alex Certify
ಕನ್ನಡ ದುನಿಯಾ       Mobile App
       

Kannada Duniya

ಗಾಯಾಳುಗಳನ್ನು ಉಪಚರಿಸುವ ವಿಶಿಷ್ಟ ಆಚರಣೆ

sikh-cleanಸಿಖ್ ಧರ್ಮ ಸಮಾನತೆಗೆ ಹೆಸರಾಗಿದೆ. ಬಡವರಿರಲಿ, ಶ್ರೀಮಂತರಿರಲಿ ಪ್ರತಿಯೊಬ್ಬರೂ ಗುರುದ್ವಾರಕ್ಕೆ ಬಂದು ಒಟ್ಟಾಗಿ ಪ್ರಾರ್ಥನೆ ಸಲ್ಲಿಸುವುದು ವಾಡಿಕೆ. ಸಮುದಾಯದವರೆಲ್ಲ ನಸುಕಿನಲ್ಲೇ ಎದ್ದು ಗುರುದ್ವಾರದ ಆವರಣ ಸ್ವಚ್ಛಗೊಳಿಸ್ತಾರೆ.

ಇನ್ನೂ ವಿಶೇಷ ಅಂದ್ರೆ ಗಾಯಾಳುಗಳ ಗಾಯವನ್ನೂ ಸ್ವಚ್ಛಗೊಳಿಸುವ ಮೂಲಕ ಸೇವೆ ಸಲ್ಲಿಸಲಾಗುತ್ತದೆ. ಗುರುದ್ವಾರದ ಆವರಣದಲ್ಲೇ ಸಾವಿರಾರು ಜನರಿಗೆ ಅಡುಗೆ ತಯಾರಿಸಲಾಗುತ್ತದೆ. ಬಳಿಕ ಮನೆಮಠ ಇಲ್ಲದ ಬಡವರು, ನಿರಾಶ್ರಿತರು, ಅನಾಥರನ್ನೆಲ್ಲ ಕೂರಿಸಿ ಅವರಿಗೆ ಊಟ ಹಾಕುವ ಮೂಲಕ ಅನ್ನದಾನ ಮಾಡಲಾಗುತ್ತದೆ.

ಸಿಖ್ ಧರ್ಮದ ಸಂಸ್ಥಾಪಕರಾದ ಗುರುನಾನಕ್ ಹಾಕಿಕೊಟ್ಟ ಹಾದಿಯಲ್ಲೇ ಇವರೆಲ್ಲರೂ ಮುನ್ನಡೆಯುತ್ತಿದ್ದಾರೆ. ಸಹಮಾನವರನ್ನು ಪ್ರೀತಿಸಿ ಅನ್ನೋದು ಗುರುನಾನಕರ ಬೋಧನೆ. ಅದರಂತೆ ವಿಶ್ವದಾದ್ಯಂತ ಗುರುದ್ವಾರಗಳಲ್ಲಿ ನಿರ್ಗತಿಕರಿಗೆ ಸಮುದಾಯ ಅಡುಗೆ ಮತ್ತು ಸಮುದಾಯ ಸೇವೆ ಮಾಡಲಾಗುತ್ತಿದೆ. ಈ ಆಚರಣೆ ಯುವ ಜನತೆಗೆ ಪ್ರೇರಣೆಯಾಗಿದೆ. ಹಲವರು ಸಮುದಾಯದ ಆಜೀವ ಸದಸ್ಯರಾಗಿ ಬಡವರ ಮತ್ತು ಗಾಯಾಳುಗಳ ಸೇವೆ ಮಾಡುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...