alex Certify
ಕನ್ನಡ ದುನಿಯಾ       Mobile App
       

Kannada Duniya

2ನೇ ಬಾರಿ ಪ್ರೀತಿಗೆ ಬೀಳುವ ಮೊದಲು ಇದನ್ನು ಯೋಚಿಸಿ

ಪ್ರೀತಿಯಲ್ಲಿ ಬಿದ್ದವರು ಎಲ್ಲವನ್ನೂ ಮರೆತು ಬಿಡ್ತಾರೆ. ಪ್ರೀತಿಗೆ ಜೀವನವನ್ನೇ ಬದಲಿಸುವ ಶಕ್ತಿಯಿದೆ. ಪ್ರೀತಿಯಲ್ಲಿ ಬಿದ್ದವರಿಗೆ ಪ್ರಪಂಚವೆಲ್ಲ ಸುಂದರವಾಗಿ ಕಾಣುತ್ತದೆ. ತಮ್ಮದೇ ಲೋಕದಲ್ಲಿ ಜೀವಿಸುವ ಜನರು ಕನಸು ಕಾಣ್ತಾರೆ. ಆದ್ರೆ ಪ್ರೀತಿ ಮುರಿದು ಬಿದ್ದಾಗ ಆಗುವ ನೋವು ಅಷ್ಟಿಷ್ಟಲ್ಲ.

ಮೊದಲ ಪ್ರೀತಿ ಮುರಿದು ಬಿದ್ದಾಗ ಜೀವನವೇ ಮುಗಿದು ಹೋಯ್ತು ಎಂದುಕೊಳ್ಳುವ ಪ್ರೇಮಿಗಳು ಆ ದುಃಖದಿಂದ ಹೊರ ಬರಲು ಮತ್ತೊಂದು ಪ್ರೀತಿಯನ್ನು ಅರಸುತ್ತಾರೆ. ಖಾಲಿಯಾಗಿರುವ ಹೃದಯವನ್ನು ಕೆಲವರು ಬೇಗ ತುಂಬಿಸಿಕೊಳ್ತಾರೆ. ಮತ್ತೆ ಕೆಲವರು ಮತ್ತೆ ಪ್ರೀತಿಯ ಜಗತ್ತಿಗೆ ಬರಲು ಸಮಯ ತೆಗೆದುಕೊಳ್ತಾರೆ. ಏನೇ ಆಗ್ಲಿ ಎರಡನೇ ಪ್ರೀತಿಗೂ ಮುನ್ನ ಕೆಲವೊಂದು ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ.

ಏನು ನಡೆದಿದೆಯೋ ಅದು ಮುಗೀತು. ಅದನ್ನು ಮತ್ತೆ ಮತ್ತೆ ನೆನಪು ಮಾಡಿಕೊಳ್ಳುವ ಅಗತ್ಯವಿಲ್ಲ. ಹಳೆ ನೆನಪುಗಳನ್ನು ಸಂಪೂರ್ಣ ಮರೆತುಬಿಡಿ. ಹೊಸ ಸಂಗಾತಿ ಜೊತೆ ಹೊಸ ಜೀವನ ಶುರು ಮಾಡಿ. ಅಪ್ಪಿತಪ್ಪಿಯೂ ಹಳೆ ಕಥೆಯನ್ನು ಅವ್ರ ಮುಂದೆ ಹೇಳಬೇಡಿ. ಅವ್ರು ನೊಂದುಕೊಳ್ಳುವ ಸಾಧ್ಯತೆಯಿರುತ್ತದೆ. ಫೋಟೋ, ವಿಡಿಯೋ, ಸಂದೇಶಗಳನ್ನು ಡಿಲೀಟ್ ಮಾಡಿ.

ಎರಡನೇ ಆಯ್ಕೆಗೂ ಮುನ್ನ ನಿಮ್ಮ ಮನಸ್ಸನ್ನು ಅರ್ಥ ಮಾಡಿಕೊಳ್ಳಿ. ಪ್ರೀತಿ ಆಯ್ಕೆ ವೇಳೆ ಆತುರ ಬೇಡ. ಏಕಾಂತ ಬಯಸುವವರು ನೀವಾಗಿದ್ದರೆ ನಿಮಗೆ ಏಕಾಂತ ನೀಡುವ ಸಂಗಾತಿಯನ್ನೇ ಆಯ್ಕೆ ಮಾಡಿಕೊಳ್ಳಿ. ಆರಂಭದಲ್ಲಿ ಎಲ್ಲವೂ ಸುಂದರವಾಗಿರುತ್ತದೆ. ದಿನ ಕಳೆದಂತೆ ಸಣ್ಣ ಸಂಗತಿ ದೊಡ್ಡ ಸಮಸ್ಯೆಗೆ ಕಾರಣವಾಗುತ್ತದೆ.

ಅತಿಯಾದ್ರೆ ಅಮೃತವೂ ವಿಷ. ಹಾಗಾಗಿ ಸದಾ ನಿಮ್ಮನ್ನಂಟಿಕೊಳ್ಳುವ ಅಥವಾ ನಿಮಗೆ ಆರ್ಡರ್ ಮಾಡುವ ಸಂಗಾತಿಯಿಂದ ದೂರವಿರಿ. ನಿಮಗೂ ವಿಶ್ರಾಂತಿ ಬೇಕು ಎಂಬುದು ನೆನಪಿರಲಿ.

ಜೀವನದಲ್ಲಿ ಒಪ್ಪಂದ ಅನಿವಾರ್ಯ. ಹಾಗಂತ ಪ್ರತಿ ಬಾರಿಯೂ ನೀವೇ ಮಂಡಿಯೂರಬೇಕಾಗಿಲ್ಲ. ಇಬ್ಬರ ನಡುವೆ ಪರಸ್ಪರ ಗೌರವ, ಪ್ರೀತಿ ಇರಬೇಕು. ಒಬ್ಬರೇ ಪ್ರತಿ ಬಾರಿ ರಾಜಿಯಾಗುತ್ತಿದ್ದರೆ ಜೀವನದಲ್ಲಿ ನೆಮ್ಮದಿ, ಸುಖ ಸತ್ತು ಹೋಗುತ್ತದೆ ಎಂಬುದು ನೆನಪಿರಲಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...