alex Certify
ಕನ್ನಡ ದುನಿಯಾ       Mobile App
       

Kannada Duniya

ಲೈಂಗಿಕ ಜೀವನವನ್ನು ಸುಂದರಗೊಳಿಸುತ್ತೆ ಸೆಕ್ಸಿ ಗೇಮ್ಸ್

ದಾಂಪತ್ಯದಲ್ಲಿ ಸೆಕ್ಸ್ ಬಹುಮುಖ್ಯ ಪಾತ್ರವಹಿಸುತ್ತದೆ. ಮದುವೆಯಾದ ಮೊದಲ ವರ್ಷ ಸೆಕ್ಸ್ ಮೇಲಿರುವ ಆಸಕ್ತಿ, ರುಚಿ 4-5 ವರ್ಷವಾದ್ಮೇಲೆ ಇರೋದಿಲ್ಲ. ಸೆಕ್ಸ್ ನಲ್ಲಿರುವ ವಿನೋದ, ಉತ್ಸಾಹ, ಕಾಮುಕತೆ ಕಡಿಮೆಯಾಗುತ್ತದೆ. ಸೆಕ್ಸ್ ಒಂದು ಸಾಮಾನ್ಯ, ಬೇಸರದ ಸಂಗತಿಯಾಗುತ್ತದೆ. ನಿಧಾನವಾಗಿ ಸೆಕ್ಸ್ ಜೀವನದಿಂದ ದೂರವಾಗುತ್ತ ಹೋಗುತ್ತದೆ. ಮದುವೆ ಆರಂಭದ ದಿನಗಳಲ್ಲಿದ್ದ ಉತ್ಸಾಹ, ಕಾಮುಕತೆ ಮತ್ತೆ ಬರಬೇಕೆಂದ್ರೆ ಕೆಲವೊಂದು ಗೇಮ್ಸ್ ಅನುಸರಿಸಿ.

ಸಂಗಾತಿ ಮಧ್ಯೆ ಸೆಕ್ಸ್ ಗೇಮ್ಸ್ ಬಹಳ ಮುಖ್ಯ. ಸಂಗಾತಿಗಳು ಒಂದು ಚೀಟಿಯಲ್ಲಿ ತಮಗಿಷ್ಟವಾಗುವುದನ್ನು ಬರೆಯಬೇಕು. ಕೂದಲಿನ ಜೊತೆ ಆಟ, ಮುತ್ತು, ಕೈ, ಕೈ ಹಿಡಿದು ಕುಳಿತುಕೊಳ್ಳುವುದು ಹೀಗೆ ತಮಗಿಷ್ಟವೆನಿಸುವುದನ್ನು ಬರೆಯಬೇಕು. ಎಲ್ಲ ಚೀಟಿಯನ್ನು ಕುಲಕಿ ಒಂದು ಚೀಟಿಯನ್ನು ತೆಗೆದು ಅದ್ರಲ್ಲಿರುವುದನ್ನು ಓದಿ, ಅದ್ರಲ್ಲಿದ್ದಂತೆ ನಡೆದುಕೊಳ್ಳಬೇಕು. ಇದು ಸಂಗಾತಿ ಮಧ್ಯೆ ಮತ್ತೆ ಹೊಸ ಉತ್ಸಾಹ ಮೂಡಿಸಲು ನೆರವಾಗುತ್ತದೆ.

ಸಂಗಾತಿ ಜೊತೆ ಕಾರ್ಡ್ ಆಟ ಕೂಡ ಆಡಬಹುದು. ಆಟದಲ್ಲಿ ಸೋತವರು ಒಂದೊಂದೆ ಬಟ್ಟೆ ಬಿಚ್ಚಬೇಕು. ಸಂಗಾತಿ ಸಂಪೂರ್ಣ ಬೆತ್ತಲಾಗುವವರೆಗೂ ಈ ಆಟ ಮುಂದುವರೆಸಬಹುದು.

ಐಸ್ ಕ್ರೀಂ, ಚಮಚದ ಸಹಾಯದಿಂದಲೂ ಸೆಕ್ಸಿ ಗೇಮ್ ಆಡಬಹುದು. ಕಡಿಮೆ ಬಟ್ಟೆ ಧರಿಸಿ ಸಂಗಾತಿಯೊಬ್ಬರ ಕಣ್ಣಿಗೆ ಬಟ್ಟೆ ಕಟ್ಟಿ ಚಮಚದಿಂದ ಇನ್ನೊಬ್ಬರಿಗೆ ಐಸ್ ಕ್ರೀಂ ತಿನ್ನಿಸುವಂತೆ ಹೇಳುವುದು. ಐಸ್ ಕ್ರೀಂ ದೇಹದ ಮೇಲೆಲ್ಲ ಬೀಳುತ್ತದೆ. ಅದನ್ನೂ ಸಂಗಾತಿ ತೆಗೆಯಬೇಕು. ಇದು ಕೂಡ ಸಂಗಾತಿ ಮಧ್ಯೆ ಸೆಕ್ಸ್ ಉತ್ತೇಜನಕ್ಕೆ ಕಾರಣವಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...