alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಅವಳಿ ಸಹೋದರಿಯರದ್ದು ವಿಚಿತ್ರ ಬಯಕೆ !

lusi

ಅವಳಿ ಮಕ್ಕಳೆಂದ ಮೇಲೆ ಸಾಮಾನ್ಯವಾಗಿ ಒಂದೇ ರೀತಿ ಇರುತ್ತಾರೆ. ಅವರ ವೇಷಭೂಷಣವೂ ಒಂದೇ ರೀತಿಯಾಗಿರುತ್ತದೆ. ಎಲ್ಲೊ ಅಪರೂಪದ ಪ್ರಕರಣದಲ್ಲಿ ದೊಡ್ಡವರಾದ ನಂತರ ಅವರ ಅಭಿರುಚಿಗಳಲ್ಲಿ ಬದಲಾಗಬಹುದು.

ಆದರೆ, ಇಲ್ಲಿನ ಅವಳಿ ಸಹೋದರಿಯರು, ಜೊತೆಗೆ ಜನಿಸಿ, ಜೊತೆಗೇ ಬೆಳೆದು, ಒಂದೇ ರೀತಿಯ ಬಟ್ಟೆ ಹಾಕಿಕೊಂಡು ಗಮನ ಸೆಳೆದಿದ್ದಲ್ಲದೇ, ಇದೀಗ ಮದುವೆ ವಯಸ್ಸಿಗೆ ಬಂದ ನಂತರವೂ ಅವರ ಅಭಿರುಚಿ ಬದಲಾಗಿಲ್ಲ. ಇಬ್ಬರೂ ತಾವು ಒಂದೇ ಸಮಯಕ್ಕೆ ಗರ್ಭ ಧರಿಸಬೇಕು. ಅಲ್ಲದೇ, ತಮ್ಮ ಮಕ್ಕಳಿಗೆ ಅಪ್ಪ ಒಬ್ಬನೇ ಇರಬೇಕು ಎಂಬ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ಅನ್ನಾ ಹಾಗೂ ಲೂಸಿ ಎಂಬ ಅವಳಿ ಸಹೋದರಿಯರು ವಯಸ್ಸಿಗೆ ಬಂದ ನಂತರವೂ ಒಂದೇ ರೀತಿಯ ಅಭಿರುಚಿ ಹೊಂದಿದ್ದಾರೆ.

ಅವಳಿಯಾಗಿದ್ದರೂ ಮೊದಲಿಗೆ ನೋಡಲು ಬೇರೆ ರೀತಿ ಇದ್ದ ಕಾರಣ ಇವರು, ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ. ಇಬ್ಬರಿಗೂ ಬೇರೆ ಬೇರೆ ಬಾಯ್ ಫ್ರೆಂಡ್ ಇದ್ದರಾದರೂ, ಅವರಿಂದ ದೂರವಾಗಿ ಬೆನ್ ಬೈರ್ನ್ ಎಂಬ ಯುವಕನನ್ನು ಫ್ರೆಂಡ್ ಮಾಡಿಕೊಂಡಿದ್ದಾರೆ. ರಿಯಾಲಿಟಿ ಶೋ ಒಂದರಲ್ಲಿ ಭಾಗವಹಿಸಿದ್ದ ಇವರು, ಅಲ್ಲಿ ತಮ್ಮ ಬಯಕೆ ಹೇಳಿಕೊಂಡಿದ್ದು, ತಾವು ಒಟ್ಟಿಗೆ ಗರ್ಭ ಧರಿಸಬೇಕು. ಮಕ್ಕಳಿಗೆ ಅಪ್ಪ ಒಬ್ಬನೇ ಇರಬೇಕೆಂದು ಆಶಯ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...