾರಿ ನಿರ್ವಹಣಾ ಸಂಸ್ಥೆ, ರಾಣಾ ಅವರ ಸ್ಕೇಟಿಂಗ್ ಕಾರ್ಯಕ್ರಮವನ್ನು ನೋಡಿಕೊಳ್ತಿದೆಯಂತೆ.

ಹೊಸೂರಿನಿಂದ ತಮ್ಮ ಪ್ರಯಾಣ ಆರಂಭಿಸಿರುವ ರಾಣಾ ಈಗಾಗ್ಲೇ 800 ಕಿ.ಮೀ. ಜರ್ನಿ ಪೂರ್ಣಗೊಳಿಸಿದ್ದಾರೆ. 10ದಿನಗಳ ಅವಧಿಯಲ್ಲಿ 800 ಕಿ.ಮೀ ಕ್ರಮಿಸಿರೋದು ಸಾಮಾನ್ಯ ಸಾಧನೆಯಲ್ಲ. ಯಾಕಂದ್ರೆ ರಾಣಾ ವೃತ್ತಿಪರ ಸ್ಕೇಟಿಂಗ್ ಪಟುವಲ್ಲ. ಬೆಂಗಳೂರು ಮಾರ್ಗವಾಗಿ ಅವರು ಪುಣೆ ಮತ್ತು ಮುಂಬೈ ಕ್ರಮಿಸಿದ್ದಾರೆ. ಘಾಟ್ ಸೆಕ್ಷನ್ನಲ್ಲಿ ಗಂಟೆಗೆ 10 ಕಿ. ಮೀ . ವೇಗದಲ್ಲಿ ಚಲಿಸಿದ ರಾಣಾ ಸಾಮಾನ್ಯ ರಸ್ತೆಗಳಲ್ಲಿ ಗಂಟೆಗೆ 60 ಕಿ.ಮೀ, ವೇಗದಲ್ಲಿ ಚಲಿಸಿದರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...