alex Certify
ಕನ್ನಡ ದುನಿಯಾ       Mobile App
       

Kannada Duniya

….ಇದು ಅಪೂರ್ಣವಾದ್ರೆ ಸಂಗಾತಿ ಮೇಲೆ ಹೆಚ್ಚುತ್ತೆ ಸಂಶಯ

relationship_1497684720_749x421

ನಿಮ್ಮ ಸಂಗಾತಿ ನಿಮ್ಮನ್ನು ಅನುಮಾನದಿಂದ ನೋಡ್ತಿದ್ದಾರೆ ಇಲ್ಲ ನೀವು ನಿಮ್ಮ ಸಂಗಾತಿಯನ್ನು ಸಂಶಯದಿಂದ ನೋಡುತ್ತಿದ್ದೀರೆಂದಾದ್ರೆ ಚಿಂತೆ ಮಾಡಬೇಡಿ. ನಿಮ್ಮ ದಿನನಿತ್ಯದ ಕೆಲಸದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳಿ. ಸಾಧ್ಯವಾದಷ್ಟು ಸುಖ ನಿದ್ರೆ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.

ನಿದ್ರೆಗೂ ಸಂಶಯಕ್ಕೂ ಏನು ಸಂಬಂಧ ಎನ್ನಬೇಡಿ. ಇತ್ತೀಚೆಗೆ ನಡೆದ ಸಂಶೋಧನೆಯೊಂದು ಇದನ್ನು ಸ್ಪಷ್ಟಪಡಿಸಿದೆ. ನಿದ್ರೆ ಸರಿಯಾಗಿಲ್ಲವೆಂದಾದಲ್ಲಿ ಸಂಶಯ ಜಾಸ್ತಿಯಾಗುತ್ತದೆ ಎಂದು ಸಂಶೋಧನೆ ಹೇಳಿದೆ. ನಿದ್ರೆ ಕಡಿಮೆಯಾದ್ರೆ ಸಂಶಯಪಡುವ ಪ್ರವೃತ್ತಿಯಲ್ಲಿ ವೃದ್ಧಿಯಾಗುತ್ತದೆಯಂತೆ.

ಷೇಕ್ಸ್ ಪಿಯರ್ ತಮ್ಮ ನಾಟಕ ಮ್ಯಾಕ್ ಬೆತ್ ನಲ್ಲಿ ನಿದ್ರಾಹೀನತೆಗೂ ಸಂದೇಹಕ್ಕೂ ಸಂಬಂಧವಿದೆ ಎಂದು ಬರೆದಿದ್ದರು. ಈಗ ವಿಜ್ಞಾನಿಗಳು ಇದನ್ನೇ ಹೇಳಿದ್ದಾರೆ. ನಿದ್ರಾಹೀನತೆ ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಲಂಡನ್ ನ ಕಿಂಗ್ಸ್ ಕಾಲೇಜು ನಡೆಸಿದ ಸಂಶೋಧನೆಯಲ್ಲಿ  ಈ ವಿಷಯ ತಿಳಿದುಬಂದಿದೆ. ನಿದ್ರೆ ಸರಿಯಾಗಿ ಬರದಿದ್ದಲ್ಲಿ ನಮ್ಮ ಇಡೀ ದಿನ ಹಾಳಾಗುತ್ತದೆ. ಒತ್ತಡ, ಸಿಟ್ಟು ಹೆಚ್ಚಾಗುತ್ತದೆ. ನಿದ್ರೆ ನಮ್ಮ ಮಾನಸಿಕ ಆರೋಗ್ಯದ ಮೇಲೆ ಮಹತ್ವದ ಪರಿಣಾಮ ಬೀರುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಸಂಶೋಧಕರು 300 ಮಂದಿ ಮೇಲೆ ಅಧ್ಯಯನ ನಡೆಸಿದ್ದಾರೆ. ಅವರ ನಿದ್ರೆ ಮಾಡುವ ಸಮಯವನ್ನು ಅಧ್ಯಯನಕ್ಕೆ ತೆಗೆದುಕೊಳ್ಳಲಾಗಿದೆ. ನಿದ್ರಾಹೀನತೆಗೊಳಗಾಗಿದ್ದ ಶೇಕಡಾ 50ರಷ್ಟು ಮಂದಿಗೆ ಅಸುರಕ್ಷತೆ ಕಾಡ್ತಾ ಇತ್ತು ಎಂದು ಸಂಶೋದಕರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...