alex Certify
ಕನ್ನಡ ದುನಿಯಾ       Mobile App
       

Kannada Duniya

ಒಬ್ಬಂಟಿಯಾಗಿ 16 ರಾಜ್ಯ ಸುತ್ತಿದ್ದಾರೆ ಮಹಿಳಾ ಬೈಕರ್

female bikerಇಶಾ ಗುಪ್ತಾ ಎಂಬ ಈ ಮಹಿಳಾ ಬೈಕರ್, ಒಬ್ಬಂಟಿಯಾಗಿ ಬೈಕ್ ನಲ್ಲಿ 16 ರಾಜ್ಯಗಳ ಪ್ರವಾಸ ಮಾಡಿದ್ದು, ಒಟ್ಟು 32 ಸಾವಿರ ಕಿಲೋ ಮೀಟರ್ ಕ್ರಮಿಸಿದ್ದಾರೆ. ತಮ್ಮ ಪ್ರವಾಸದ ಸಂದರ್ಭದಲ್ಲಿ ಒಂದೇ ಒಂದು ಕಹಿ ಅನುಭವವೂ ತಮಗಾಗಿಲ್ಲವೆಂದು ಇಶಾ ಗುಪ್ತಾ ಹೇಳುತ್ತಾರೆ.

ಹೋಟೆಲ್ ಮ್ಯಾನೇಜ್ಮೆಂಟ್ ನಲ್ಲಿ ಪದವಿ ಪಡೆದಿರುವ ಇಶಾ ಗುಪ್ತಾ, ಹಲವು ವರ್ಷಗಳ ಕಾಲ ಕಾರ್ಪೋರೇಟ್ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದರು. ಆದರೆ ಕೆಲಸದ ಏಕತಾನತೆಯಿಂದ ಬೇಸತ್ತ ಅವರು, ಅಮೆರಿಕಾದ ಮಹಿಳೆಯೊಬ್ಬಳು ಒಬ್ಬಂಟಿಯಾಗಿ ಬೈಕ್ ನಲ್ಲಿ ಪ್ರವಾಸ ಕೈಗೊಂಡಿದ್ದ ಸುದ್ದಿಯಿಂದ ಸ್ಪೂರ್ತಿಗೊಂಡು ತಾವೂ ಆ ಸಾಹಸಕ್ಕೆ ಮುಂದಾದರು.

ಇದಕ್ಕಾಗಿ ಬೈಕ್ ತರಬೇತಿ ಪಡೆದ ಇಶಾ ಗುಪ್ತಾ, ಸಣ್ಣ ಪುಟ್ಟ ಬೈಕ್ ರಿಪೇರಿ ಕೆಲಸವನ್ನೂ ಕಲಿತುಕೊಂಡರು. ಬಳಿಕ ತಮ್ಮ ಪ್ರವಾಸ ಆರಂಭಿಸಿದ ಅವರು, ಇದುವರೆಗೂ 16 ರಾಜ್ಯಗಳಲ್ಲಿ 32 ಸಾವಿರ ಕಿ.ಮೀ. ಪ್ರವಾಸ ಮಾಡಿದ್ದಾರೆ. ತಮ್ಮ ಪ್ರವಾಸದ ಅವಧಿಯಲ್ಲಿ ಪ್ರತಿ ದಿನ 12 ಗಂಟೆಗಳ ಕಾಲ ಅವರು ಬೈಕ್ ಚಾಲನೆ ಮಾಡುತ್ತಾರೆ. ಭಾರತೀಯ ಮಹಿಳೆಯರು ನಾಲ್ಕು ಗೋಡೆಗಳಿಂದಾಚೆ ಬಂದರೆ ಏನನ್ನಾದರೂ ಸಾಧಿಸಬಹುದೆಂದು ಇಶಾ ಗುಪ್ತಾ ಅಭಿಪ್ರಾಯಪಡುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...