alex Certify
ಕನ್ನಡ ದುನಿಯಾ       Mobile App
       

Kannada Duniya

ಜಯಲಲಿತಾರ ಅಗಾಧ ವ್ಯಕ್ತಿತ್ವವನ್ನು ಬಿಚ್ಚಿಡುತ್ತೆ ಅವರೇ ಬರೆದಿದ್ದ ಈ ಪತ್ರ

jaya-letter-main

ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಇನ್ನು ನೆನಪು ಮಾತ್ರ. ಜಯಾ ನಿಧನದ ಸುದ್ದಿ ಕೇಳಿದಾಗಿನಿಂದ್ಲೂ ಸಾಮಾಜಿಕ ತಾಣಗಳಲ್ಲಿ ಸಂತಾಪದ ಮಹಾಪೂರವೇ ಹರಿದು ಬರುತ್ತಿದೆ. ಅಮ್ಮನ ಅಗಲಿಕೆಯ ನೋವು, ಅವರೊಂದಿಗೆ ಕಳೆದ ಕ್ಷಣಗಳು, ಜಯಾರ ಪ್ರಭಾವಿ ವ್ಯಕ್ತಿತ್ವದ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಳ್ತಿದ್ದಾರೆ. ಈ ಒಳನೋಟವೇ ಜಯಲಲಿತಾರ ಬದುಕು ಮತ್ತು ವ್ಯಕ್ತಿತ್ವವನ್ನು ತೆರೆದಿಟ್ಟಿದೆ.

16ರ ಹರೆಯದಲ್ಲೇ ತಾಯಿ ತಮ್ಮನ್ನು ಹೇಗೆ ಸಿನಿಮಾ ಜಗತ್ತಿಗೆ ಒತ್ತಾಯಪೂರ್ವಕವಾಗಿ ನೂಕಿದ್ರು ಅನ್ನೋದನ್ನು ಜಯಲಲಿತಾ ಅವರೇ ಹೇಳಿಕೊಂಡಿದ್ದರು. ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದ ಜಯಾಗೆ ಓದುವ ಹಂಬಲವಿತ್ತು, ಆದ್ರೆ ನಟಿಯಾಗಿ ಅವರು ಹೆಸರು ಮಾಡಿದ್ರು. ಎಂ.ಜಿ.ರಾಮಚಂದ್ರನ್, ರಜನಿಕಾಂತ್ ಅವರಂತಹ ಖ್ಯಾತ ನಟರಿಗೆ ಜೋಡಿಯಾಗಿ ಅಭಿನಯಿಸಿದ್ರು. ನಂತರ ಸಿನಿ ಜಗತ್ತಿನ ಜೊತೆಗೆ ಪ್ರೀತಿಯಲ್ಲಿ ಬಿದ್ದಿದ್ದೆಲ್ಲ ಈಗ ಇತಿಹಾಸ.

1980 ರ ದಶಕದಲ್ಲಿ ಚಿತ್ರರಂಗದಿಂದ ದೂರ ಸರಿದಿದ್ದ ಜಯಲಲಿತಾ ಬಗ್ಗೆ ಪತ್ರಿಕೆಯ ಗಾಸಿಪ್ ಕಾಲಂ ಒಂದರಲ್ಲಿ ಬರೆಯಲಾಗಿತ್ತು, ಅವರು ಮರಳಿ ಸಿನಿಮಾರಂಗ ಪ್ರವೇಶಿಸುವ ಪ್ರಯತ್ನದಲ್ಲಿದ್ದಾರೆಂದು ಉಲ್ಲೇಖಿಸಲಾಗಿತ್ತು. ಈ ವರದಿಯನ್ನು ಓದಿದ ಜಯಲಲಿತಾ ಲೇಖಕರಿಗೆ ಪತ್ರವೊಂದನ್ನು ಬರೆದಿದ್ರು. ತಮಗೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುವ ಉದ್ದೇಶವಿಲ್ಲ, ಅದೇ ಕಾರಣಕ್ಕೆ ರಜನಿಕಾಂತ್ ಜೊತೆಗೆ ನಟಿಸುವ ಆಫರ್ ಅನ್ನು ಕೂಡ ತಿರಸ್ಕರಿಸಿದ್ದಾಗಿ ಪತ್ರದಲ್ಲಿ ತಿಳಿಸಿದ್ದರು. ಅಷ್ಟೇ ಅಲ್ಲ, ಇಡೀ ಜೀವನ ಪೂರ್ತಿ ಕೆಲಸ ಮಾಡದೇ ಬದುಕು ಸಾಗಿಸುವಷ್ಟು ಆರ್ಥಿಕವಾಗಿ ಸದೃಢರಾಗಿರುವುದಾಗಿಯೂ ಪತ್ರದಲ್ಲಿ ಸ್ಪಷ್ಟಪಡಿಸಿದ್ದರು.

ಅದು ಖುದ್ದು ಜಯಲಲಿತಾರೇ ತಮ್ಮ ಹಸ್ತಾಕ್ಷರಗಳಲ್ಲಿ ಬರೆದ ಪತ್ರ. ‘ಈ ಪತ್ರ ಬರೆಯುವ ಸ್ಪಷ್ಟ ಉದ್ದೇಶವೆಂದರೆ ನನ್ನ ಆಸಕ್ತಿ ಈಗ ಬೇರೆ ದಿಸೆಯಲ್ಲಿ ಸಾಗುತ್ತಿದೆ ಎಂಬುದನ್ನು ತಿಳಿಸುವುದು, ನಾನು ಸಿನಿಮಾಗಳಲ್ಲಿ ನಟಿಸುತ್ತಿಲ್ಲ ಎಂದರೆ ಅದಕ್ಕೆ ಕಾರಣ ಒಳ್ಳೆಯ ಆಫರ್ ಗಳಿಲ್ಲ ಎಂದರ್ಥವಲ್ಲ’ ಅಂತಾ ಬರೆದು ಜಯಲಲಿತಾ ಸಹಿ ಮಾಡಿದ್ದರು. ಜಯಾ ಪತ್ರ ಬರೆದಿದ್ದು ಪತ್ರಕರ್ತ ಬ್ರಿಯಾನ್ ಲೌಲ್ ಅವರಿಗೆ.

ಜಯಲಲಿತಾ ಬರೆದಿದ್ದ ಪತ್ರವನ್ನು ಬ್ರಿಯಾನ್, ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದಾರೆ. ಇದು ತಮಗೆ ಬಂದ ಅತ್ಯಂತ ಸ್ಫುಟವಾದ, ತಾರ್ಕಿಕ ಪತ್ರ. ಚಂದದ ಲೆಟರ್ ಹೆಡ್ ನಲ್ಲಿ ಅಂದದ ಅಕ್ಷರಗಳಲ್ಲಿ ಬರೆಯಲಾಗಿದೆ. ಅವರು ಆಗ ಅಮ್ಮನೋ, ಪುರುಚ್ಚಿ ತಲೈವಿಯೋ, ಮುಖ್ಯಮಂತ್ರಿಯೋ ಅಲ್ಲ, ಅಗಾಧ ವ್ಯಕ್ತಿತ್ವವುಳ್ಳ, ಅಂದುಕೊಂಡಿದ್ದನ್ನು ಸಾಧಿಸಬಲ್ಲ 32 ರ ಹರೆಯದ ಮಹಿಳೆ ಅಂತಾ ಬ್ರಿಯಾನ್ ಬಣ್ಣಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...