alex Certify
ಕನ್ನಡ ದುನಿಯಾ       Mobile App
       

Kannada Duniya

ಇದನ್ನು ಕೇಳಿ ನಿಮಗೆ ಆಶ್ಚರ್ಯವಾಗಬಹುದು! ಆದರೂ ಇದು ಸತ್ಯ!!

ಇದನ್ನು ಕೇಳಿ ನಿಮಗೆ ಆಶ್ಚರ್ಯವಾಗಬಹುದು. ಆದ್ರೆ ಇದು ಸತ್ಯ. ನಗರಕ್ಕಿಂತ ಹಳ್ಳಿಗರು ಮದ್ಯಪಾನಕ್ಕೆ ಹೆಚ್ಚು ಖರ್ಚು ಮಾಡ್ತಾರಂತೆ. ಗ್ರಾಮದಲ್ಲಿ ಮದ್ಯ ಸೇವಿಸುವ ವ್ಯಕ್ತಿ ತಿಂಗಳಿಗೆ 2 ಸಾವಿರ ರೂಪಾಯಿ ಖರ್ಚು ಮಾಡಿದ್ರೆ ನಗರದ ವ್ಯಕ್ತಿ ತಿಂಗಳಿಗೆ 1400 ರೂಪಾಯಿ ಖರ್ಚು ಮಾಡ್ತಾನಂತೆ.

ಕಳೆದ 13 ವರ್ಷಗಳಲ್ಲಿ ಮದ್ಯ ಸೇವನೆಗಾಗಿ ಮಾಡುವ ಖರ್ಚು ದುಪ್ಪಟ್ಟಾಗಿದೆಯಂತೆ. 2003ರಲ್ಲಿ ಗ್ರಾಮೀಣ ವ್ಯಕ್ತಿ ತಿಂಗಳಿಗೆ ಸಾವಿರ ರೂಪಾಯಿಯನ್ನು ಮದ್ಯಕ್ಕೆ ಖರ್ಚು ಮಾಡ್ತಿದ. ಆದ್ರೆ 2016ರಲ್ಲಿ ಇದು 2 ಸಾವಿರಕ್ಕೆ ಬಂದು ನಿಂತಿದೆ.

ನಗರ ಪ್ರದೇಶಗಳಲ್ಲಿ ತಿಂಗಳಿಗೆ 450 ರೂಪಾಯಿ ಮದ್ಯಕ್ಕೆ ಖರ್ಚಾಗುತ್ತಿತ್ತಂತೆ. 2016ರಲ್ಲಿ ಇದು 1400ಕ್ಕೇರಿದೆ. ಆಂಧ್ರಪ್ರದೇಶ, ರಾಜಸ್ತಾನ, ಹರಿಯಾಣ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶಗಳಂತಹ ರಾಜ್ಯಗಳಲ್ಲಿ ಆಲ್ಕೋಹಾಲ್ ಗೆ ಜನರು ಹೆಚ್ಚಿನ ಹಣವನ್ನು ಖರ್ಚು ಮಾಡ್ತಿದ್ದಾರೆ.

ಮಧ್ಯಪ್ರದೇಶದಲ್ಲಿ ಮದ್ಯಪಾನಿಗಳ ಸಂಖ್ಯೆ ಹೆಚ್ಚಿದೆ. ವರ್ಷಕ್ಕೆ ಮದ್ಯದಂಗಡಿ ಮಾಲೀಕರು 2 ಕೋಟಿ 8 ಲಕ್ಷಕ್ಕಿಂತಲೂ ಹೆಚ್ಚು ಲಾಭ ಗಳಿಸುತ್ತಾರಂತೆ. ಮಹಾರಾಷ್ಟ್ರದಲ್ಲಿ ಮದ್ಯದಂಗಡಿ ಮಾಲೀಕರುಗಳಿಗೆ 1 ಕೋಟಿ 20 ಲಕ್ಷ ರೂಪಾಯಿ ಲಾಭವಿದೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...