alex Certify
ಕನ್ನಡ ದುನಿಯಾ       Mobile App
       

Kannada Duniya

ಚಹಾ ಮಾರಿ ಬದುಕ್ತಿದ್ದಾಳೆ ಚಿನ್ನದ ಪದಕ ವಿಜೇತೆ…!

ನಾಲ್ಕು ಚಿನ್ನದ ಪದಕ ವಿಜೇತ ತಮಿಳುನಾಡಿನ ಅಥ್ಲೀಟ್ ಒಬ್ಬರು ಈಗ ಚಹಾ ಮಾರಿ ಬದುಕು ಸಾಗಿಸುತ್ತಿದ್ದಾರೆ. 45 ವರ್ಷದ ಕಲೈಮಣಿ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.

4 ಚಿನ್ನದ ಪದಕಗಳನ್ನು ಸಹ ಗೆದ್ದಿದ್ದಾರೆ. ಆದ್ರೆ ಈ ಪ್ರತಿಭಾವಂತ ಕ್ರೀಡಾಪಟುವಿಗೆ ಸರ್ಕಾರದಿಂದ ಯಾವುದೇ ರೀತಿಯ ಪ್ರೋತ್ಸಾಹ ಅಥವಾ ಸಹಾಯ ದೊರೆತಿಲ್ಲ. ಮೂವರು ಮಕ್ಕಳ ತುಂಬು ಕುಟುಂಬವನ್ನು ಮುನ್ನಡೆಸಲು ಕಲೈಮಣಿ ಚಹಾ ಮಾರುತ್ತಾರೆ.

ದಿನಕ್ಕೆ 400-500 ರೂಪಾಯಿ ಸಂಪಾದಿಸುತ್ತಾರೆ. ಕೆಲಸದ ಒತ್ತಡದ ನಡುವೆಯೂ ಆಕೆ ಅಭ್ಯಾಸವನ್ನು ಕೈಬಿಟ್ಟಿಲ್ಲ. ಪ್ರತಿನಿತ್ಯ 21 ಕಿಮೀ ಓಡುತ್ತಾರೆ, ವರ್ಕೌಟ್ ಮಾಡುತ್ತಾರೆ. 41 ಕಿಮೀ ಮ್ಯಾರಥಾನ್ ನಲ್ಲಿ ಸಹ ಕಲೈಮಣಿ ಭಾಗವಹಿಸಿದ್ದರು.

ಕಲೈಮಣಿ 10ನೇ ತರಗತಿವರೆಗೆ ಓದಿದ್ದಾರೆ. ಶಾಲಾ ದಿನಗಳಲ್ಲಿ ಕಬಡ್ಡಿ ಹಾಗೂ ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಬ್ಯಾಂಕ್ ನಿಂದ ಸಾಲ ಪಡೆದು ಹೊಸ ಉದ್ಯಮ ಆರಂಭಿಸಲು ಕಲೈಮಣಿ ಮುಂದಾಗಿದ್ರು. ಆದ್ರೆ ಸಾಲ ಕೊಡಲು ಬ್ಯಾಂಕ್ ಗಳು ನಿರಾಕರಿಸಿದ್ದವು. ನಂತರ ಸ್ನೇಹಿತರಿಂದ ಹಣ ಪಡೆದು ಚಹಾ ಅಂಗಡಿ ತೆರೆದಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...