alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ಲಾಸ್ಟಿಕ್ ಹಾವಳಿಯಿಂದ ಹಸುಗಳ ಮಾರಣಹೋಮ

cow

ಹೈದ್ರಾಬಾದ್ ನಲ್ಲಿ ಪ್ರತಿದಿನ 4,500 ಟನ್ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯಾಗ್ತಿದೆ. ಅದರಲ್ಲಿ 2500 ಮೆಟ್ರಿಕ್ ಟನ್ ನಷ್ಟು ಪ್ಲಾಸ್ಟಿಕ್ ಕವರ್ ಮತ್ತು ಬಾಟಲಿಗಳೇ ಇರುತ್ತವೆ. ನಿಯಮದ ಪ್ರಕಾರ ಪುರಸಭೆ ಅಧಿಕಾರಿಗಳು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಜಾರಿ ಮಾಡಬೇಕು. ಆದ್ರೆ ಆ ಕಾನೂನು ಕೇವಲ ಕಾಗದಕ್ಕೆ ಸೀಮಿತವಾಗಿದೆ.

ಪ್ಲಾಸ್ಟಿಕ್ ಕಸದಿಂದಾಗಿ ಚರಂಡಿಗಳು ಕೂಡ ಕಟ್ಟಿಕೊಂಡಿವೆ. ಮಳೆಯ ಹೊಡೆತಕ್ಕೆ ಚರಂಡಿ ತುಂಬಿ ರಸ್ತೆ ಮೇಲೆಲ್ಲಾ ಕೊಳಚೆ ನೀರು ನುಗ್ಗಿ ಗಬ್ಬೆದ್ದು ಹೋಗಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದ ಮಾಹಿತಿ ಪ್ರಕಾರ ಭಾರತದ 60 ನಗರಗಳಲ್ಲಿ ಪ್ರತಿದಿನ 15,342 ಟನ್ ಪ್ಲಾಸ್ಟಿಕ್ ಉತ್ಪಾದನೆಯಾಗ್ತಿದೆ. ಅವುಗಳಲ್ಲಿ 6000 ಟನ್ ನಷ್ಟು ಪ್ಲಾಸ್ಟಿಕ್ ಸಂಗ್ರಹಣೆಯಾಗದೇ ಎಲ್ಲೆಂದರಲ್ಲಿ ಬಿದ್ದುಕೊಂಡಿರುತ್ತದೆ.

ಈ ಪ್ಲಾಸ್ಟಿಕ್ ಸಮಸ್ಯೆಗೆ ಹಸುಗಳು ಬಲಿಪಶುವಾಗುತ್ತಿವೆ. ಪ್ಲಾಸ್ಟಿಕ್ ಕವರ್ ಗಳಲ್ಲಿರುವ ಅಳಿದುಳಿದ ಆಹಾರ ತಿನ್ನಲು ಹೋಗಿ ಇಡೀ ಬ್ಯಾಗನ್ನೇ ಹಸುಗಳು ನುಂಗಿಬಿಡುತ್ತಿವೆ. ಇದರಿಂದ ಸಾವಿರಾರು ಹಸುಗಳ ಸಾವು ಸಂಭವಿಸ್ತಾ ಇದೆ. ಕಾಗೆಗಳಿಗೂ ಕೂಡ ಪ್ಲಾಸ್ಟಿಕ್ ಮಾರಕವಾಗಿದೆ. ಪ್ರತಿದಿನ 100 ಮಿಲಿಯನ್ ಪ್ಲಾಸ್ಟಿಕ್ ಬಾಟಲಿಗಳು ಸಮುದ್ರ ಸೇರುತ್ತಿವೆ.

ಇಂಡೋನೇಷ್ಯಾದಂತಹ ಪುಟ್ಟ ಪುಟ್ಟ ರಾಷ್ಟ್ರಗಳು ಕೂಡ ಪ್ಲಾಸ್ಟಿಕ್ ಹಾವಳಿ ತಡೆಯಲು ಕಠಿಣ ಕ್ರಮ ಕೈಗೊಂಡಿವೆ. ಆದ್ರೆ ಭಾರತದಲ್ಲಿ ಮಾತ್ರ ತಿನ್ನೋ ಆಹಾರ ಕೂಡ ಈಗ ಪ್ಲಾಸ್ಟಿಕ್ ಮಯವಾಗ್ತಿದೆ. ಇನ್ನಾದ್ರೂ ಸರ್ಕಾರ ಎಚ್ಚೆತ್ತುಕೊಂಡು ಪ್ಲಾಸ್ಟಿಕ್ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿ ಮಾಡಿದ್ರೆ ಮಾತ್ರ ಪರಿಸರವನ್ನು ಉಳಿಸಿಕೊಳ್ಳಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...