alex Certify
ಕನ್ನಡ ದುನಿಯಾ       Mobile App
       

Kannada Duniya

ಮುಂಬೈನಲ್ಲಿ ಟಾಯ್ಲೆಟ್ ಸಿಗದೆ ಬಾಡಿ ಬಿಲ್ಡರ್ ಗೆ ಪಜೀತಿ

bodybuilder

ಮಾರ್ಟಿನ್ ಫೋರ್ಡ್ ಅಂತರಾಷ್ಟ್ರೀಯ ಮಟ್ಟದ ಖ್ಯಾತ ಬಾಡಿ ಬಿಲ್ಡರ್. ಮುಂಬೈನ ಧಾರಾವಿಯಲ್ಲಿ ಸಾರ್ವಜನಿಕ ಶೌಚಾಲಯ ಹುಡುಕಿಕೊಂಡು ಸುಮಾರು 20 ನಿಮಿಷಗಳ ಕಾಲ ಅಲೆದಿದ್ದಾರೆ. ಧಾರಾವಿಯ ‘ಲಿಟಲ್ ಸ್ಟಾರ್ಸ್ ಜೂನಿಯರ್ ಹೈಸ್ಕೂಲ್’ ಮಕ್ಕಳನ್ನು ಭೇಟಿಯಾಗಲು ಮಾರ್ಟಿನ್ ಮುಂಬೈಗೆ ಬಂದಿದ್ರು. ಕಾರ್ಯಕ್ರಮ ಮುಗಿಸಿ ಹೊರಡುವಷ್ಟರಲ್ಲಿ ಅವರಿಗೆ ಮೂತ್ರವಿಸರ್ಜನೆಗೆ ಅರ್ಜೆಂಟಾಗಿತ್ತು.

b

ಕಾರ್ಯಕ್ರಮ ಆಯೋಜಕರ ಬಳಿ ಹತ್ತಿರದಲ್ಲೆಲ್ಲಾದ್ರೂ ಪಬ್ಲಿಕ್ ಟಾಯ್ಲೆಟ್ ಇದ್ಯಾ ಅಂತಾ ಕೇಳಿದ್ದಾರೆ. ಆದ್ರೆ ಸುತ್ತಮುತ್ತ ಎಲ್ಲೂ ಒಂದೇ ಒಂದು ಶೌಚಾಲಯವೂ ಇರಲಿಲ್ಲ.

ಬೇರೆ ದಾರಿ ಕಾಣದ ಮಾರ್ಟಿನ್ ಧಾರಾವಿಯ ಕೆಲ ಮನೆಗಳ ಬಾಗಿಲನ್ನೂ ತಟ್ಟಿದ್ರು. ಆದ್ರೆ ಒಂದೇ ಒಂದು ಮನೆಯಲ್ಲೂ ಶೌಚಾಲಯವಿರಲಿಲ್ಲ.

ಸುಮಾರು 20 ನಿಮಿಷಗಳ ಹುಡುಕಾಟದ ನಂತರ ಒಂದು ಟಾಯ್ಲೆಟ್ ಕಣ್ಣಿಗೆ ಬಿತ್ತು, ಆದ್ರೆ ದುರದೃಷ್ಟವಶಾತ್ ಅದು ಲಾಕ್ ಆಗಿತ್ತು. ಮೈತುಂಬಾ ಟ್ಯಾಟ್ಟೂ, ಕೇಸರಿ ಬಣ್ಣದ ಟೀ ಶರ್ಟ್, ಜೊತೆಗೊಂದಿಷ್ಟು ಬಾಡಿ ಬಿಲ್ಡರ್ ಗಳು, ಕಾರ್ಯಕ್ರಮ ಆಯೋಜಕರು, ಮಕ್ಕಳ ಹಿಂಡು. ಈ ಸ್ಥಿತಿಯಲ್ಲಿ ಟಾಯ್ಲೆಟ್ ಹುಡುಕಿಕೊಂಡು ಅಲೆಯುತ್ತಿದ್ದ ಮಾರ್ಟಿನ್ ರನ್ನು ನೋಡಿ ಎಲ್ಲರಿಗೂ ಅಚ್ಚರಿ. 20-25 ನಿಮಿಷಗಳ ನಂತರ ಕೊನೆಗೂ ಒಂದು ಸುಲಭ ಶೌಚಾಲಯ ಸಿಕ್ಕಿತ್ತು, ಟಾಯ್ಲೆಟ್ ಒಳಹೋಗಿ ಬಂದ ಮಾರ್ಟಿನ್ ರಿಲ್ಯಾಕ್ಸ್ ಆಗಿದ್ರು.

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...