alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಚ್ಚಿ ಬೀಳಿಸುತ್ತೆ ರಸ್ತೆ ಅಪಘಾತದಲ್ಲಿನ ಸಾವಿನ ವಿವರ

accident_onedeath

ಭಾರತದಲ್ಲಿ ವಾಹನ ಸಂಖ್ಯೆ ಹೆಚ್ಚಿದಂತೆಲ್ಲಾ ಅಪಘಾತಗಳು ಕೂಡ ಜಾಸ್ತಿಯಾಗುತ್ತಿವೆ. 2015ರಲ್ಲಿ ಪ್ರತಿ 10 ನಿಮಿಷಗಳಲ್ಲಿ 9 ಅಪಘಾತಗಳು ಸಂಭವಿಸಿವೆ, ಅದರಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಅಪಘಾತದಲ್ಲಿ ಸಂಭವಿಸ್ತಾ ಇರೋ ಸಾವಿನ ಪ್ರಮಾಣ ಶೇ.9 ರಷ್ಟು ಜಾಸ್ತಿಯಾಗಿದೆ.

2015 ರಲ್ಲಿ ಭಾರತದಲ್ಲಿ ರಸ್ತೆ ಅಪಘಾತಕ್ಕೆ ಬಲಿಯಾದವರು ಒಟ್ಟು 148,000 ಮಂದಿ. 2011ರಲ್ಲಿ 136,000 ಜನರು ಪ್ರಾಣ ಕಳೆದುಕೊಂಡಿದ್ರು. ರಾಷ್ಟ್ರೀಯ ಅಪರಾಧ ದಾಖಲೆ ದಳ ನೀಡಿದ ಅಂಕಿ-ಅಂಶ ಇದು. ರೈಲು ಅಪಘಾತದಲ್ಲಿ ಶೇ.15 ರಷ್ಟು ಮಂದಿ ಸಾವನ್ನಪ್ಪಿದ್ದು, ಹಳಿ ದಾಟುವ ವೇಳೆ ಶೇ.2 ರಷ್ಟು ಜನರು ಮೃತಪಟ್ಟಿದ್ದಾರೆ.

2015 ರಲ್ಲಿ ಒಟ್ಟು 464,000 ರಸ್ತೆ ಅಪಘಾತಗಳು ಸಂಭವಿಸಿವೆ. 2014 ರಲ್ಲಿ ಈ ಸಂಖ್ಯೆ 450,000 ರಷ್ಟಿತ್ತು. ಅತಿ ಹೆಚ್ಚು ಅಪಘಾತ ಸಂಭವಿಸಿರುವುದು ತಮಿಳುನಾಡಿನಲ್ಲಿ (69,059). ಕರ್ನಾಟಕ-44,011, ಮಹಾರಾಷ್ಟ್ರ – 42,250 ಅಪಘಾತಗಳು ಸಂಭವಿಸಿವೆ. ಇನ್ನು ಅಪಘಾತದಲ್ಲಿ ಅತಿ ಹೆಚ್ಚು ಸಾವು ಸಂಭವಿಸಿರೋದು ಉತ್ತರಪ್ರದೇಶದಲ್ಲಿ, 18,407 ಮಂದಿ ಅಲ್ಲಿ ಮೃತಪಟ್ಟಿದ್ದಾರೆ.

ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ, ಡ್ರಂಕ್ & ಡ್ರೈವ್ ಅನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ, ಸ್ಪೀಡ್ ಲಿಮಿಟ್ ಹೇರಲಾಗಿದೆ. ಆದ್ರೂ ಅಪಘಾತಗಳ ಸಂಖ್ಯೆ ಹೆಚ್ತಾ ಇರೋದು ಆತಂಕಕಾರಿ ವಿಷಯ. 2015 ರಲ್ಲಿ ನಡೆದ ಅಪಘಾತಗಳಲ್ಲಿ ದ್ವಿಚಕ್ರ ವಾಹನಗಳ ಆಕ್ಸಿಡೆಂಟ್ ಶೇ.29 ರಷ್ಟಿದೆ, ಅದರಿಂದ್ಲೇ 45,540 ಮಂದಿ ಮೃತಪಟ್ಟಿದ್ದಾರೆ.

ಲಾರಿಗಳಿಂದ ಶೇ.19, ಕಾರುಗಳಿಂದ ಶೇ.12 ರಷ್ಟು ಅಪಘಾತಗಳು ನಡೆದಿವೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಅಂದ್ರೆ 1,256 ಪಾದಚಾರಿಗಳು ಮೃತಪಟ್ಟಿದ್ದಾರೆ. ಒಟ್ಟಾರೆ ರಸ್ತೆ ಅಪಘಾತಗಳಲ್ಲಿ ಚೆನ್ನೈನಲ್ಲಿ ಶೇ.9 ರಷ್ಟು, ದೆಹಲಿಯಲ್ಲಿ ಶೇ.9, ಬೆಂಗಳೂರಲ್ಲಿ ಶೇ.6 ಹಾಗೂ ಜೈಪುರದಲ್ಲಿ ಶೇ.5ರಷ್ಟು ಅಪಘಾತಗಳು ಸಂಭವಿಸಿವೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...