alex Certify
ಕನ್ನಡ ದುನಿಯಾ       Mobile App
       

Kannada Duniya

50 ದೇಶಗಳ ರಾಜಧಾನಿ ಹೆಸರನ್ನು ಪಟಪಟನೆ ಹೇಳುವ ಪುಟಾಣಿ

toddler

ಮಕ್ಕಳ ಚುರುಕುತನ, ಬುದ್ಧಿವಂತಿಕೆಗೆ ಸರಿಸಾಟಿಯೇ ಇಲ್ಲ. 17 ತಿಂಗಳ ಪುಟ್ಟ ಮಗುವಿನ ನೆನಪಿನ ಶಕ್ತಿ ನೋಡಿ ಎಲ್ಲರೂ ಅಚ್ಚರಿಪಡ್ತಿದ್ದಾರೆ. ಈ ಪುಟಾಣಿಯ ಹೆಸರು ಆನವ್ ಜಯ್ಕರ್. ಈತ 50 ದೇಶಗಳ ರಾಜಧಾನಿಯ ಹೆಸರನ್ನು ಪಟಪಟನೆ ಹೇಳ್ತಾನೆ.

ಜೆಕ್ ಗಣರಾಜ್ಯ, ಇರಾನ್, ಪೋರ್ಚುಗಲ್, ಜೋರ್ಡನ್ ಹೀಗೆ ಯಾವ ರಾಷ್ಟ್ರದ ಹೆಸರು ಹೇಳಿದ್ರೂ ಅದರ ರಾಜಧಾನಿಯ ಹೆಸರನ್ನು ಥಟ್ಟಂತ ಹೇಳಿಬಿಡ್ತಾನೆ. ಆದ್ರೆ ಮಗುವಿಗೆ ಇನ್ನೂ 17 ತಿಂಗಳಾಗಿರೋದ್ರಿಂದ ಮಾತು ಅಷ್ಟೊಂದು ಸ್ಪಷ್ಟವಾಗಿಲ್ಲ, ಕೆಲವೊಂದು ಹೆಸರುಗಳು ಕೇಳುಗರಿಗೆ ಅರ್ಥವಾಗುವಂತಿಲ್ಲ.

ಆದ್ರೆ ಈ ಪುಟ್ಟ ಪೋರನಲ್ಲಿರುವ ಆತ್ಮವಿಶ್ವಾಸ ಹಾಗೂ ಅಗಾಧ ನೆನಪಿನ ಶಕ್ತಿಯನ್ನು ಮೆಚ್ಚಲೇಬೇಕು. ಈ ವಿಡಿಯೋ ವೈರಲ್ ಆಗಿದ್ದು, 65,000 ಕ್ಕೂ ಅಧಿಕ ಮಂದಿ ಇದನ್ನು ವೀಕ್ಷಿಸಿದ್ದಾರೆ. 1300 ಲೈಕ್ಸ್ ಬಂದಿದ್ದು, 773 ಜನರು ಶೇರ್ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...