alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಭೋಗದ ಸಮಸ್ಯೆಗೆ ತುಳಸಿ ರಾಮಬಾಣ

tulsi650x325

ಶೀತ-ಕೆಮ್ಮಿಗಾಗಿ ತುಳಸಿ ರಸ ರಾಮಬಾಣ. ಆದ್ರೆ ಲೈಂಗಿಕ ಸಮಸ್ಯೆಗೂ ತುಳಸಿ ಬಹಳ ಉತ್ತಮ. ತುಳಸಿ ಎಲೆಗಿಂತ ತುಳಸಿ ಬೀಜ ಇಲ್ಲಿ ಕೆಲಸಕ್ಕೆ ಬರುತ್ತದೆ.

ತುಳಸಿ ಗಿಡದಲ್ಲಿರುವ ಕಪ್ಪು ಬೀಜವನ್ನು ತೆಗೆದು ಸಂಗ್ರಹಿಸಿಟ್ಟುಕೊಳ್ಳಿ. ಮನೆಯಲ್ಲಿ ತುಳಸಿ ಗಿಡವಿಲ್ಲವೆಂದಾದಲ್ಲಿ ಆಯುರ್ವೇದದ ಅಂಗಡಿ ಹಾಗೂ  ಕಿರಾಣಿ ಅಂಗಡಿಯಲ್ಲಿ ತುಳಸಿ ಬೀಜ ಸಿಗುತ್ತದೆ. ಇದನ್ನು ಮನೆಗೆ ತಂದು ಬೇರೆ ಬೇರೆ ಸಮಸ್ಯೆಗೆ ಬೇರೆ ಬೇರೆ ವಿಧಾನದಲ್ಲಿ ಬೀಜವನ್ನು ಬಳಸಬಹುದು.

ವೀರ್ಯದ ಸಮಸ್ಯೆ ಕಾಡುತ್ತಿರುವವರಿಗೆ ತುಳಸಿ ಬೀಜ ಒಳ್ಳೆಯದು. ಈ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿದಿನ ರಾತ್ರಿ 5 ಗ್ರಾಂ ತುಳಸಿ ಬೀಜವನ್ನು ಬಿಸಿ ಹಾಲಿನ ಜೊತೆ ಸೇವನೆ ಮಾಡಿ. ಹತ್ತು ದಿನಗಳೊಳಗೆ ಪರಿಣಾಮ ಕಾಣುತ್ತೀರಿ.

ನಪುಂಸಕತೆಯನ್ನು ಹೋಗಲಾಡಿಸುವ ಶಕ್ತಿ ಇದಕ್ಕಿದೆ. ಇದು ಲೈಂಗಿಕ ನಿಶ್ಯಕ್ತಿಯನ್ನು ಕಡಿಮೆ ಮಾಡಿ ಶಕ್ತಿ ನೀಡುತ್ತದೆ. 15 ಗ್ರಾಂ ತುಳಸಿ ಬೀಜ ಹಾಗೂ 30 ಗ್ರಾಂ ಬಿಳಿ ಮ್ಯೂಸ್ಲಿಯನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಿ. ಅದಕ್ಕೆ 60 ಗ್ರಾಂ ಸಕ್ಕರೆ ಪುಡಿಯನ್ನು ಸೇರಿಸಿ. ಇದನ್ನು ಒಂದು ಗ್ಲಾಸ್ ಡಬ್ಬದಲ್ಲಿ ಹಾಕಿಡಿ. ಬೆಳಿಗ್ಗೆ ಹಾಗೂ ರಾತ್ರಿ ಆಕಳ ಹಾಲಿನ ಜೊತೆ 5 ಗ್ರಾಂ ಮಿಶ್ರಣವನ್ನು ಸೇವನೆ ಮಾಡಿ.

ಅನಿಯಮಿತ ಮುಟ್ಟಿನ ಸಮಸ್ಯೆಗೂ ತುಳಸಿ ಬೀಜ ಮದ್ದು. ಮುಟ್ಟಿನ ಸಮಯದಲ್ಲಿ ಕಾಡುವ ಹೊಟ್ಟೆ ನೋವನ್ನು ಇದು ಕಡಿಮೆ ಮಾಡುತ್ತದೆ. ಮುಟ್ಟಾದ ದಿನದಿಂದ ಮುಟ್ಟು ಮುಗಿಯುವವರೆಗೆ ಪ್ರತಿದಿನ ಬೆಳಿಗ್ಗೆ ಹಾಗೂ ರಾತ್ರಿ, 5 ಗ್ರಾಂ ತುಳಸಿ ಬೀಜವನ್ನು ಹಾಲು ಅಥವಾ ನೀರಿನಲ್ಲಿ ಸೇವನೆ ಮಾಡುತ್ತ ಬಂದರೆ ಅನಿಯಮಿತ ಮುಟ್ಟು ಸರಿಯಾಗಿ ಹೊಟ್ಟೆ ನೋವು ಕಡಿಮೆಯಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...