alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆ ಜೀವನ ಹಾಳು ಮಾಡ್ತು ಅತಿಯಾದ ಸೆಕ್ಸ್…!

ಸೆಕ್ಸ್ ಜೀವನದ ಒಂದು ಭಾಗ. ಸೆಕ್ಸ್ ನಲ್ಲಿ ನಿರಾಸಕ್ತಿ ಅಥವಾ ಸಂಗಾತಿಯ ಅಸಂತುಷ್ಟಿ ಸಾಮಾನ್ಯವಾಗಿ ದಾಂಪತ್ಯದ ಬಿರುಕಿಗೆ ಕಾರಣವಾಗುತ್ತದೆ. ಆದ್ರೆ ಸೆಕ್ಸ್ ಅತಿಯಾದ್ರೆ ಕೂಡ ದಾಂಪತ್ಯ ಹಾಳಾಗುತ್ತದೆ. ಇದಕ್ಕೆ ಈ ಮಹಿಳೆ ಉತ್ತಮ ನಿದರ್ಶನ.

ಈ ಮಹಿಳೆ ವಿಚ್ಛೇದನಕ್ಕೆ ಅತಿಯಾದ ಸೆಕ್ಸ್ ಕಾರಣವಾಗಿದೆ. ಮದುವೆ ಮೊದಲ ದಿನ ಚೆನ್ನಾಗಿದ್ದ ಮಹಿಳೆ ಮೂರು ತಿಂಗಳಾಗ್ತಿದ್ದಂತೆ ಪತಿಯ ವರ್ತನೆಯನ್ನು ಅರಿತಿದ್ದಳಂತೆ. ಈಕೆ ಪತಿಗೆ ಎಷ್ಟು ಬಾರಿ ಸಂಭೋಗ ನಡೆಸಿದ್ರೂ ಸಂತುಷ್ಟಿ ಸಿಗ್ತಿರಲಿಲ್ಲವಂತೆ.

ದಿನಕ್ಕೆ ಒಮ್ಮೆ ಸಂಬಂಧ ಬೆಳೆಸುತ್ತಿದ್ದ ಪತಿ ದಿನಕ್ಕೆ ಮೂರು ಬಾರಿ ಸಂಬಂಧ ಬೆಳೆಸಲು ಶುರು ಮಾಡಿದ್ನಂತೆ. ದಿನ ಕಳೆದಂತೆ ನಿದ್ರೆಯಿಲ್ಲದೆ ಒತ್ತಡಕ್ಕೆ ಒಳಗಾದ ಮಹಿಳೆ ಪತಿ ಮುಂದೆ ತನ್ನ ನೋವನ್ನು ಹೇಳಿಕೊಂಡಳಂತೆ. ಆರಂಭದಲ್ಲಿ ದಿನಕ್ಕೊಮ್ಮೆ ಎಂದಿದ್ದ ಪತಿ ಫೋನ್ ನಲ್ಲಿ, ವೆಬ್ ಕ್ಯಾಮ್ ನಲ್ಲಿ ಸೆಕ್ಸ್ ಮಾಡುವ ಆಸೆ ವ್ಯಕ್ತಪಡಿಸಿದ್ದನಂತೆ. ಇದಕ್ಕೆ ಮಹಿಳೆ ಒಪ್ಪದೆ ಹೋದಾಗ ಬಲವಂತಪಡಿಸಿದ್ದನಂತೆ.

ಮರು ದಿನ ಪತ್ನಿ ಕ್ಷಮೆ ಕೇಳಿದ್ದ ಪತಿ, ತನ್ನ ಹಳೆ ಗರ್ಲ್ ಫ್ರೆಂಡ್ ನನ್ನನ್ನು ಬಿಟ್ಟು ಹೋಗಲು ಇದೇ ಕಾರಣ. ನನ್ನನ್ನು ಸಂತುಷ್ಟಿಗೊಳಿಸಲು ಯಾರಿಂದಲೂ ಸಾಧ್ಯವಿಲ್ಲವೆಂದಿದ್ದನಂತೆ. ಪತಿ ವರ್ತನೆಗೆ ಬೇಸತ್ತ ಪತ್ನಿ ಎರಡು ವರ್ಷಗಳ ನಂತ್ರ ವಿಚ್ಛೇದನದ ನಿರ್ಧಾರ ಕೈಗೊಂಡಳಂತೆ. ಸಂಬಂಧ ಕಾಪಾಡಿಕೊಳ್ಳಲು ಪ್ರೀತಿಯೊಂದೇ ಅಲ್ಲ ಲೈಂಗಿಕ ಹೊಂದಾಣಿಕೆ ಬೇಕು ಎನ್ನುತ್ತಾಳೆ ಮಹಿಳೆ.

 

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...