alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ನೋಡಿ ವಿಶ್ವದ ಅತಿ ವೇಗದ 10 ಬೈಕ್ ಗಳ ಪಟ್ಟಿ

fat-bob-fxdfse-cvo

ಇಂದಿನ ಯುವ ಜನತೆಗೆ ಕಾರ್ ಗಿಂತ ಬೈಕ್ ಗಳ ಮೇಲೆಯೇ ಕ್ರೇಜ್ ಜಾಸ್ತಿ. ಅದರಲ್ಲೂ ವಿನೂತನ ವಿನ್ಯಾಸದ ಅತಿ ವೇಗದ ಬೈಕ್ ಗಳೆಂದರೆ ಪಂಚಪ್ರಾಣ. ಆದರೆ ಈ ಬೈಕ್ ಗಳ ಬೆಲೆ ಸಾಮಾನ್ಯ ಜನರಿಗೆ ಕೈಗೆಟುಕುವಂತದ್ದಲ್ಲ. ಬರೀ ನೋಡಿ, ಕೇಳಿ ತೃಪ್ತಿಕೊಳ್ಳಬೇಕಷ್ಟೇ.

ವೇಗದ ಬೈಕ್ ಕ್ರೇಜ್ ಬಾಲಿವುಡ್ ಹಾಗೂ ಸ್ಯಾಂಡಲ್ ವುಡ್ ನಟರಿಗೂ ಇದೇ. ಹಲವು ನಟರು ದುಬಾರಿ ಬೆಲೆಯ ಬೈಕ್ ಗಳನ್ನು ಹೊಂದಿದ್ದಾರೆ. ಕ್ರಿಕೆಟ್ ಆಟಗಾರರೂ ವೇಗದ ಬೈಕ್ ಗಳ ವ್ಯಾಮೋಹದಿಂದ ಹೊರತಾಗಿಲ್ಲ. ಈ ವಿಚಾರದಲ್ಲಿ ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಒಂದು ಕೈ ಹೆಚ್ಚು ಎಂದೇ ಹೇಳಬಹುದು. ಅವರ ಬಳಿ ದುಬಾರಿ ಬೆಲೆಯ ಹಲವಾರು ಬೈಕ್ ಗಳಿವೆ.

ವಿಶ್ವದ ಅತಿ ವೇಗದ 10 ಬೈಕ್ ಗಳ ಪಟ್ಟಿ ಇಂತಿದೆ ನೋಡಿ.1) ಡುಕೇತಿ 1098 ಎಸ್, ಟಾಪ್ ಸ್ಪೀಡ್: 169 ಎಂಪಿಹೆಚ್, 2) ಬಿಎಂಡಬ್ಲು ಕೆ 1200ಎಸ್, ಟಾಪ್ ಸ್ಪೀಡ್: 174 ಎಂಪಿಹೆಚ್, 3) ಅಪ್ರಿಲ್ಲಾ ಆರ್ ಎಸ್ ವಿ 1000ಆರ್ ಮಿಲೇ, ಟಾಪ್ ಸ್ಪೀಡ್: 175 ಎಂಪಿಹೆಚ್, 4) ಎಂವಿ ಅಗುಸ್ತಾ ಎಫ್4 1000ಆರ್, ಟಾಪ್ ಸ್ಪೀಡ್: 176 ಎಂಪಿಹೆಚ್, 5) ಯಮಹಾ ವೈಝಡ್ಎಫ್ ಆರ್1, ಟಾಪ್ ಸ್ಪೀಡ್: 186 ಎಂಪಿಹೆಚ್, 6) ಕವಾಸಕಿ ನಿಂಜಾ ಝಡ್ಎಕ್ಸ್ 14ಆರ್, ಟಾಪ್ ಸ್ಪೀಡ್: 186 ಎಂಪಿಹೆಚ್, 7) ಹೋಂಡಾ ಸಿಬಿಆರ್1 100ಎಕ್ಸ್ಎಕ್ಸ್ ಬ್ಲಾಕ್ ಬರ್ಡ್, ಟಾಪ್ ಸ್ಪೀಡ್: 190 ಎಂಪಿಹೆಚ್, 8) ಲೈಟ್ನಿಂಗ್ ಎಲ್ಎಸ್-218, ಟಾಪ್ ಸ್ಪೀಡ್: 218 ಎಂಪಿಹೆಚ್, 9) ಎಂಟಿಟಿ ಟರ್ಬೈನ್ ಸೂಪರ್ ಬೈಕ್ ವೈ2ಕೆ, ಟಾಪ್ ಸ್ಪೀಡ್: 227 ಎಂಪಿಹೆಚ್, 10) ಸುಝುಕಿ ಹಯಬುಸಾ, ಟಾಪ್ ಸ್ಪೀಡ್: 248 ಎಂಪಿಹೆಚ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...