alex Certify
ಕನ್ನಡ ದುನಿಯಾ       Mobile App
       

Kannada Duniya

ದೊಡ್ಡ ಕೆಲಸಕ್ಕೆ ಬರುತ್ತೆ ಸಣ್ಣ ಸಣ್ಣ ಟಿಪ್ಸ್

2017_2image_16_31_356587212kitchentips1-ll

ಮನೆ ಸ್ವಚ್ಛವಾಗಿದೆಯೇ ಎಂಬುದನ್ನು ನೋಡಲು ನೀವು ಇಡಿ ಮನೆ ಸುತ್ತುವ ಅಗತ್ಯವಿಲ್ಲ. ಅಡುಗೆ ಮನೆಯೊಂದನ್ನು ನೋಡಿದ್ರೆ ಸಾಕು. ಅಡುಗೆ ಮನೆ ಕ್ಲೀನ್ ಆಗಿದ್ದರೆ ಇಡೀ ಮನೆ ಜೊತೆ ಆರೋಗ್ಯ ಕೂಡ ಚೆನ್ನಾಗಿದೆ ಎಂದರ್ಥ.

ಅಡುಗೆ ಮನೆ ಜೊತೆ ಮನೆಯ ಉಳಿದ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳೊದು ಒಂದು ಸವಾಲಿನ ಕೆಲಸ. ಉದ್ಯೋಗ, ಮನೆ, ಮಕ್ಕಳು ಅಂತಾ ಮಹಿಳೆಯರು ಸುಸ್ತಾಗಿ ಹೋಗ್ತಾರೆ. ಆ ಮಹಿಳೆಯರು ಇಂತ ಸರಳ ಉಪಾಯ ತಿಳಿದುಕೊಂಡ್ರೆ ಅವರ ಕೆಲಸ ಸುಲಭವಾಗಲಿದೆ.

ಅಡುಗೆ ಮನೆಯಲ್ಲಿ ಎಣ್ಣೆ ಅಥವಾ ತುಪ್ಪ ಚೆಲ್ಲಿದ್ದರೆ ಚಿಂತೆ ಬಿಡಿ. ಬಿದ್ದ ಜಾಗಕ್ಕೆ ಬ್ಲೀಚಿಂಗ್ ಪೌಂಡರ್ ಹಾಕಿ. ಬ್ರಶ್ ನಲ್ಲಿ ಕೈಯಾಡಿಸಿ. ನಂತ್ರ ಕ್ಲೀನ್ ಮಾಡಿ.

ನ್ಯೂಡಲ್ಸ್ ಅಥವಾ ಪಾಸ್ತಾ ಬಾಣಲೆಗೆ ಹಿಡಿದುಕೊಂಡಿದ್ದರೆ ಅದಕ್ಕೆ ತಣ್ಣನೆಯ ನೀರು ಹಾಕಿ ಸ್ವಚ್ಛಗೊಳಿಸಿ.

ಮಿಕ್ಸರ್ ಬ್ಲೇಡ ಹರಿತವಾಗಲು ತಿಂಗಳಲ್ಲಿ ಒಂದು ಬಾರಿ ಜಾರ್ ಗೆ ಉಪ್ಪು ಹಾಕಿ ಮಿಕ್ಸಿ ಮಾಡಿ.

ನಿಂಬೆ ಹಣ್ಣು ಒಣಗಿದ್ದರೆ ಇದನ್ನು ಬಳಸುವ ಮೊದಲು ಬಿಸಿ ನೀರಿನಲ್ಲಿ ಐದು ನಿಮಿಷವಿಡಿ.

ನೆಲ ಗಲೀಜಾದಂತೆ ಕಂಡುಬಂದ್ರೆ ನೀರಿಗೆ ಒಂದು ಕಪ್ ವಿನೆಗರ್ ಹಾಕಿ ಕ್ಲೀನ್ ಮಾಡಿ.

ಕಾಳುಗಳನ್ನು ಬೇಯಿಸುವಾಗ ಚಿಟಕಿ ಅರಿಶಿನ ಹಾಗೂ 2 ಹನಿ ಬಾದಾಮಿ ಎಣ್ಣೆಯನ್ನು ಹಾಕಿ ಬೇಯಿಸಿ.

ಮೆಣಸಿನಕಾಯಿ ಡಬ್ಬಕ್ಕೆ ಸ್ವಲ್ಪ ಹಿಂಗು ಹಾಕಿಟ್ಟರೆ ಮೆಣಸು ಬೇಗ ಹಾಳಾಗುವುದಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...