alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ಪ್ರೇಮಿಗಳಿಗೊಂದು ಮುಖ್ಯ ಮಾಹಿತಿ

dating-couple

ಡೇಟಿಂಗ್ ಗೆ ಯಾವುದೇ ನಿಯಮಗಳಿಲ್ಲ. ಹೀಗೆ ಆಗಬೇಕು ಅನ್ನೋ ಕಟ್ಟುಪಾಡುಗಳಿಲ್ಲ. ಅದು ಸಹಜವಾಗಿ ನಡೆಯುವ ಪ್ರಕ್ರಿಯೆ. ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸುವ ಮಾಧ್ಯಮಗಳಲ್ಲೊಂದು. ಡೇಟಿಂಗ್ ನ ಕೆಲವೊಂದು ಹಳೆಯ ರೀತಿ- ನೀತಿಗಳನ್ನು 21ನೇ ಶತಮಾನದ ಪ್ರೇಮಿಗಳು ಕಿತ್ತೊಗೆಯಬೇಕಿದೆ.

21ನೇ ಶತಮಾನಕ್ಕೆ ಕಾಲಿಟ್ಟರೂ ಮಹಿಳೆಯರಲ್ಲಿ ಪುರುಷನೇ ಮೊದಲು ಪ್ರೇಮ ನಿವೇದನೆ ಮಾಡಲಿ ಅನ್ನೋ ಭಾವನೆ ಬೇರೂರಿದೆ. ನಿಮಗೆ ಯಾರಾದ್ರೂ ಇಷ್ಟವಾಗಿದ್ರೆ ಅವನು ಹೇಳುವವರೆಗೆ ಯಾಕೆ ಕಾಯಬೇಕು? ನೀವೇ ಅದನ್ನು ವ್ಯಕ್ತಪಡಿಸಬಹುದು.

ಹುಡುಗ- ಹುಡುಗಿ ಡೇಟಿಂಗ್ ಗೆ ಹೋದಾಗ ಬಿಲ್ ಪಾವತಿಸುವ ಸರದಿ ಹುಡುಗನದ್ದು. ಮೊದಲಿನಿಂದ್ಲೂ ಇದೇ ಅಭ್ಯಾಸ ಬೆಳೆದುಕೊಂಡು ಬಂದಿದೆ. ಹೋಟೆಲ್, ಸಿನೆಮಾ ಎಲ್ಲಿಗೇ ಹೋದ್ರೂ ಹುಡುಗನೇ ಬಿಲ್ ಕೊಟ್ರೆ ಆತ ಜಂಟಲ್ ಮ್ಯಾನ್ ಅನ್ನೋ ಭಾವನೆ ಇದೆ. ಆದ್ರೆ ಮಹಿಳೆ ಕೂಡ ಈಗ ಸ್ವಾವಲಂಬಿಯಾಗಿದ್ದಾಳೆ. ಹಾಗಾಗಿ ಬಿಲ್ ಶೇರ್ ಮಾಡಿಕೊಳ್ಳುವ ಮೂಲಕ ಹಳೆ ರೂಲ್ಸ್ ಬ್ರೇಕ್ ಮಾಡ್ಬಹುದು.

ಕ್ಯಾಂಡಲ್ ಲೈಟ್ ಡಿನ್ನರ್, ಮೃದುವಾದ ಮ್ಯೂಸಿಕ್, ರೊಮ್ಯಾಂಟಿಕ್ ಮೂಡ್, ಹಾಡು ನೃತ್ಯ, ಕಿಸ್ಸಿಂಗ್ ಇವೆಲ್ಲ ಸಿನೆಮಾಗಳಲ್ಲಿ ನಡೆಯುತ್ತವೆ. ನಿಜ ಜೀವನದಲ್ಲೂ ಡೇಟಿಂಗ್ ಹೀಗೆ ಇರಬೇಕು ಎಂಬ ಕಲ್ಪನೆ ತಪ್ಪು. ವಾಸ್ತವವಾದಿಯಾಗಿರಿ, ನೀವು ಯಾವಾಗ್ಲೂ ಭೇಟಿಯಾಗೋ ಸ್ಥಳದಲ್ಲೂ ಡೇಟಿಂಗ್ ಮಾಡಬಹದು. ಎಲ್ಲದಕ್ಕಿಂತ ಪರಸ್ಪರರನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ.

ಜೊತೆಯಾಗಿ ಜಾಸ್ತಿ ಸಮಯ ಕಳೆದ್ರೆ ಹೆಚ್ಚು ಆತ್ಮೀಯತೆ ಬೆಳೆಯುತ್ತೆ ಅನ್ನೋದು ತಪ್ಪು ಗ್ರಹಿಕೆ. ಪ್ರೀತಿಯ ಭಾವನೆ ಒಂದೇ ಕ್ಷಣದಲ್ಲಿ ಕೂಡ ಮೂಡಬಹುದು. ಆದ್ರೆ ಸಂಗಾತಿಯ ಜೊತೆಗೆ ಹೆಚ್ಚು ಸಮಯ ಕಳೆಯುವುದು ಉತ್ತಮ. ಆದ್ರೂ ಹಾಗೇ ಮಾಡಬೇಕೆಂದೇನೂ ಇಲ್ಲ. ಅಲ್ಪ ಸಮಯದ ಭೇಟಿ ಕೂಡ ಮನಸ್ಸಿಗೆ ಮುದ ನೀಡಬಲ್ಲದು.

ಡೇಟಿಂಗ್ ಗೆ ಹೋಗಿ ಬಂದ ತಕ್ಷಣ ಅಲ್ಲಿ ನಡೆದ ಘಟನೆಯನ್ನು ಇಂಚಿಂಚಾಗಿ ಸ್ನೇಹಿತ, ಸ್ನೇಹಿತೆಗೆ ವಿವರಿಸುವುದು ಮೊದಲಿನಿಂದ್ಲೂ ಇರುವ ಅಭ್ಯಾಸ. ಹೀಗೆ ಮಾಡೋದ್ರಿಂದ ಒಬ್ಬೊಬ್ಬರು ಒಂದೊಂದು ಅಭಿಪ್ರಾಯ ವ್ಯಕ್ತಪಡಿಸ್ತಾರೆ. ಆಗ ನಾವು ಇಷ್ಟಪಟ್ಟವರ ಬಗ್ಗೆ ಒಂದು ತೀರ್ಮಾನಕ್ಕೆ ಬರಬಹುದು ಅನ್ನೋ ಲೆಕ್ಕಾಚಾರವಿದೆ. ಆದ್ರೆ ಇದು ತಪ್ಪು ಗ್ರಹಿಕೆ, ಹೀಗೆ ಮಾಡುವುದರಿಂದ ಉತ್ತಮ ವ್ಯಕ್ತಿಯೊಬ್ಬನನ್ನು ನೀವು ಕಳೆದುಕೊಳ್ಳುವ ಸಾಧ್ಯತೆಯೂ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...