alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಕು ಪ್ರಾಣಿಗಳನ್ನು ಪ್ರೀತಿಸಿ, ಆರೋಗ್ಯವಾಗಿರಿ….

pet-love

ನಿಮಗೆ ಮಾನಸಿಕ ಒತ್ತಡ, ಅಸ್ವಸ್ಥತೆಯೇನಾದ್ರೂ ಇದ್ರೆ ಪ್ರಾಣಿಗಳನ್ನು ಬೇಷರತ್ತಾಗಿ ಪ್ರೀತಿಸಿ. ನಿಮ್ಮ ಮನಸ್ಸು ಶಾಂತವಾಗುತ್ತೆ, ಪ್ರಾಣಿ ಪ್ರೀತಿಯೇ ಒಂದು ರೀತಿಯ ಚಿಕಿತ್ಸೆ ಇದ್ದಂತೆ. ದೀರ್ಘಕಾಲದ ಮಾನಸಿಕ ಆರೋಗ್ಯಕ್ಕೆ ಇದು ಮೂಲ ಅನ್ನೋದು ಸಂಶೋಧನೆಯೊಂದರಲ್ಲಿ ಬಯಲಾಗಿದೆ.

ಮ್ಯಾಂಚೆಸ್ಟರ್ ವಿಶ್ವವಿದ್ಯಾನಿಲಯದ ಸಂಶೋಧನೆ ಪ್ರಕಾರ ಸಾಕುಪ್ರಾಣಿಗಳನ್ನು ದೀರ್ಘಕಾಲದ ಮಾನಸಿಕ ಸಮಸ್ಯೆ ನಿರ್ವಹಣೆಯ ಮುಖ್ಯ ಅಂಶವಾಗಿ ಪರಿಗಣಿಸಬೇಕು. ಸಾಕುಪ್ರಾಣಿಗಳು ಅದೆಷ್ಟೋ ಮಂದಿಗೆ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ತೊಂದರೆ ನಿವಾರಿಸಲು ನೆರವಾಗಿವೆ. ಬಿಕ್ಕಟ್ಟಿನ ಸಮಯದಲ್ಲಿ ಕೂಡ ಸಾಕುಪ್ರಾಣಿಗಳು ಅತ್ಯಂತ ಉಪಯುಕ್ತವೆಂದು ಪರಿಗಣಿಸಲಾಗಿದೆ.

18 ವರ್ಷಕ್ಕಿಂತ ಮೇಲ್ಪಟ್ಟವರನ್ನು ಈ ಸಂಬಂಧ ಸಂದರ್ಶನ ಮಾಡಲಾಗಿದೆ. ಅವರೆಲ್ಲ ಗಂಭೀರ ಮಾನಸಿಕ ಸಮಸ್ಯೆಯಿಂದ ಬಳಲಿ, ಚಿಕಿತ್ಸೆ ಪಡೆಯುತ್ತಿರುವವರು. ಅವರ ಸ್ನೇಹಿತರು, ಕುಟುಂಬದವರು, ವೈದ್ಯರು, ಹವ್ಯಾಸಗಳು, ಸ್ಥಳ, ಚಟುವಟಿಕೆ ಹೀಗೆ ಎಲ್ಲದಕ್ಕೂ ಅಂಕ ನೀಡುವಂತೆ ಸೂಚಿಸಲಾಗಿತ್ತು. ಅವರಲ್ಲಿ ಶೇ.60ರಷ್ಟು ಮಂದಿ ಸಾಕುಪ್ರಾಣಿಗಳಿಗೆ ಅತ್ಯಧಿಕ ಅಂಕ ನೀಡಿದ್ದಾರೆ. ಶೇ.20 ರಷ್ಟು ಮಂದಿ ಸಾಕುಪ್ರಾಣಿಗಳಿಗೆ ಎರಡನೇ ಸ್ಥಾನ ನೀಡಿದ್ದಾರೆ.

ಆತ್ಮಹತ್ಯೆಯ ಆಲೋಚನೆ, ಮನಸ್ಸಿನ ಬೇಸರ ಮತ್ತು ಅಸ್ವಸ್ಥತೆಯ ಸಂಕೇತಗಳನ್ನು ಸಾಕುಪ್ರಾಣಿಗಳು ದೂರ ಮಾಡಿರುವುದಾಗಿ ತಿಳಿಸಿದ್ದಾರೆ. ಸಾಕುಪ್ರಾಣಿಗಳನ್ನು ಪ್ರೀತಿಸುವುದರಿಂದ ಮಾನಸಿಕ ಆರೋಗ್ಯ ವೃದ್ಧಿಸಿಕೊಳ್ಳಬಹುದು ಅನ್ನೋದು ಸಂಶೋಧನೆಯಿಂದಲೇ ದೃಢಪಟ್ಟಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...