alex Certify
ಕನ್ನಡ ದುನಿಯಾ       Mobile App
       

Kannada Duniya

ಬೇಗನೆ ನಿದ್ದೆ ನಿಮ್ಮನ್ನು ಆವರಿಸಬೇಕಾ? ಹೀಗೆ ಮಾಡಿ….

ಕೆಲವೊಮ್ಮೆ ಅತಿಯಾಗಿ ಆಯಾಸಗೊಂಡಿರುತ್ತೇವೆ. ಚೆನ್ನಾಗಿ ನಿದ್ದೆ ಮಾಡಬೇಕು ಅಂತಾ ಬಂದು ಮಲಗಿದ್ರೆ ಎಷ್ಟು ಹೊತ್ತಾದರೂ ನಿದ್ರಾದೇವಿ ನಮ್ಮನ್ನು ಆಲಂಗಿಸಿಕೊಳ್ಳುವುದೇ ಇಲ್ಲ. ಅತ್ಯಂತ ಬೇಗನೆ ನಿದ್ದೆಗೆ ಜಾರಲು ಕೆಲವೊಂದು ಉಪಾಯಗಳನ್ನು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ.

ನಮ್ಮ ನಿದ್ದೆಗೆ ಅಡ್ಡಿಯಾಗುವ ಅಂಶ ಯಾವುದು ಅನ್ನೋದನ್ನು ಪತ್ತೆ ಮಾಡಿದ್ದಾರೆ. ವಿಜ್ಞಾನಿಗಳ ಪ್ರಕಾರ ಭವಿಷ್ಯದಲ್ಲಿ ನಾವು ಮಾಡಬೇಕಾಗಿರುವ ಕಾರ್ಯಗಳೇ ನಮ್ಮ ನಿದ್ರೆಗೆ ಭಂಗ ತರುತ್ತವೆ. ನಾಳೆ ಎಷ್ಟೆಲ್ಲಾ ಕೆಲಸವಿದೆ ಅನ್ನೋ ಚಿಂತೆ, ಮುಂದೇನು ಅನ್ನೋ ಆಲೋಚನೆಗಳು ಇವೆಲ್ಲಾ ನಮ್ಮ ನಿದ್ದೆಯನ್ನು ತಡೆಹಿಡಿಯುತ್ತವೆ.

ಹಾಗಾಗಿ ನೀವು ಏನೇನು ಮಾಡಬೇಕು ಎಂದುಕೊಂಡಿದ್ದೀರೋ ಅವನ್ನೆಲ್ಲಾ ಒಂದು ಹಾಳೆಯಲ್ಲಿ ಅಥವಾ ಡೈರಿಯಲ್ಲಿ ಮಲಗುವ ಮುನ್ನ ಬರೆದಿಡಿ. ಹಾಗೆ ಮಾಡಿದ್ರೆ ನಿಮ್ಮ ಮನಸ್ಸಿನಿಂದ ಚಿಂತೆ ಮರೆಯಾಗುತ್ತದೆ. ದಿಂಬಿಗೆ ತಲೆಯಾನಿಸಿದ ತಕ್ಷಣವೇ ನಿದ್ರೆ ನಿಮ್ಮನ್ನು ಆವರಿಸುತ್ತದೆ.

ಇಂಥ ಸಣ್ಣ ಪುಟ್ಟ ಟ್ರಿಕ್ಸ್ ಕಲಿಸಲು ಶಾಲೆಗಳಿಲ್ಲ. ನಮ್ಮ ಅನುಭವದಿಂದ್ಲೇ ಕಲಿಯಬಹುದಾದ ಪಾಠ ಇದು. ಯಾರ್ಯಾರು ನಿದ್ರಾಹೀನತೆಯಿಂದ ಬಳಲುತ್ತಿದ್ದೀರೋ ಅವರೆಲ್ಲಾ ಇದನ್ನು ಅನುಸರಿಸಬಹುದು. ಮುಂದೆ ಮಾಡಬೇಕಾದ ಕೆಲಸಗಳ ಬಗೆಗಿನ ಆಲೋಚನೆಯನ್ನು ತೊರೆದಾಗ ಮಾತ್ರ ನೀವು ನೆಮ್ಮದಿಯಾಗಿ ನಿದ್ದೆ ಮಾಡಬಲ್ಲಿರಿ.

 

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...