alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಪಂಚದ ಅತ್ಯಂತ ಚಿಕ್ಕ ಪ್ರಾಣಿಗಳು

top-10-smallest-animals-in-the-world 3344ಪ್ರಾಣಿ ಪ್ರಪಂಚ ದೊಡ್ದದು. ಭೂಮಿಯ ಮೇಲೆ ಅದೆಷ್ಟು ಜಾತಿಯ ಪಕ್ಷಿ, ಪ್ರಾಣಿ, ಕ್ರಿಮಿಕೀಟಗಳಿವೆ ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಕೆಲವು ಗಾತ್ರದಲ್ಲಿ ದೊಡ್ಡದಾದರೆ ಇನ್ನೂ ಕೆಲವು ಕಣ್ಣಿಗೆ ಕಾಣಿಸದಷ್ಟು ಚಿಕ್ಕ ಸಂಕುಲಗಳು ಇರುತ್ತವೆ. ಅಂತಹ ಕೆಲವು ಅಪರೂಪದ ಚಿಕ್ಕ ಜೀವಿಗಳ ಪರಿಚಯ ಇಲ್ಲಿದೆ.

ಅಮೆರಿಕದಲ್ಲಿ ಜನಿಸಿದ ಜಗತ್ತಿನ ಅತೀ ಚಿಕ್ಕ ಕುದುರೆ ಕೇವಲ 17 ಇಂಚು (43.18 ಸೆಂ.ಮೀ) ಇದೆ. ಪೌಲ್ ಮತ್ತು ಕೇಯ್ ಗೋಸ್ಲಿಂಗ್ ತಳಿಯಿಂದ ಇದರ ಜನನವಾಗಿದೆ.

ಯುಎಸ್ ನ ಮೆಸಾಚ್ಯುಸೆಟ್ಸ್ ನಗರದ ಚಾರ್ಲ್ ಟನ್ ನಲ್ಲಿರುವ chihuahua ಪ್ರಜಾತಿಯ ನಾಯಿ ಕೇವಲ 4.9 ಇಂಚು ಎತ್ತರವಿದೆ. ಎತ್ತರದಲ್ಲಿ ಅತೀ ಚಿಕ್ಕ ನಾಯಿಯಾಗಿರುವ ಇದು ಗಿನ್ನಿಸ್ ದಾಖಲೆಗೆ ಸೇರಿದೆ.

ಯುಎಸ್ ನ ಸೆಂಟ್ರಲ್ ಇಲಿನಾಯ್ಸ್ ನಲ್ಲಿ ಪಿಬೆಲ್ಸ್ ಹೆಸರಿನ ಬೆಕ್ಕಿದೆ. ಇದು ಕೇವಲ 15.5 ಸೆಂ.ಮೀ ಇದೆ. ಇದು ಎಷ್ಟು ಚಿಕ್ಕದಾಗಿದೆಯೆಂದರೆ ಇದನ್ನು ಒಂದು ಗ್ಲಾಸ್ ನಲ್ಲಿ ಕೂರಿಸಬಹುದು.

2006 ರಲ್ಲಿ ನಡೆದ ಜಗತ್ತಿನ ಅತೀ ಚಿಕ್ಕ ಮೀನಿನ ಅನ್ವೇಷಣೆಯಲ್ಲಿ ಕೇವಲ 0.3 (7.9 ಮಿ.ಮೀ)ಇಂಚಿನಷ್ಟಿರುವ ಮೀನು ಇಂಡೋನೇಶ್ಯಾದ ಸುಮಾರ್ತಾ ದ್ವೀಪದಲ್ಲಿ ದೊರಕಿದೆ. ಇದು paedocypris progenetica ಪ್ರಜಾತಿಯ ಕಾರ್ಪ್ ಜಾತಿಗೆ ಸೇರಿದ ಮೀನಾಗಿದೆ.

ಇಲಿಯ ಹಾಗೇ ಕಾಣಿಸುವ ಹ್ಯಾಮ್ಸಟರ್ ನ ಹೆಸರು ಪೀವೀ. ಕೇವಲ 2.5 ಸೆ.ಮೀ ನಷ್ಟಿರುವ ಇದು ಜಗತ್ತಿನಲ್ಲೇ ಅತೀ ಚಿಕ್ಕ ಹ್ಯಾಮ್ಸಟರ್ ಆಗಿದೆ.

10.1 ಸೆಂ.ಮೀ ಇರುವ Leptotyphlops carlae ಹಾವು ಜಗತ್ತಿನ ಅತೀ ಚಿಕ್ಕ ಹಾವಾಗಿದೆ. ಈ ಜಾತಿಯ ಹಾವುಗಳು ಕೆರೇಬಿಯನ್ ನ ಬಾರ್ಬಾಡೋಸ್ ದ್ವೀಪದಲ್ಲಿ ಕಾಣಸಿಗುತ್ತವೆ.

Brookesia Minima ಎಂಬ ಊಸರವಳ್ಳಿ ಕೇವಲ 1.2 ಸೆಂ.ಮೀ ಇದೆ. ಇವು ಆಫ್ರಿಕಾದಲ್ಲಿ ಕಂಡುಬರುತ್ತವೆ.

ಜಗತ್ತಿನ ಅತೀ ಚಿಕ್ಕ ಗಾತ್ರದ ಹಲ್ಲಿ Sphaerodactylus ariasae ಕೇವಲ 16 ಮಿ.ಮೀ. ಇದೆ.

ಪ್ರಶಾಂತ ಮಹಾಸಾಗರದಲ್ಲಿ ಕಾಣಸಿಗುವ ಸಮುದ್ರ ಕುದುರೆ ಕೇವಲ 16 ಮಿ.ಮೀ. ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...