alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಂಡೋಮ್ ಬಳಕೆ ಮುನ್ನ ಇವು ತಿಳಿದಿರಲಿ

ಸುರಕ್ಷಿತ ಲೈಂಗಿಕ ಜೀವನಕ್ಕೆ ಕಾಂಡೋಮ್ ಅಗತ್ಯ. ಇದು ಎಲ್ಲರಿಗೂ ತಿಳಿದಿರುವ ಸಂಗತಿ. ಇತ್ತೀಚಿನ ದಿನಗಳಲ್ಲಿ ಕಾಂಡೋಮ್ ಬಳಕೆದಾರರ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ಅನಪೇಕ್ಷಿತ ಗರ್ಭಧಾರಣೆ ತಡೆಯುವ ಜೊತೆಗೆ ಏಡ್ಸ್ ನಂತಹ ಮಾರಕ ರೋಗಗಳನ್ನು ತಡೆಯಲು ಕಾಂಡೋಮ್ ಅತ್ಯಗತ್ಯ.

ಕಾಂಡೋಮ್ ಬಳಕೆಯಿಂದ ಸೆಕ್ಸ್ ಆನಂದ ಸಂಪೂರ್ಣವಾಗಿ ಸಿಗೋದಿಲ್ಲ ಎಂಬ ಭಾವನೆ ಕೆಲವರದ್ದು. ಆದ್ರೆ ಇದೊಂದು ಭ್ರಮೆ. ಕಾಂಡೋಮ್ ಬಳಕೆ ಶಾರೀರಿಕ ಸಂಬಂಧದ ಆನಂದದ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ. ಕಾಂಡೋಮ್ ತಯಾರಿಕಾ ಕಂಪನಿಗಳು ಸುರಕ್ಷತೆಯ ಜೊತೆಗೆ ರೋಮ್ಯಾನ್ಸ್ ಗೂ ಮಹತ್ವ ನೀಡುತ್ತಿವೆ. ಹಾಗಾಗಿ ವಿವಿಧ ಬಣ್ಣಗಳಲ್ಲಿ, ರೂಪಗಳಲ್ಲಿ ಕಾಂಡೋಮ್ ತಯಾರಿಸುತ್ತಿವೆ. ಕಾಂಡೋಮ್ ಬಳಕೆದಾರರ ಸಂಖ್ಯೆಯಲ್ಲಿ ಏರಿಕೆಯಾಗ್ತಿದ್ದರೂ ಅದ್ರ ಬಗ್ಗೆ ಈಗ್ಲೂ ಅನೇಕರಿಗೆ ಸರಿಯಾದ ತಿಳುವಳಿಕೆಯಿಲ್ಲ. ತಪ್ಪು ಕಲ್ಪನೆ ಹಾಗೂ ತಪ್ಪು ನಡೆ ಸಮಸ್ಯೆಗೆ ಕಾರಣವಾಗ್ತಿದೆ.

ಕಾಂಡೋಮ್ ಖರೀದಿ ವೇಳೆ ಮುಜುಗರ ಬೇಡ. ಜೊತೆಗೆ ಅದ್ರ ಗುಣಮಟ್ಟದ ಬಗ್ಗೆ ಗಮನ ನೀಡಬೇಕಾಗುತ್ತದೆ. ಹಣ ಉಳಿಸುವ ಆತುರದಲ್ಲಿ ಆಪತ್ತು ತಂದುಕೊಳ್ಳಬೇಡಿ. ಅದ್ರ ಗುಣಮಟ್ಟ ಪರೀಕ್ಷಿಸಿ ಕಾಂಡೋಮ್ ಆಯ್ಕೆ ಮಾಡಿಕೊಳ್ಳುವುದು ಸೂಕ್ತ.

ಈ ಹಿಂದೆ ಹೇಳಿದಂತೆ ಮಾರುಕಟ್ಟೆಯಲ್ಲಿ ಬೇರೆ ಬೇರೆ ಬಣ್ಣದ, ಸುವಾಸನೆಯ ಕಾಂಡೋಮ್ ಗಳು ಲಭ್ಯವಿದೆ. ನಿಮ್ಮ ಸಂಗಾತಿಗೆ ಇಷ್ಟವಾಗುವ ಕಾಂಡೋಮ್ ಆಯ್ಕೆ ಮಾಡಿಕೊಂಡು ಲೈಂಗಿಕ ಜೀವನವನ್ನು ಮತ್ತಷ್ಟು ಸುಂದರಗೊಳಿಸಿಕೊಳ್ಳಿ.

ಕಾಂಡೋಮ್ ಖರೀದಿ ಮಾಡಿದ್ರೆ ಕೆಲಸ ಮುಗಿಯಲಿಲ್ಲ. ಅನೇಕರು ತಮ್ಮ ಜೇಬಿನಲ್ಲಿ ಕಾಂಡೋಮ್ ಇಟ್ಟುಕೊಳ್ತಾರೆ. ಆದ್ರೆ ಇದು ಯೋಗ್ಯವಲ್ಲ. ತಜ್ಞರ ಪ್ರಕಾರ ಬಿಸಿ ಜಾಸ್ತಿಯಾದ್ರೆ ಕಾಂಡೋಮ್ ಕೆಟ್ಟು ಹೋಗುವ ಅಪಾಯ ಜಾಸ್ತಿ. ಹಾಗಾಗಿ ಕಾಂಡೋಮ್ ಮನೆಯ ತಂಪಾದ ಹಾಗೂ ಒಣಗಿದ ಜಾಗದಲ್ಲಿಡುವುದು ಸೂಕ್ತ.

ಕಾಂಡೋಮ್ ಬಳಕೆ ವೇಳೆ ಅದು ಸರಿಯಾಗಿದೆಯಾ ಎಂಬುದನ್ನು ಪರೀಕ್ಷಿಸಿಕೊಳ್ಳಿ. ರಂಧ್ರವಿರುವ ಕಾಂಡೋಮ್ ಬಳಕೆ ಮಾಡಬೇಡಿ. ಹಾಗೆ ಕಾಂಡೋಮ್ ಪ್ಯಾಕೆಟ್ ಮೇಲಿರುವ ಸಂದೇಶವನ್ನು ಓದಿ. ಅದನ್ನು ಅನುಸರಿಸಿ. ಕೊನೆ ದಿನಾಂಕವನ್ನು ಪರಿಶೀಲಿಸುವ ಅಭ್ಯಾಸ ಬೆಳೆಸಿಕೊಳ್ಳಿ. ಹಾಗೆ ಒಮ್ಮೆ ಬಳಸಿದ ಕಾಂಡೋಮ್ ಮತ್ತೆ ಬಳಸುವ ಪ್ರಯತ್ನ ಬೇಡ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...