alex Certify
ಕನ್ನಡ ದುನಿಯಾ       Mobile App
       

Kannada Duniya

ರೋಗಿಗಳ ಪಾಲಿಗೆ ಆಪತ್ಬಾಂಧವ ಈ ಆಟೋ ಚಾಲಕ

ಮಂಜುನಾಥ್ ನಿಂಗಪ್ಪ ಪೂಜಾರಿ ಕಂಪನಿಯಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡ್ತಿದ್ದಾರೆ. ಬೆಳಗ್ಗಿನಿಂದ ಸಂಜೆವರೆಗೂ ಕಚೇರಿಯಲ್ಲಿ ಡ್ಯೂಟಿ, ಸಂಜೆ 6ರ ನಂತರ ಓಲಾ ಆಟೋ ಆಂಬ್ಯುಲೆನ್ಸ್ ಓಡಿಸ್ತಾರೆ. ಮಂಜುನಾಥ, ಪ್ರತಿದಿನ ಸಂಜೆ 6 ರಿಂದ ಬೆಳಗ್ಗೆ 9 ಗಂಟೆಯವರೆಗೂ ರೋಗಿಗಳನ್ನು ಉಚಿತವಾಗಿ ಆಸ್ಪತ್ರೆ ತಲುಪಿಸುವ ಕೆಲಸ ಮಾಡ್ತಿದ್ದಾರೆ.

ತುರ್ತು ಸಂದರ್ಭದಲ್ಲಿ ರೋಗಿಗಳ ಕರೆಗೆ ಓಡುತ್ತಾರೆ ಇವರು. ರಾತ್ರಿ ಎಷ್ಟೊತ್ತಿಗೆ ಕರೆದ್ರೂ ಆಟೋ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆ ತಲುಪಿಸಲು ನಿರಾಕರಿಸುವುದಿಲ್ಲ. ಅದು ಕೂಡ ಉಚಿತವಾಗಿ ಅನ್ನೋದು ವಿಶೇಷ. ಅಷ್ಟೇ ಅಲ್ಲ ಪ್ರತಿ ತಿಂಗಳು ತಮ್ಮ ಸಂಬಳದಲ್ಲಿ ಸ್ವಲ್ಪ ಹಣವನ್ನು ಆಶ್ರಯ ಫೌಂಡೇಶನ್ ಗೆ ದೇಣಿಗೆಯಾಗಿ ನೀಡುತ್ತಾರೆ.

ಈ ಮೂಲಕ ಸಮಾಜಕ್ಕೆ ಅಲ್ಪ ಕೊಡುಗೆಯನ್ನಾದ್ರೂ ಕೊಡುತ್ತಿದ್ದೇನಲ್ಲ ಎಂಬ ಸಮಾಧಾನ ಅವರಿಗೆ. ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಕನಿಷ್ಟ ಸಹಾಯ ಮಾಡಲು ಅವಕಾಶ ಸಿಕ್ಕಿದ್ದು ತಮ್ಮ ಪುಣ ಎಂದುಕೊಳ್ತಾರೆ. ನಿಜಕ್ಕೂ ಇವರ ಸಮಾಜ ಸೇವೆ ಇತರರಿಗೆ ಮಾದರಿ.

Today had a Ola auto ( Manjunath Ningappa Pujari ) ride and happened to meet this interesting person who works with the…

Posted by All About Belgaum.com on Sunday, September 10, 2017

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...