alex Certify ಲಕ್ಷ್ಮಿ ಒಲಿಸಿಕೊಳ್ಳಲು ಮನೆಯ ʼಮುಖ್ಯ ದ್ವಾರʼದ ಮುಂದೆ ಮಾಡಿ ಈ ಉಪಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಕ್ಷ್ಮಿ ಒಲಿಸಿಕೊಳ್ಳಲು ಮನೆಯ ʼಮುಖ್ಯ ದ್ವಾರʼದ ಮುಂದೆ ಮಾಡಿ ಈ ಉಪಾಯ

ಮನೆಯ ಮುಖ್ಯ ದ್ವಾರಕ್ಕೆ ಬಹಳ ಮಹತ್ವವಿದೆ. ಮುಖ್ಯದ್ವಾರದಿಂದ ಲಕ್ಷ್ಮಿ ಮನೆಯೊಳಗೆ ಪ್ರವೇಶ ಮಾಡ್ತಾಳೆ. ಹಾಗಾಗಿ ದೀಪಾವಳಿಯ ಶುಭ ದಿನದಂದು ದೇವರ ಮನೆಯೊಂದೇ ಅಲ್ಲ ಮನೆಯ ಮುಖ್ಯದ್ವಾರಕ್ಕೂ ಮಹತ್ವ ನೀಡಬೇಕು. ಮನೆಯ ಮುಖ್ಯದ್ವಾರವನ್ನು ಅಲಂಕರಿಸುವ ಜೊತೆಗೆ ಕೆಲವೊಂದು ವಿಷಯಗಳನ್ನು ತಪ್ಪದೆ ಪಾಲಿಸಿದ್ರೆ ಲಕ್ಷ್ಮಿ ಮನೆ ಪ್ರವೇಶ ಮಾಡುವುದರಲ್ಲಿ ಎರಡು ಮಾತಿಲ್ಲ.

ಮನೆಯ ಮುಖ್ಯ ದ್ವಾರದ ಮುಂದೆ ತಾಯಿ ಲಕ್ಷ್ಮಿಯ ಹೆಜ್ಜೆ ಗುರುತುಗಳನ್ನು ಬಿಡಿಸಬೇಕು. ಇದನ್ನು ಶುಭವೆಂದು ನಂಬಲಾಗಿದೆ. ಹೆಜ್ಜೆ ಗುರುತಿನ ಬಗ್ಗೆ ಗಮನ ನೀಡಬೇಕಾಗುತ್ತದೆ. ಲಕ್ಷ್ಮಿ ಮನೆ ಪ್ರವೇಶ ಮಾಡುತ್ತಿರುವಂತೆ ಹೆಜ್ಜೆ ಗುರುತು ಇರುವುದು ಬಹಳ ಮುಖ್ಯ.

ಲಕ್ಷ್ಮಿ ಹೆಜ್ಜೆ ಗುರುತಿನ ಜೊತೆಗೆ ಮನೆ ಹಾಗೂ ಕಚೇರಿಯ ಮುಖ್ಯ ದ್ವಾರದ ಮುಂದೆ ಓಂ ಬಿಡಿಸಿ, ಶುಭ-ಲಾಭ ಎಂದು ಬರೆಯಿರಿ. ಈ ಚಿಹ್ನೆಯನ್ನು ಪೂರ್ವ ಅಥವಾ ಉತ್ತರ ದಿಕ್ಕಿಗೆ ಮಾತ್ರ ಬರೆಯಬೇಕು. ಹೀಗೆ ಮಾಡುವುದರಿಂದ ಕುಟುಂಬಸ್ಥರು ಆರೋಗ್ಯವಾಗಿರ್ತಾರೆ.

ಮುಖ್ಯದ್ವಾರಕ್ಕೆ ಬೆಳ್ಳಿಯ ಸ್ವಸ್ಥಿಕವನ್ನು ಅಳವಡಿಸುವುದು ಮಂಗಳಕರ. ಹೀಗೆ ಮಾಡಿದ್ರೆ ರೋಗ ಬರುವುದಿಲ್ಲವೆಂದು ವಾಸ್ತು ಶಾಸ್ತ್ರ ಹೇಳುತ್ತದೆ. ಇದನ್ನು ಮಾಡಲು ಸಾಧ್ಯವಾಗದವರು ಕೆಂಪು ಕುಂಕುಮದಲ್ಲಿ ಸ್ವಸ್ಥಿಕವನ್ನು ರಚಿಸಬಹುದು.

ದೀಪಾವಳಿಯಂದು ಮಡಿಕೆಯಲ್ಲಿ ನೀರು ಹಾಕಿ ಅದರೊಳಗೆ ಹೂವನ್ನಿಡಿ. ಈ ಮಡಿಕೆಯನ್ನು ಮುಖ್ಯದ್ವಾರದ ಪೂರ್ವ ಅಥವಾ ಉತ್ತರ ಭಾಗಕ್ಕೆ ಇಡುವುದು ಒಳ್ಳೆಯದು. ಆರ್ಥಿಕ ಅಭಿವೃದ್ಧಿಯ ಜೊತೆಗೆ ಮನೆಯ ಮುಖ್ಯಸ್ಥನಿಗೆ ಲಾಭವಾಗುತ್ತದೆ.

ದೀಪಾವಳಿಗೂ ಮುನ್ನ ಮನೆಯ ಮುಖ್ಯ ದ್ವಾರಕ್ಕೆ ಸುಂದರವಾದ ತೋರಣವನ್ನು ಹಾಕಿ. ಮಾವಿನ ಎಲೆ ಅಥವಾ ಅಶೋಕ  ಎಲೆಯಿಂದ ಮಾಡಿದ ತೋರಣವನ್ನು ಹಾಕುವುದು ಶುಭ. ಹೀಗೆ ಮಾಡುವುದರಿಂದ ನಕಾರಾತ್ಮಕ ಶಕ್ತಿ ಮನೆಯನ್ನು ಪ್ರವೇಶ ಮಾಡುವುದಿಲ್ಲ.

ಮನೆಯ ಮುಖ್ಯ ದ್ವಾರದ ಮೇಲೆ ಕಮಲದ ಮೇಲೆ ಕುಳಿತಿರುವ ಲಕ್ಷ್ಮಿ ಚಿತ್ರವನ್ನು ಅಂಟಿಸಿ. ಇದರಿಂದ ಸಾಕಷ್ಟ ಶುಭ ಫಲಗಳು ನಿಮ್ಮದಾಗಲಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...