alex Certify
ಕನ್ನಡ ದುನಿಯಾ       Mobile App
       

Kannada Duniya

ರಾಷ್ಟ್ರೀಯ ಬರಹ ಸ್ಪರ್ಧೆಯಲ್ಲಿ ಗೆದ್ದ ಇವಳಿಗೆ ಕೈಗಳಿಲ್ಲ

kmhg8-no-hands-1-620x400ಜೀವನದ ಕುರಿತು ಮಹಾತ್ವಾಕಾಂಕ್ಷೆ, ಸಾಧನೆಗೆ ತಕ್ಕುದಾದ ಪರಿಶ್ರಮ ಇವುಗಳಿದ್ದರೆ ಅಂಗವೈಕಲ್ಯ ಶಾಪವಾಗುವುದಿಲ್ಲ. ಏನಾದರೂ ಸಾಧಿಸಬೇಕೆಂಬ ಛಲವಿದ್ದರೆ ವ್ಯಕ್ತಿ ಎಂತಹ ಬಾಧೆಯನ್ನಾದರೂ ಮೆಟ್ಟಿನಿಲ್ಲುತ್ತಾನೆ. ಇಂತವರು ಹಲವರಿಗೆ ಪ್ರೇರಣೆಯಾಗುತ್ತಾರೆ ಕೂಡಾ.

ಇವಳಿಗೆ ಹುಟ್ಟಿನಿಂದಲೂ ಎರಡೂ ಕೈಗಳಿಲ್ಲ. ಕೈಗಳಿಲ್ಲದ ಈಕೆ ಭುಜದಿಂದಲೇ ಅದ್ಹೇಗೋ ಪೆನ್ನನ್ನು ಹಿಡಿಯುವುದನ್ನು ಕಲಿತಳು. ಪರಿಣಾಮವಾಗಿ ತರಗತಿಯಲ್ಲಿ ಸುಂದರ ಬರವಣಿಗೆ ಹೊಂದಿರುವ ವಿದ್ಯಾರ್ಥಿಗಳ ಪೈಕಿ ಇವಳೂ ಒಬ್ಬಳಾದಳು. ಶಾಲೆಗೆ ಸೇರಿಸಿಕೊಳ್ಳಲು ಹಿಂಜರಿದ ಶಿಕ್ಷಕರು ಇವಳ ಪ್ರಯತ್ನ, ದೃಢ ಮನಸ್ಸನ್ನು ನೋಡಿ ದಂಗಾದರು.

ಇವಳ ಹೆಸರು ಅನ್ಯಾ ಎಲ್ಲಿಕ್. ವರ್ಜಿನಿಯಾದ ಈ ಹುಡುಗಿಗೆ ಕೇವಲ 7 ವರ್ಷ ವಯಸ್ಸು. ಇವಳು ತನ್ನ ಅಂಗವೈಕಲ್ಯವನ್ನು ಎಂದೂ ಲಕ್ಷ್ಯಕ್ಕೆ ತೆಗೆದುಕೊಳ್ಳಲೇ ಇಲ್ಲ. ತನಗೆ ಕೈಗಳಿಲ್ಲ, ತಾನು ಎಲ್ಲರಂತಲ್ಲ ಎಂಬುದನ್ನು ಮರೆತು ಎಲ್ಲರ ಜೊತೆ ಬೆರೆತಳು.

ಒಮ್ಮೆ ಇವಳಿಗೆ ತಾನೂ ‘ಸುಂದರ ಬರವಣಿಗೆ’ ಸ್ಪರ್ಧೆಯಲ್ಲಿ ಭಾಗವಹಿಸಬೇಕು ಎನಿಸಿತು. ತಂದೆ, ತಾಯಿಯ ಬಳಿ ತನ್ನ ಆಸೆಯನ್ನು ಹೇಳಿಕೊಂಡಳು. ಮಗಳ ಉತ್ಸಾಹವನ್ನು ತಂದೆ-ತಾಯಿ, ಶಿಕ್ಷಕರು ಪ್ರೋತ್ಸಾಹಿಸಿದರು. ಕೊನೆಯಲ್ಲಿ ಇವಳನ್ನು ಶಾರೀರಿಕ ಹಾಗೂ ಭೌದ್ಧಿಕ ಮಟ್ಟ ಕಡಿಮೆ ಉಳ್ಳವರ ಗುಂಪಿಗೆ ಸೇರಿಸಿದರು. ಅನ್ಯಾ ಸ್ಪರ್ಧೆಯಲ್ಲಿ ಭಾಗವಹಿಸಿದಳು.

ಅದೊಂದು ರಾಷ್ಟ್ರೀಯ ಮಟ್ಟದ ಸ್ಪರ್ಧೆಯಾಗಿತ್ತು. ಅಲ್ಲಿ ತನ್ನ ಬರಹ ಕೌಶಲ್ಯವನ್ನು ತೋರಿಸಿದ ಅನ್ಯಾ, ಎಲ್ಲ 50 ಜನ ಸ್ಪರ್ಧಿಗಳನ್ನು ಹಿಂದಿಕ್ಕಿ ಮೊದಲ ಸ್ಥಾನವನ್ನು ತನ್ನದಾಗಿಸಿಕೊಂಡಳು. ಅನ್ಯಾಗೆ ‘ನಿಕೋಲಸ್ ಮ್ಯಾಕ್ಸಿಮ್ ಸ್ಪೆಷಲ್ ಅವಾರ್ಡ್’ ಮತ್ತು 67,000 ರೂಪಾಯಿಗಳ ನಗದು ಬಹುಮಾನ ಕೊಟ್ಟರು. ಅನ್ಯಾ, ಸ್ಪರ್ಧೆಗೆ ಬಂದ ನಿರ್ಣಾಯಕರನ್ನೂ ದಂಗಾಗಿಸಿದ್ದು ಸುಳ್ಳಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...