alex Certify
ಕನ್ನಡ ದುನಿಯಾ       Mobile App
       

Kannada Duniya

ಆನ್ಲೈನ್ ನಲ್ಲೊಂದೇ ಅಲ್ಲ ಇಲ್ಲೂ ಸಿಗ್ತಾರೆ ಮನಮೆಚ್ಚುವ ಸಂಗಾತಿ

ಸ್ನೇಹಿತರಲ್ಲಿ ನಾನೊಬ್ಬನೇ ಸಿಂಗಲ್. ಸಂಗಾತಿ ಹುಡುಕೋದು ದೊಡ್ಡ ತಲೆನೋವಾಗಿದೆ. ಮ್ಯಾರೇಜ್ ಪೋರ್ಟಲ್ ನೋಡಿ ನೋಡಿ ಸಾಕಾಗಿದೆ ಎನ್ನುವವರಲ್ಲಿ ನೀವೂ ಒಬ್ಬರಾ? ಕೇವಲ ಮ್ಯಾರೇಜ್ ಪೋರ್ಟಲ್ ನಲ್ಲಿ ಮಾತ್ರವಲ್ಲ ಬೇರೆ ಕಡೆಯೂ ನೀವು ಮೆಚ್ಚುವ ಸಂಗಾತಿ ಸಿಗಬಹುದು.

ಬಾರ್ ಮತ್ತು ನೈಟ್ ಕ್ಲಬ್ : ನಿಮ್ಮ ಸಂಗಾತಿಯನ್ನು ಹುಡುಕಲು ಬಾರ್ ಮತ್ತು ನೈಟ್ ಕ್ಲಬ್ ಸೂಕ್ತ ಸ್ಥಳ. ನೀವು ಬಾರ್ ಅಥವಾ ನೈಟ್ ಕ್ಲಬ್ ಗೆ ಹೋಗುವವರಾಗಿದ್ದು, ಹುಡುಗಿಯರ ಜೊತೆ ಬೆರೆಯುತ್ತೀರೆಂದಾದ್ರೆ ಹುಡುಗಿ ಹುಡುಕೋದು ದೊಡ್ಡ ಸಮಸ್ಯೆಯಲ್ಲ. ಅಲ್ಲಿ ಬೇರೆ ಬೇರೆ ಸ್ವಭಾವದ ಹುಡುಗಿಯರು ನಿಮಗೆ ಸಿಗ್ತಾರೆ. ನಿಮಗಿಷ್ಟವಾಗುವ ಹುಡುಗಿ ಕೂಡ ಅಲ್ಲಿ ಸಿಗಬಹುದು.

ಮದುವೆ : ಸಂಗಾತಿ ಹುಡುಕಲು ಎರಡನೇ ಅತ್ಯುತ್ತಮ ಸ್ಥಳ ಮದುವೆ. ಭಾರತದಲ್ಲಿ ಮದುವೆಗಳು ಅದ್ಧೂರಿಯಾಗಿ ನಡೆಯುತ್ತವೆ. ಕೆಲವೊಮ್ಮೆ ಸಂಬಂಧಿಕರು, ಸ್ನೇಹಿತರ ಮದುವೆಗೆ ನಾವು ಹೋಗೋದಿಲ್ಲ. ಆದ್ರೆ ಮದುವೆಯಲ್ಲಿ ನಿಮಗೆ ತುಂಬಾ ಆಯ್ಕೆಗಳಿರುತ್ತವೆ. ದೂರದೂರುಗಳಿಂದ ವಧು-ವರರ ಸಂಬಂಧಿ, ಸ್ನೇಹಿತರು ಮದುವೆಗೆ ಬರ್ತಾರೆ. ಅಲ್ಲಿ ಕೂಡ ನಿಮ್ಮಿಷ್ಟದ ಸಂಗಾತಿ ನಿಮಗೆ ಸಿಗುವ ಸಂಭವ ಹೆಚ್ಚಿರುತ್ತದೆ.

ಜಿಮ್ : ಜಿಮ್ ಬೆವರಿಳಿಸಲು ಮಾತ್ರವಲ್ಲ ಸಂಗಾತಿ ಹುಡುಕಾಟಕ್ಕೂ ಸೂಕ್ತ ಸ್ಥಳ. ಹಾಗಾಂತ ಕಂಡ ಕಂಡ ಹುಡುಗಿಯನ್ನು ಪ್ರಪೋಸ್ ಮಾಡುವುದು ಸರಿಯಲ್ಲ. ಮೊದಲು ಸ್ನೇಹ ಬೆಳೆಸಿ. ನಿಮಗೆ ಹೊಂದುತ್ತಾರೆಂದಾದ್ರೆ ಮಾತ್ರ ಮುಂದುವರೆಯಿರಿ.

ಕಚೇರಿ : ಆಫೀಸ್ ನಲ್ಲಿ ಕೂಡ ಸಂಗಾತಿಯನ್ನು ಹುಡುಕಿಕೊಳ್ಳಬಹುದು. ಆದ್ರೆ ಆತುರ ಬೇಡ. ಮೊದಲು ಸ್ನೇಹ ಬೆಳೆಸಿ. ಅವರು ನಿಮ್ಮ ಬಗ್ಗೆ ಆಸಕ್ತಿ ತೋರಿದಲ್ಲಿ ಕಚೇರಿ ಸಮಯ ಮುಗಿದ ನಂತ್ರ ಮಾತುಕತೆ ನಡೆಸಬಹುದು. ಆದ್ರೆ ನಿಮ್ಮ ನಡವಳಿಕೆ ಬಗ್ಗೆ ಕಚೇರಿಯಲ್ಲಿ ಮಾತನಾಡಿಕೊಳ್ಳದಂತೆ ಎಚ್ಚರ ವಹಿಸಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...