alex Certify
ಕನ್ನಡ ದುನಿಯಾ       Mobile App
       

Kannada Duniya

ಪುಟ್ಟ ಮಗುವನ್ನು ವಾಶ್ ಬೇಸಿನ್ ನಲ್ಲಿಟ್ಟು ನೀರು ಬಿಡುತ್ತಿದ್ದುದ್ದೇಕೆ ?

kid 44553ಮೂರು ತಿಂಗಳು ಮಗು ಈಸಾಳನ್ನು ಅವಳ ಅಮ್ಮ ವಾಶ್ ಬೇಸಿನ್ ನಲ್ಲಿ ಮಲಗಿಸಿ ಗಂಟೆಗಟ್ಟಲೆ ನೀರಿನ ಶವರ್ ನೀಡುತ್ತಿದ್ದಳು. ಆಕೆ ಹೀಗೆ ಮಾಡಲು ಕಾರಣ ಈಸಾಳಿಗಿದ್ದ ಎಗ್ಸಿಮಾ ಖಾಯಿಲೆ.

ಈಸಾಳಿಗೆ ಸುಗಂಧ ದೃವ್ಯಗಳ ಪರಿಮಳವೇ ವರ್ಜ್ಯ. ಸುಗಂಧ ದೃವ್ಯಗಳ ವಾಸನೆ ಬಂದರೂ ಸಾಕು ಮೈಯಲ್ಲಿ ತುರಿಕೆ ಆರಂಭವಾಗುತ್ತಿತ್ತು. ಅಷ್ಟೇ ಅಲ್ಲ ಇನ್ನೊಬ್ಬರ ಮೈ ತಾಕಿದರೂ ಮೈಮೇಲೆ ಕೆಂಪನೆಯ ಗುಳ್ಳೆಗಳೆದ್ದು ಅವುಗಳಿಂದ ರಕ್ತ ಹೊರಬರುತ್ತಿತ್ತು. ಇವಳು ಮೈಯನ್ನು ತುರಿಸಿಕೊಳ್ಳಬಾರದೆಂಬ ಕಾರಣಕ್ಕೆ ಇವಳ ಕೈಯನ್ನು ಕಟ್ಟಿಹಾಕುವ ಪರಿಸ್ಥಿತಿ ಕೂಡ ಎದುರಾಗಿತ್ತು.

ಈಸಾಳ ಮೈಮೇಲೆ ಸತತವಾಗಿ ನೀರು ಬೀಳುತ್ತಿದ್ದರೆ ಅವಳಿಗೆ ತುರಿಕೆಯಾಗುವುದಿಲ್ಲ. ಹಾಗಾಗಿ ಅವಳನ್ನು ವಾಶ್ ಬೇಸಿನ್ ನಲ್ಲಿ ಮಲಗಿಸಿ ನೀರು ಬಿಡಲಾಗುತ್ತಿತ್ತು. ಈಸಾಳ ಈ ಚರ್ಮವ್ಯಾಧಿಯಿಂದಾಗಿ ಅವಳಿಗೆ ತಾಯಿಯ ಎದೆ ಹಾಲಾಗಲೀ, ತಂದೆ- ತಾಯಿಯ ಸ್ಪರ್ಶವಾಗಲೀ ಇವ್ಯಾವುದೂ ಸಿಕ್ಕಿರಲಿಲ್ಲ. ಸತತ ಒಂದು ವರ್ಷಗಳ ಕಾಲ ತುರಿಕೆಯ ಉರಿಯನ್ನು ಅನುಭವಿಸಿದ ಈಸಾ ಈಗ ಗುಣಮುಖಳಾಗಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...