alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಗ್ರಾಮದಲ್ಲಿ ಒಬ್ಬರೂ ಮಾಡಲ್ಲ ಧೂಮಪಾನ……ಕಾರಣವೇನು ಗೊತ್ತಾ?

ಇತ್ತೀಚಿನ ದಿನಗಳಲ್ಲಿ ಹೈಸ್ಕೂಲಿಗೆ ಹೋಗುವ ಮಕ್ಕಳು ಕೂಡ ಧೂಮಪಾನ ಚಟಕ್ಕೆ ಬಲಿಯಾಗ್ತಿದ್ದಾರೆ. ಸಣ್ಣ ಹುಡುಗ್ರ ಕೈನಲ್ಲಿ ಸಿಗರೇಟು ನೋಡಿದ್ರೆ ಹೊಟ್ಟೆ ಚುರ್ ಎನ್ನುತ್ತೆ. ದೇಶದಲ್ಲಿ ಧೂಮಪಾನಿಗಳ ಸಂಖ್ಯೆ ಹೆಚ್ಚಾಗ್ತಿದೆ. ಆದ್ರೆ ಭಾರತದ ಈ ಊರು ಮಾತ್ರ ಧೂಮಪಾನ ವಿಚಾರದಲ್ಲಿ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

ಹರ್ಯಾಣದ ಗಡಿ ಗ್ರಾಮ, ರಾಜಸ್ತಾನದ ಪಕ್ಕದ ಹಳ್ಳಿ ಟಿಕಲಾದಲ್ಲಿ ಯಾವೊಬ್ಬ ವ್ಯಕ್ತಿಯೂ ಸಿಗರೇಟು ಸೇದುವುದಿಲ್ಲ. ಧೂಮಪಾನವಿರಲಿ, ತಂಬಾಕು ಸೇವನೆ ಕೂಡ ಮಾಡುವುದಿಲ್ಲ. ಪಾನ್ ಕೂಡ ಇಲ್ಲಿನ ಜನರು ಹಾಕುವುದಿಲ್ಲ. ಈ ಹಳ್ಳಿಯಲ್ಲಿ ಸುಮಾರು 1500 ಜನರಿದ್ದು, ಯಾರೊಬ್ಬರೂ ಧೂಮಪಾನ ಮಾಡುವುದಿಲ್ಲ.

ಈ ಗ್ರಾಮಕ್ಕೆ ಬರುವ ಪ್ರವಾಸಿಗರು ಕೂಡ ಸಿಗರೇಟು, ತಂಬಾಕು ಸೇವನೆ ಮಾಡುವಂತಿಲ್ಲ. ಗ್ರಾಮಕ್ಕೆ ಎಂಟ್ರಿಯಾಗುವ ಮೊದಲೇ ಚೆಕ್ಕಿಂಗ್ ನಡೆಯುತ್ತದೆ. ತಂಬಾಕು ಸೇವನೆ ಮಾಡ್ತೀರಾ ಎಂದು ಪ್ರಶ್ನಿಸಲಾಗುತ್ತದೆ. ಈ ಗ್ರಾಮದಲ್ಲಿ ಭಗವಾನ್ ದಾಸ್ ಮಂದಿರವಿದೆ. ಭಗವಾನ್ ದಾಸ್ ಸಮಾಧಿ ಕೂಡ ಇದೆ. ಭಗವಾನ್ ದಾಸ್ ಮಾದಕ ಪದಾರ್ಥಗಳನ್ನು ಬಹಿಷ್ಕರಿಸಿದ್ದರಂತೆ. ಇದೇ ಕಾರಣಕ್ಕೆ ಇಲ್ಲಿನ ಜನರು ಧೂಮಪಾನ, ತಂಬಾಕು ಸೇವನೆ ಮಾಡುವುದಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...