alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವ್ಯಕ್ತಿಯ ಬದುಕನ್ನೇ ಬದಲಿಸಿತು ಕಣ್ಣೆದುರಿಗಿನ ಆ ಸಾವು

12705426_448972688645047_8450104001451777183_n

ಅವರು ಪ್ರತಿಷ್ಟಿತ ಲಾರ್ಸನ್ ಅಂಡ್ ಟೋಬ್ರೋ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದವರು. ಮಾಸಿಕ 65,000 ರೂ. ಸಂಬಳ ಪಡೆಯುತ್ತಿದ್ದರು. ಆದರೆ ಕಣ್ಣೆದುರಿಗೆ ಸಂಭವಿಸಿದ ಆ ಸಾವು ಇಂದು ಅವರ ಬದುಕಿನ ದಿಕ್ಕನ್ನೇ ಬದಲಿಸಿದೆ.

ಹೌದು. ಮುಂಬೈನ ಈ ವ್ಯಕ್ತಿ ಇಂದು ಟ್ಯಾಕ್ಸಿ ಚಾಲನೆ ಮಾಡುತ್ತಿದ್ದಾರೆ. ಇದರಿಂದ ತಿಂಗಳಿಗೆ 10,000 ರೂ. ಗಳಿಸುತ್ತಿದ್ದರೂ ಬೇಸರಪಟ್ಟುಕೊಳ್ಳದೇ ತೃಪ್ತಿಯಿಂದ ಇದ್ದಾರೆ. ಇದಕ್ಕೆ ಕಾರಣವಾಗಿದ್ದು, ಅವರ ಪತ್ನಿಯ ಸಾವು.

ಕೆಲ ವರ್ಷಗಳ ಹಿಂದೆ ಇವರ ಪತ್ನಿ ಅಪರಾತ್ರಿಯಲ್ಲಿ ಅನಾರೋಗ್ಯಕ್ಕೊಳಗಾಗಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲು ಮುಂದಾದ ವೇಳೆ ಯಾವ ಟ್ಯಾಕ್ಸಿಯೂ ಸಿಕ್ಕುವುದಿಲ್ಲ. ರಸ್ತೆಯಲ್ಲಿ ಸಾಗುತ್ತಿದ್ದ ಟ್ಯಾಕ್ಸಿಗಳಿಗೆ ಕೈ ಅಡ್ಡ ಹಾಕಿದರೂ ಯಾರೂ ನಿಲ್ಲಿಸುವುದಿಲ್ಲ. ಸಕಾಲಕ್ಕೆ ಚಿಕಿತ್ಸೆ ದೊರೆಯದ ಕಾರಣ ಪತ್ನಿ ಮೃತಪಡುತ್ತಾರೆ.

ಕಣ್ಣೆದುರೇ ಸಂಭವಿಸಿದ ಪತ್ನಿಯ ಸಾವು ಇವರ ಮನ ಕಲಕುತ್ತದೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ತೀರ್ಮಾನಕ್ಕೆ ಬರುವ ಅವರು ತಮ್ಮ ಉನ್ನತ ಹುದ್ದೆ ತೊರೆದು ಟ್ಯಾಕ್ಸಿ ಚಾಲನೆ ಮಾಡಲು ನಿರ್ಧರಿಸುತ್ತಾರೆ. ಅದರಂತೆ ಟ್ಯಾಕ್ಸಿ ಸೇವೆ ನೀಡುತ್ತಿರುವ ಗಂಭೀರ ಸ್ಥಿತಿಯಲ್ಲಿದ್ದ 500 ಕ್ಕೂ ಅಧಿಕ ಮಂದಿಯನ್ನು ಈವರೆಗೆ ಆಸ್ಪತ್ರೆಗೆ ಸಾಗಿಸಿದ್ದಾರೆ. ಜೊತೆಗೆ ಅಂತವರಿಂದ ಯಾವುದೇ ಹಣ ಪಡೆಯದೆ ಉಚಿತ ಸೇವೆ ನೀಡುತ್ತಿದ್ದಾರೆ. ಸಾಮಾನ್ಯ ಪ್ರಯಾಣಿಕರಿಂದ ತಿಂಗಳಿಗೆ 10 ಸಾವಿರ ರೂ. ಗಳಿಸುತ್ತಿದ್ದು, ಸಾರ್ಥಕತೆಯ ಜೀವನನ್ನುಭವಿಸುತ್ತಿದ್ದೇನೆ ಎನ್ನುತ್ತಾರವರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...