alex Certify
ಕನ್ನಡ ದುನಿಯಾ       Mobile App
       

Kannada Duniya

ತುರ್ತು ಸಂದರ್ಭದಲ್ಲಿ ನೆರವಾಗುವ ‘ಸ್ಮಾರ್ಟ್ ಊರುಗೋಲು’

cane

ಎಲ್ಲವೂ ಈಗ ತಂತ್ರಜ್ಞಾನಮಯ. ನಿಮ್ಮ ಶೂನಿಂದ ಹಿಡಿದು ಜೀನ್ಸ್ ವರೆಗೆ ಎಲ್ಲವೂ ನಿಮ್ಮೊಂದಿಗೆ ಮಾತನಾಡುತ್ತವೆ. ಯಾಕಂದ್ರೆ ಇದು ಡಿವೈಸ್ ಗಳ ಝಮಾನಾ.

ಇದೀಗ ಸ್ಮಾರ್ಟ್ ಊರುಗೋಲೊಂದನ್ನು ಸಂಶೋಧಿಸಲಾಗಿದೆ. ವೃದ್ಧರು, ವಿಕಲಚೇತನರು ಹಾಗೂ ಗಾಯಾಳುಗಳಿಗೆ ಆಸರೆಯಾಗಬಲ್ಲ ಊರುಗೋಲು ಇದು. ವಿಶೇಷ ಅಂದ್ರೆ ಅವರು ಎಲ್ಲಾದಾರೂ ಬಿದ್ದರೆ ಕುಟುಂಬದವರನ್ನು ಈ ವಾಕಿಂಗ್ ಸ್ಟಿಕ್ ಅಲರ್ಟ್ ಮಾಡುತ್ತದೆ.

ಫ್ರಾನ್ಸ್ ನ ನೊವಿನ್ ಎಂಬ ಕಂಪನಿ ತಯಾರಿಸಿದ ಈ ಊರುಗೋಲಿನ ಹೆಸರು ‘ಡ್ರಿಂಗ್ ಸ್ಮಾರ್ಟ್ ಕೇನ್’. ಶತಮಾನದಷ್ಟು ಹಳೆಯ ಊರುಗೋಲನ್ನೆಲ್ಲ ಬದಿಗೊತ್ತಿ ಈ ಕಂಪನಿ ಡಿಜಿಟಲ್ ವಾಕಿಂಗ್ ಸ್ಟಿಕ್ ಅನ್ನು ತಯಾರಿಸಿದೆ.

ಜಿಎಸ್ಎಂ ನೆಟ್ವರ್ಕ್ ಗೆ ಇದರಲ್ಲಿರುವ ಸಿಸ್ಟಮ್ ಅನ್ನು ಕನೆಕ್ಟ್ ಮಾಡಿದ್ದು, ಏನಾದರೂ ಅಪಾಯವಾದಗ  ಅವರ ಕುಟುಂಬದವರನ್ನು ಅಲರ್ಟ್ ಮಾಡುತ್ತದೆ. ವಾಕಿಂಗ್ ಸ್ಟಿಕ್ ನೊಳಗಿರುವ ಸೆನ್ಸಾರ್ ಗೆ ಜಿಪಿಎಸ್ ತಂತ್ರಜ್ಞಾನ ಅಳವಡಿಸಲಾಗಿದೆ. ಯಾರು ಅದನ್ನು ಬಳಸುತ್ತಿದ್ದಾರೋ, ಅವರು ಎಲ್ಲಿದ್ದಾರೆ ಎಂಬ ಬಗ್ಗೆ ಈ ಸ್ಟಿಕ್ ಸಂಪೂರ್ಣ ವಿವರ ನೀಡಬಲ್ಲದು. ಕೇರ್ ಟೇಕರ್ ಗಳಿಗೆ ಆಟೋಮ್ಯಾಟಿಕ್ ಆಗಿ ಕರೆ, ಸಂದೇಶ ಅಥವಾ ಇಮೇಲ್ ರವಾನೆಯಾಗುತ್ತದೆ. ವಾರಕ್ಕೆರಡು ಬಾರಿ ಇದನ್ನು ಚಾರ್ಜ್ ಮಾಡಬೇಕು. ಈ ವರ್ಷಾಂತ್ಯಕ್ಕೆ ಇದು ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

 

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...