alex Certify
ಕನ್ನಡ ದುನಿಯಾ       Mobile App
       

Kannada Duniya

ಮಗನಿಗಾಗಿ ಈತ ಮಾಡಿದ್ದಾನೆ ಮರೆಯಲಾಗದ ಕಾರ್ಯ

father sonಇಂದು ‘ಫಾದರ್ಸ್ ಡೇ’ ಆಚರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಹಲವಾರು ಮಂದಿ ಶುಭಾಶಯ ಹೇಳುವುದರ ಜೊತೆಗೆ ತಮ್ಮ ತಂದೆ ತಮಗಾಗಿ ಮಾಡಿದ ತ್ಯಾಗಗಳ ಕುರಿತು ಬರೆದುಕೊಂಡಿದ್ದಾರೆ. ಈ ಮಧ್ಯೆ ಈ ಸುದ್ದಿ ವಿಶಿಷ್ಟ ಕಾರಣಕ್ಕೆ ಗಮನ ಸೆಳೆಯುತ್ತಿದೆ.

ಜೋಶ್ ಮಾರ್ಷಲ್ ಎಂಬವರ ಎಂಟು ವರ್ಷದ ಪುತ್ರ ಗೇಬ್ರಿಯಲ್ ಮಾರ್ಷಲ್, ಬ್ರೈನ್ ಕ್ಯಾನ್ಸರ್ ನಿಂದ ಬಳಲುತ್ತಿದ್ದು, 2015 ರಲ್ಲಿ ಹಲವು ಬಾರಿ ಶಸ್ತ್ರ ಚಿಕಿತ್ಸೆ ನಡೆಸಿ ಕ್ಯಾನ್ಸರ್ ಗಡ್ಡೆಗಳನ್ನು ತೆಗೆಯಲಾಗಿತ್ತು. ಶಸ್ತ್ರ ಚಿಕಿತ್ಸೆಯಿಂದಾಗಿ ಗೇಬ್ರಿಯಲ್ ಮಾರ್ಷಲ್ ತಲೆ ಬೋಳಾಗಿತ್ತಲ್ಲದೇ ಸಿ ಆಕಾರದಲ್ಲಿ ಶಸ್ತ್ರ ಚಿಕಿತ್ಸೆಯ ಗುರುತು ಮೂಡಿತ್ತು.

ಇದರಿಂದಾಗಿ ಬಾಲಕ ಕೀಳರಿಮೆ ಬೆಳೆಸಿಕೊಂಡಿದ್ದಲ್ಲದೇ ಸಹಪಾಠಿಗಳು ತನ್ನನ್ನು ಹಂಗಿಸುತ್ತಾರೆಂದು ಹೇಳುತ್ತಿದ್ದ. ಆತನಲ್ಲಿ ಆತ್ಮವಿಶ್ವಾಸ ತುಂಬಲು ಮುಂದಾದ ತಂದೆ ಜೋಷ್ ಮಾರ್ಷಲ್ ತಾವೂ ತಲೆ ಬೋಳಿಸಿಕೊಂಡಿದ್ದು, ಮಗನ ಶಸ್ತ್ರ ಚಿಕಿತ್ಸೆಯಿಂದಾದ ಕಲೆಯಂತೆ ತಾವೂ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಇದರಿಂದಾಗಿ ಖುಷಿಯಾಗಿರುವ ಬಾಲಕ, ತಾವಿಬ್ಬರು ಅವಳಿಗಳಂತೆ ಕಾಣುತ್ತೇವೆಂದು ಎಲ್ಲರ ಮುಂದೆ ಹೇಳಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...