alex Certify
ಕನ್ನಡ ದುನಿಯಾ       Mobile App
       

Kannada Duniya

ಇವರಿಬ್ಬರೂ ಪ್ರೇಮಿಗಳಲ್ಲ ಸ್ವಾಮಿ, ಅಮ್ಮ-ಮಗ..!

ಕೆಲವರ ತ್ವಜೆ ನೋಡಿ ಅವ್ರ ವಯಸ್ಸು ಹೇಳೋದು ಕಷ್ಟ. ಕೆಲವರಿಗೆ ವಯಸ್ಸು ಜಾಸ್ತಿಯಾದ್ರೂ  ಹೆಚ್ಚು ಯಂಗ್ ಆಗಿ ಕಂಡ್ರೆ ಮತ್ತೆ ಕೆಲವರು ಚಿಕ್ಕ ವಯಸ್ಸಿನಲ್ಲಿಯೇ ವಯಸ್ಸಾದಂತೆ ಕಾಣ್ತಾರೆ. ಇಂಡೋನೇಷ್ಯಾದ ಜಕಾರ್ತಾದಲ್ಲಿ ವಾಸವಾಗಿರುವ ಮಹಿಳೆಯೊಬ್ಬಳು ಈಗ ವಯಸ್ಸಿನ ವಿಚಾರಕ್ಕೆ ಸುದ್ದಿಯಲ್ಲಿದ್ದಾಳೆ.

ಮಗನ ಜೊತೆಗಿರುವ ಆಕೆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪುಷ್ಪಾ ದೇವಿ ನೋಡಿದ ಯಾರೂ ಈಕೆಗೆ 50 ವರ್ಷವಾಯ್ತು ಎನ್ನಲು ಸಾಧ್ಯವಿಲ್ಲ. ಮಗನ ಜೊತೆಗಿರುವ ಫೋಟೋವನ್ನು ಜನರು ತಪ್ಪಾಗಿ ತಿಳಿದುಕೊಂಡಿದ್ದರು. ಇಬ್ಬರೂ ಪ್ರೇಮಿಗಳು ಎಂದುಕೊಂಡಿದ್ದರು. ಆದ್ರೆ ತಾಯಿ-ಮಗ ಎಂಬುದು ಗೊತ್ತಾಗ್ತಿದ್ದಂತೆ ಆಶ್ಚರ್ಯಗೊಂಡಿದ್ದಾರೆ.

ಪುಷ್ಪಾ ದೇವಿ ಯಶಸ್ವಿ ಉದ್ಯಮಿ. ಯುಟ್ಯೂಬ್  ಚಾನೆಲ್ ನಡೆಸ್ತಾಳೆ. 250000ಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾಳೆ ಪುಷ್ಪಾ. ಕಿರುತೆರೆಯಲ್ಲೂ ಕಾಣಿಸಿಕೊಳ್ಳುವ ಪುಷ್ಪಾ ಇನ್ಸ್ಟ್ರಾಗ್ರಾಮ್ ನಲ್ಲೂ ಸಾಕಷ್ಟು ಫಾಲೋವರ್ಸ್ ಹೊಂದಿದ್ದಾಳೆ. ನನ್ನ ವಯಸ್ಸು ಹೆಚ್ಚಾದಂತೆ ನಾನು ಮತ್ತಷ್ಟು ಚಿಕ್ಕವಳಾಗಿ ಕಾಣ್ತೇನೆಂದು ಜನರು ಹೇಳ್ತಾರೆ. ಇದು ನನಗೆ ಖುಷಿ ನೀಡುತ್ತೆ ಎನ್ನುವ ಪುಷ್ಪಾ ಉತ್ತಮ ಡಯೆಟ್ ಪಾಲಿಸ್ತಾಳೆ. ಪ್ರತಿದಿನ ಬ್ಯಾಡ್ಮಿಂಟನ್ ಆಡುವ ಪುಷ್ಪಾ ಜಂಬೋ, ಏರೋಬಿಕ್ ಮಾಡ್ತಾಳೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...