alex Certify
ಕನ್ನಡ ದುನಿಯಾ       Mobile App
       

Kannada Duniya

ಇವನ ‘ತಲೆ’ಯೇ ಎಲ್ಲರ ತಲೆ ಕೆಡಿಸಿತ್ತು !!

hqdefault (1)

ಎಡ್ವರ್ಡ್ ಮೊರ್ಡೇಕ್ 19ನೇ ಶತಮಾನದಲ್ಲಿ ಇಂಗ್ಲೆಂಡಿನಲ್ಲಿ ಹುಟ್ಟಿದವನು. ಇವನು ಎಲ್ಲರಂತೆ ಮಾತನಾಡುತ್ತಿದ್ದ. ಎಲ್ಲರ ಜೊತೆ ಬೆರೆಯುತ್ತಿದ್ದ. ಆದರೆ ಇವನನ್ನು ಕಂಡರೆ ಜನ ಹೆದರುತ್ತಿದ್ದರು.

ಅಕ್ಕ ಪಕ್ಕದವರು, ಮಕ್ಕಳು ಕೂಡ ಇವನನ್ನು ಕಂಡರೆ ಹೆದರುತ್ತಿದ್ದರು. ಏಕೆಂದರೆ ಇವನಿಗೆ ಎರಡು ಮುಖವಿತ್ತು. ಮೊರ್ಡೇಕ್ ತಲೆಯ ಹಿಂಬದಿಯಲ್ಲಿ ಇನ್ನೊಂದು ಮುಖವನ್ನು ಹೊಂದಿದ್ದ. ಜನ ಇವನನ್ನು ‘ಈವಿಲ್ ಟ್ವಿನ್’ ಎಂದೇ ಕರೆಯುತ್ತಿದ್ದರು.

ಆಶ್ಚರ್ಯವೇನೆಂದರೆ ಮುಂದಿನ ಮುಖಕ್ಕೆ ಕೂಡ ಕಣ್ಣು, ಮೂಗು, ಬಾಯಿ ಎಲ್ಲವೂ ಇತ್ತು. ಮುಂದಿನ ಮುಖ ನಗು ಚೆಲ್ಲಿದರೆ ಹಿಂದಿನ ಮುಖ ಕೂಡ ನಗುತ್ತಿತ್ತು. ಆದರೆ ಮಾತನಾಡುತ್ತಿರಲಿಲ್ಲ.

ನೋಡುವವರ ಕಣ್ಣಿಗೆ ಎಡ್ವರ್ಡ್ ವಿಚಿತ್ರವಾಗಿ ಕಂಡರೂ ಅವನು ಈ ಮುಖದಿಂದ ತುಂಬ ತೊಂದರೆ ಅನುಭವಿಸಿದ್ದ. ಚಿಕಿತ್ಸೆಗೆಂದು ವೈದ್ಯರ ಬಳಿ ಹೋದರೂ ವೈದ್ಯರು ಕೈಚೆಲ್ಲಿ ಕುಳಿತರು. ಇದರಿಂದ ಬೇಸತ್ತ ಎಡ್ವರ್ಡ್ ಮೊರ್ಡೇಕ್ 23 ನೇ ವಯಸ್ಸಿನಲ್ಲೇ ಆತ್ಮಹತ್ಯೆ ಮಾಡಿಕೊಂಡ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...