alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿಗೆ 20 ವರ್ಷಗಳಿಂದ ರಾಖಿ ಕಟ್ಟುತ್ತಿದ್ದಾಳೆ ಪಾಕ್ ಮಹಿಳೆ

modi-sis-620x400

ಪಾಕಿಸ್ತಾನಿ ಮೂಲದ ಮಹಿಳೆಯೊಬ್ಬಳು ಕಳೆದ 20 ವರ್ಷಗಳಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ರಾಖಿ ಕಟ್ಟುತ್ತ ಬಂದಿದ್ದಾಳಂತೆ. ಈ ಬಗ್ಗೆ ಮಾತನಾಡಿದ ಕಾಮರ್ ಮೊಹ್ಸಿನ್ ಶೇಖ್ ಈ ಬಾರಿ ಕೂಡ ರಾಖಿ ಕಟ್ಟುವುದಾಗಿ ಹೇಳಿದ್ದಾಳೆ.

ಮದುವೆ ನಂತ್ರ ಕಾಮರ್ ಮೊಹ್ಸಿನ್ ಶೇಖ್ ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದಾಳೆ. ಅಲ್ಲಿಂದ ಈವರೆಗೂ ಭಾರತದಲ್ಲಿಯೇ ವಾಸವಾಗಿದ್ದಾಳೆ. ಈ ಬಾರಿ ಪ್ರಧಾನಿ ಮೋದಿ ಬ್ಯುಸಿಯಾಗಿರುವುದರಿಂದ ರಾಖಿ ಕಟ್ಟಲು ಸಾಧ್ಯವಿಲ್ಲ ಎಂದುಕೊಂಡಿದ್ದಳಂತೆ. ಆದ್ರೆ ಎರಡು ದಿನಗಳ ಹಿಂದೆ ಮೋದಿ ಕರೆ ಮಾಡಿದ್ದರಂತೆ. ಹಾಗಾಗಿ ಈ ಬಾರಿಯೂ ಮೋದಿಗೆ ರಾಖಿ ಕಟ್ಟುತ್ತೇನೆ ಎಂದಿದ್ದಾರೆ ಕಾಮರ್ ಮೊಹ್ಸಿನ್ ಶೇಖ್.

ಏಜೆನ್ಸಿ ಜೊತೆ ಮಾತನಾಡಿದ ಕಾಮರ್ ಮೊಹ್ಸಿನ್ ಶೇಖ್, ಪ್ರಧಾನ ಮಂತ್ರಿ ಮೋದಿಯವರನ್ನು ಆರ್ ಎಸ್ ಎಸ್ ಕಾರ್ಯಕರ್ತರಾಗಿದ್ದಾಗ ಭೇಟಿ ಮಾಡಿದ್ದರಂತೆ. ಅವರ ಪರಿಶ್ರಮ ಹಾಗೂ ಮುಂದೆ ಬರಬೇಕೆಂಬ ಛಲ ಇಲ್ಲಿಗೆ ತಂದು ನಿಲ್ಲಿಸಿದೆ ಎಂದಿದ್ದಾಳೆ ಕಾಮರ್ ಮೊಹ್ಸಿನ್ ಶೇಖ್.

ಪಾಕಿಸ್ತಾನದಿಂದ ಮೊದಲ ಬಾರಿ ಭಾರತಕ್ಕೆ ಬಂದಾಗ ಗಂಡನ ಮನೆಯವರನ್ನು ಬಿಟ್ಟರೆ ಯಾರ ಪರಿಚಯವೂ ಕಾಮರ್ ಮೊಹ್ಸಿನ್ ಶೇಖ್ ಗೆ ಇರಲಿಲ್ಲವಂತೆ. ದೆಹಲಿಯಲ್ಲಿ ಮೊದಲ ಬಾರಿ ಮೋದಿಯವರನ್ನು ಭೇಟಿ ಮಾಡಿದ್ದಳಂತೆ. ಆಗ ಮೋದಿ ಹೇಗಿದ್ದೀಯಾ ಸಹೋದರಿ ಎಂದು ಕೇಳಿದ್ದರಂತೆ. ಅಲ್ಲಿಂದ ಮೋದಿ ತನ್ನ ಸಹೋದರನಾದ ಎನ್ನುತ್ತಾಳೆ ಕಾಮರ್ ಮೊಹ್ಸಿನ್ ಶೇಖ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...