alex Certify
ಕನ್ನಡ ದುನಿಯಾ       Mobile App
       

Kannada Duniya

ಇವಳು ನಾರಿಯಲ್ಲ ಹೆಮ್ಮಾರಿ..!

NINTCHDBPICT000272641846ವಾಷಿಂಗ್ಟನ್ ನಲ್ಲಿ ಮಹಿಳೆಯೊಬ್ಬಳು 4 ವರ್ಷದ ಮಾನಸಿಕ ಅಸ್ವಸ್ಥ ಮಗುವನ್ನು ಮನಬಂದಂತೆ ಎಳೆದಾಡಿ, ಮೈಮೇಲೆ ಹತ್ತಿ ಕುಳಿತು ಹಿಂಸಿಸಿದ್ದಾಳೆ. ಮಹಿಳೆಯ ಈ ಕ್ರೂರ ಕೃತ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ಲಿಲ್ಲಿಯನ್ ಡಿ ವೈಟ್ ಎಂಬ ಮಹಿಳೆ 4 ವರ್ಷದ ಮಗು ಲ್ಯೂಕ್ ನ ಕೇರ್ ಟೇಕರ್ ಆಗಿದ್ದಳು. ಜೂನ್ ತಿಂಗಳಿನಿಂದ ಮಗುವಿನ ಆರೈಕೆ ಮಾಡುತ್ತಿದ್ಲು. ಆದ್ರೆ ಕಳೆದ ಕೆಲ ದಿನಗಳಿಂದ ಮಗುವಿನ ವರ್ತನೆಯಲ್ಲಾದ ಬದಲಾವಣೆ ಗಮನಿಸಿದ ತಾಯಿ ಟಿಫಾನಿ ಫೀಲ್ಡ್ಸ್ ಮನೆಯಲ್ಲಿ ಕ್ಯಾಮರಾ ಅಳವಡಿಸಿದ್ದಳು.

ಲಿಲ್ಲಿಯನ್ ಮಗುವಿನ ಕಾಲು ಹಿಡಿದು ಹಿಗ್ಗಾಮುಗ್ಗಾ ಎಳೆದಾಡಿದ್ದಾಳೆ. ಕೋಣೆಯ ತುಂಬೆಲ್ಲಾ ಅವನನ್ನು ದರದರನೆ ಎಳೆದೊಯ್ದಿದ್ದಾಳೆ. ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಲ್ಲದೆ ಆ ಪುಟಾಣಿಯ ಮೈಮೇಲೆ ಈ ಧಡೂತಿ ಮಹಿಳೆ ಹತ್ತಿ ಕುಳಿತಿದ್ದಾಳೆ. ಹೃದಯದ ತೊಂದರೆ ಮತ್ತು ಎಪಿಲೆಪ್ಸಿಯಿಂದ ಬಳಲುತ್ತಿರುವ ಕಂದಮ್ಮ ಅಜ್ಜಿಯ ಹಿಂಸೆ ತಾಳಲಾರದೆ ಕಣ್ಣೀರಿಟ್ಟಿದೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಮಗುವನ್ನು ಹಿಂಸಿಸಿದ ರಕ್ಕಸ ಮಹಿಳೆ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...