alex Certify
ಕನ್ನಡ ದುನಿಯಾ       Mobile App
       

Kannada Duniya

ಶಿಕ್ಷಕಿಯಾಗಲು ಇಂಥಾ ಕೆಲ್ಸ ಮಾಡ್ತಿದ್ದಾಳೆ ಯುವತಿ

milk

19 ವರ್ಷದ ಯುವತಿ ನೀತು ಶರ್ಮಾಗೆ ಶಿಕ್ಷಕಿಯಾಗಬೇಕು ಅನ್ನೋ ಆಸೆ. ಆದ್ರೆ ಮಗಳ ಶಿಕ್ಷಣಕ್ಕೆ ತಂದೆಯ ಬಳಿ ಹಣವಿಲ್ಲ. ಬಡತನವನ್ನೇ ಹೊದ್ದು ಮಲಗಿದ್ದ ರಾಜಸ್ತಾನದ ಪುಟ್ಟ ಕುಟುಂಬ ಅವರದ್ದು. ಹೇಗಾದ್ರೂ ಮಾಡಿ ಓದು ಮುಂದುವರಿಸಲೇಬೇಕು ಅನ್ನೋ ಹಠಕ್ಕೆ ಬಿದ್ದ ನೀತು, ಅದಕ್ಕೆ ಮಾರ್ಗವನ್ನೂ ಕಂಡುಕೊಂಡಿದ್ದಾಳೆ.

ಪ್ರತಿನಿತ್ಯ ಮನೆಮನೆಗೆ ಹಾಲು ಹಾಕಿ ನೀತು ತನ್ನ ಓದಿಗೆ ಬೇಕಾದ ಹಣವನ್ನು ಸಂಪಾದಿಸ್ತಾಳೆ. ಬೆಳಗ್ಗೆ 4 ಗಂಟೆಗೆ ಎದ್ದು ನೀತು ಭಂಡೋರ್ ಖುರ್ದ್ ಗ್ರಾಮದಲ್ಲಿರೋ ಮನೆಗಳಿಂದ ಹಾಲು ತರ್ತಾಳೆ. ಮೋಟಾರ್ ಸೈಕಲ್ ಏರಿ ಭರತ್ ಪುರದ ಎಲ್ಲಾ ಮನೆಗಳಿಗೂ ಹಾಲು ವಿತರಿಸ್ತಾಳೆ. ಸಹೋದರಿ ಸುಷ್ಮಾ ಕೂಡ ನೀತುಗೆ ಸಹಾಯ ಮಾಡ್ತಾಳೆ.

ನಂತರ ಸಂಬಂಧಿಕರ ಮನೆಯಲ್ಲಿ ಬಟ್ಟೆ ಬದಲಾಯಿಸಿಕೊಂಡು ನೀತು ಕಂಪ್ಯೂಟರ್ ಕ್ಲಾಸಿಗೆ ಹೋಗ್ತಾಳೆ. ಸಂಜೆ 5 ಗಂಟೆಗೆ ಮತ್ತೆ ಮನೆಮನೆಗೆ ಹಾಲು ಹಾಕ್ತಾಳೆ. ರಾತ್ರಿ 7.30ಕ್ಕೆ ಕೆಲಸ ಮುಗಿಸಿ ಮನೆಗೆ ಬರ್ತಾಳೆ. ಹೀಗೆ ಬಿಡುವಿಲ್ಲದ ಕೆಲಸ ಮಾಡುತ್ತ ತಿಂಗಳಿಗೆ 12000 ರೂಪಾಯಿ ಸಂಪಾದಿಸುತ್ತಿದ್ದಾಳೆ ನೀತು.

ಸರ್ಕಾರಿ ಕಾಲೇಜಿನಲ್ಲಿ ಪಿಯುಸಿ ಮುಗಿಸಿರೋ ನೀತು, ಈಗ ಕರೆಸ್ಪಾಂಡೆನ್ಸ್ ಬಿಎ ಮಾಡ್ತಿದ್ದಾಳೆ. ಹೇಗಾದ್ರೂ ಮಾಡಿ ಶಿಕ್ಷಣ ಮುಂದುವರಿಸಬೇಕು ಅನ್ನೋ ಆಸೆಯಿಂದ ನೀತು ಬೈಕ್ ಓಡಿಸೋದನ್ನು ಕಲಿತಿದ್ಲು. ಆರಂಭದಲ್ಲಿ ಹುಡುಗಿ ಬೈಕ್ ಓಡಿಸ್ತಾಳೆ ಅಂತಾ ಎಲ್ರೂ ಆಡಿಕೊಂಡಿದ್ರು. ಆದ್ರೆ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತನ್ನ ಗುರಿಯನ್ನು ಗಮನದಲ್ಲಿಟ್ಟುಕೊಂಡು ಅದನ್ನು ಸಾಧಿಸುವತ್ತ ನೀತು ಹೆಜ್ಜೆ ಇಟ್ಟಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...