alex Certify
ಕನ್ನಡ ದುನಿಯಾ       Mobile App
       

Kannada Duniya

ಟಾಮ್ ಟರ್ಸಿಚ್ ಅವರ ವರ್ಲ್ಡ್ ವಾಕ್

tomನ್ಯೂಜರ್ಸಿಯ ಟಾಮ್ ಟರ್ಸಿಚ್ ಕಾಲ್ನಡಿಗೆಯಲ್ಲಿ ಪ್ರಪಂಚ ಪರ್ಯಟನೆ ಮಾಡುತ್ತಿದ್ದಾರೆ. ತನ್ನ ಈ ಕಾಲ್ನಡಿಗೆಯ ಪ್ರವಾಸಕ್ಕೆ ಇವರಿಟ್ಟ ಹೆಸರು ‘ವರ್ಲ್ಡ್ ವಾಕ್’.

ಟಾಮ್ ಅವರು ಈ ವರ್ಲ್ಡ್ ವಾಕ್ ಅನ್ನು ಏಪ್ರಿಲ್ 2, 2015ರಿಂದ ಆರಂಭಿಸಿದ್ದಾರೆ. 5 ವರ್ಷ ಸತತವಾಗಿ ಸಂಚರಿಸಬೇಕೆಂದು ನಿರ್ಧರಿಸಿರುವ ಟಾಮ್, ದಿನವೊಂದಕ್ಕೆ 15 ಮೈಲಿ ಸಂಚರಿಸಿ, 5 ವರ್ಷದಲ್ಲಿ  22,000 ಮೈಲಿ ನಡೆಯುವ ಗುರಿ ಹೊಂದಿದ್ದಾರೆ.

ಈಗಾಗಲೇ ಟಾಮ್ 466 ದಿನದಲ್ಲಿ 6300 ಮೈಲಿ ಕ್ರಮಿಸಿದ್ದಾರೆ. ಇವರು ತನ್ನ ಜೊತೆಗೆ ಸಾವನ್ನಾ ಎಂಬ ನಾಯಿಯನ್ನು ಕರೆದೊಯ್ಯುತ್ತಿದ್ದಾರೆ. ಟಾಮ್ ಅವರು ಈ ವರ್ಲ್ಡ್ ವಾಕ್ ಅನ್ನು ಆರಂಭಿಸಿರುವುದರ ಹಿಂದೆ ಒಂದು ಹಿನ್ನಲೆ ಇದೆ.

ಟಾಮ್ ಟರ್ಸಿಚ್ ಅವರ ಫ್ರೆಂಡ್ ಅನ್ನೆ ಮಾರಿ ಎಂಬುವರ ಆಕಸ್ಮಿಕ ಸಾವು ಟಾಮ್ ಅವರಿಗೆ ತುಂಬ ನೋವು ಕೊಟ್ಟಿತು. ಜೊತೆಗೆ ಜೀವನ ಎಷ್ಟು ಕ್ಷಣಿಕ, ಸಾವು ಯಾವ ಕ್ಷಣದಲ್ಲಿ ಬೇಕಾದರೂ ನಮ್ಮನ್ನು ಆವರಿಸಬಹುದೆಂಬ ನೋವು ಕಾಡಿತು. ಆ ಕ್ಷಣದಲ್ಲೇ ಇವರು ಇರುವಷ್ಟು ದಿನದಲ್ಲಿ ಜಗವನ್ನು ಸುತ್ತಬೇಕು ಎಂದು ನಿರ್ಧರಿಸಿದರು.

ಟಾಮ್ ಅವರ ವರ್ಲ್ಡ್ ವಾಕ್ ಗೆ ಫಿಲಾಡೆಲ್ಫಿಯಾ ಸೈನ್ ಕಂಪನಿ ಸ್ಪಾನ್ಸರ್ ಮಾಡುತ್ತಿದೆ. ಈ ಕಂಪನಿಯ ಸ್ಥಾಪಕರಿಗೆ ಅನ್ನೆ ಮೇರಿಯವರ ಪರಿಚಯವಿತ್ತು. ಹಾಗಾಗಿ ಅವರು ಟಾಮ್ ಟರ್ಸಿಚ್ ಅವರ ಒಂದು ಮೈಲಿ ನಡಿಗೆಗೆ 1 ಡಾಲರ್ ಡೊನೇಟ್ ಮಾಡುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...