alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ಮನ ಕಲಕುತ್ತೆ ಈ ಸ್ಟೋರಿ….

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲರೂ ತಮ್ಮ ತಮ್ಮ ಕಾರ್ಯಗಳಲ್ಲಿ ಬ್ಯುಸಿಯಾಗಿರುತ್ತಾರೆ. ಒಂದೇ ಮನೆಯಲ್ಲಿದ್ದರೂ ಪರಸ್ಪರ ಸುಖ, ದುಃಖ ವಿಚಾರಿಸಿಕೊಳ್ಳುವ ವ್ಯವಧಾನವೂ ಇಲ್ಲದಂತಾಗಿದೆ.

ಅದರಲ್ಲೂ ಮನೆಯಲ್ಲಿ ವೃದ್ದರಿದ್ದರೆ ಅವರ ಸೇವೆ ಮಾಡಲು ಸಾಧ್ಯವಾಗದೆಂಬ ಕಾರಣಕ್ಕೆ ಆನೇಕರು ತಮ್ಮ ತಂದೆ-ತಾಯಿಯನ್ನು ವೃದ್ದಾಶ್ರಮಕ್ಕೆ ಸೇರಿಸಿ ತಮ್ಮ ಜವಾಬ್ದಾರಿಯಿಂದ ವಿಮುಖರಾಗುತ್ತಾರೆ.

ಇದರಿಂದ ಆ ವೃದ್ದ ಜೀವಗಳಿಗೆ ಎಷ್ಟು ನೋವಾಗುತ್ತದೆಂಬ ಕಲ್ಪನೆಯೂ ಅಂತವರಿಗಿರುವುದಿಲ್ಲ. ಈಗ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದು ಅಂತವರ ಕಣ್ತೆರೆಸುತ್ತದೆ. ಆನಾರೋಗ್ಯದಿಂದ ಹಾಸಿಗೆ ಹಿಡಿದು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವ ವೃದ್ದರೊಬ್ಬರನ್ನು ಸಂತೋಷವಾಗಿಡಲು ವೃದ್ದ ಮಹಿಳೆ ಸೇರಿದಂತೆ ಆಕೆಯ ಮೊಮ್ಮಕ್ಕಳು ಪಂಜಾಬಿ ಗೀತೆಯೊಂದಕ್ಕೆ ಸ್ಟೆಪ್ ಹಾಕಿದ್ದಾರೆ. ಇವರುಗಳ ನೃತ್ಯವನ್ನು ಕಂಡು ಹಾಸಿಗೆ ಹಿಡಿದಿರುವ ವ್ಯಕ್ತಿಯ ಮುಖದಲ್ಲಿ ಜೀವಕಳೆ ಮೂಡಿದ್ದು, ಇದನ್ನು ನೋಡಿ ಮಹಿಳೆ ಮತ್ತವರ ಮೊಮ್ಮಕ್ಕಳು ಧನ್ಯತಾ ಭಾವ ತಾಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವನ್ನು ಸಹಸ್ರಾರು ಮಂದಿ ಲೈಕ್ ಮಾಡಿರುವುದಲ್ಲದೇ ರೀ ಟ್ವೀಟ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...