alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವೆಬ್ ಸೈಟ್ ಗಳಲ್ಲಿ ಸಿಗುತ್ತೆ ಉಚಿತ ಸಾಫ್ಟ್ ವೇರ್…!

Docs.zoho.com : ಇದೊಂದು ಫ್ರೀ ಅಕೌಂಟ್. ಇದಕ್ಕೆ ಸೈನ್ ಇನ್ ಆದ್ರೆ 1 ಜಿಬಿ ಸ್ಟೋರೇಜ್ ಸಿಗುತ್ತದೆ. ರೈಟರ್, ಶೀಟ್, ಪ್ರೆಸೆಂಟೇಶನ್, ಸ್ಪ್ರೆಡ್ ಶೀಟ್ ಇದರಲ್ಲಿ ಲಭ್ಯವಿದೆ. ಇದು ಲೀಗಲ್ ಕೂಡ ಆಗಿರೋದ್ರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ.

Ninite : ನೀವು ಹೊಸ ಕಂಪ್ಯೂಟರ್ ಖರೀದಿ ಮಾಡಿದ್ರೆ ಎಲ್ಲಾ ಯುಟಿಲಿಟಿ ಮತ್ತು ಟೂಲ್ಸ್ ಇನ್ ಸ್ಟಾಲ್ ಮಾಡಲು Ninite ಬೆಸ್ಟ್ ಆಪ್ಷನ್. ವೆಬ್ ಬ್ರೌಸರ್, ಮೀಡಿಯಾ ಪ್ಲೇಯರ್, ಫೋಟೋ ಇಮೇಜರ್, ಆಫೀಸ್ ಪ್ರೊಡಕ್ಟಿವಿಟಿ ಸೂಟ್, ಸೆಕ್ಯೂರಿಟಿ ಟೂಲ್ಸ್, ಮತ್ತು ಯುಟಿಲಿಟಿಸ್ ಸೇರಿ 80ಕ್ಕೂ ಹೆಚ್ಚು ವಿಭಾಗಗಳು ಇದರಲ್ಲಿವೆ.

File Hippo: ನಿಮ್ಮ ಪ್ರತಿ ಕಂಪ್ಯೂಟಿಂಗ್ ಟಾಸ್ಕ್ ಗೂ ಇಲ್ಲಿ ಸಾಫ್ಟ್ ವೇರ್ ಸಿಗುತ್ತದೆ. ಆ್ಯಂಟಿ ವೈರಸ್, ಕಂಪ್ರೆಷನ್ ಟೂಲ್ಸ್, ಫೈಲ್ ಶೇರಿಂಗ್, ಆಫೀಸ್ ಪ್ರೊಡಕ್ಟಿವಿಟಿ, ಫೋಟೋ ಇಮೇಜಿಂಗ್ ಸೇರಿ 18 ವಿಭಾಗಗಳಲ್ಲಿ ಡೌನ್ಲೋಡ್ ಮಾಡಬಹುದು.

File Puma: ಇದರ ಫ್ರಂಟ್ ಪೇಜ್ ನಲ್ಲೇ ನಿಮಗೆ ಪ್ರಮುಖ 6 ಸಾಫ್ಟ್ ವೇರ್ ಗಳು ಸಿಗುತ್ತವೆ. ಫ್ರೀ ಡೌನ್ಲೋಡ್ ಟೂಲ್ ಅನ್ನು ಇದು ಹೊಂದಿದೆ.

File Horse: ಇದರಲ್ಲಿ ಹೆಚ್ಚು ಸಾಫ್ಟ್ ವೇರ್ ಕಲೆಕ್ಷನ್ ಇಲ್ಲ. ಅತ್ಯಗತ್ಯವಾದ ಡೌನ್ಲೋಡ್ ಗಳನ್ನು ಸಂಗ್ರಹಿಸಲಾಗಿದೆ. ಹಳೆ ವರ್ಷನ್ ಸಾಫ್ಟ್ ವೇರ್ ಅನ್ನು ಕೂಡ ಇದು ಆರ್ಖೈವ್ ನಲ್ಲಿಡುತ್ತದೆ.

Docs.google.com: ಗೂಗಲ್ ಐಡಿ ಇದ್ರೆ ಇದಕ್ಕೆ ಸುಲಭವಾಗಿ ಆ್ಯಕ್ಸೆಸ್ ಸಿಗುತ್ತದೆ. ವರ್ಡ್ ಪ್ರೊಸೆಸಿಂಗ್, ಶೀಟ್ಸ್, ಪ್ರೆಸೆಂಟೇಶನ್ ಗಾಗಿ ಸ್ಲೈಡ್ಸ್ ಇದರಲ್ಲಿದೆ. ನೀವು ಎಡಿಟ್ ಮಾಡಿದ ಫೈಲ್ ಮತ್ತು ಡಾಕ್ಯುಮೆಂಟ್ ಗಳು ಗೂಗಲ್ ಡ್ರೈವ್ ನಲ್ಲಿ ಸೇವ್ ಆಗಿರುತ್ತವೆ.

Icloud.com: ಐಫೋನ್, ಐಪಾಡ್ ಅಥವಾ ಮ್ಯಾಕ್ ಬಳಸುತ್ತಿದ್ರೆ ನೀವು ಆ್ಯಪಲ್ ಐಡಿ ಹೊಂದಿರುತ್ತೀರಾ. ಐವರ್ಕ್ ಆಫೀಸ್ ಸೂಟ್ ಜೊತೆಗೆ 5ಜಿಬಿ ಐಕ್ಲೌಡ್ ಸ್ಟೋರೇಜ್ ದೊರೆಯುತ್ತದೆ.

Sumopaint.com: ಇದು ಆನ್ ಲೈನ್ ಇಮೇಜ್ ಎಡಿಟರ್. ನಿಮ್ಮ ಫೋಟೋಗಳನ್ನ ಎಡಿಟ್ ಮಾಡಬಹುದು. ಡಿಜಿಟಲ್ ಪೇಂಟಿಂಗ್ ಕ್ರಿಯೇಟ್ ಮಾಡಲು ಅವಕಾಶವಿದೆ. ಅಡೋಬ್ ಫೋಟೋ ಶಾಪ್ ನಂತೆ ಇದರಲ್ಲೂ ಲೇಯರ್ಸ್, ಫಿಲ್ಟರ್ಸ್, ಬ್ರಶ್, ಶೇಪ್ ಗಳಿವೆ.

Pixlr.com: ಇದು ಥೇಟ್ ಸುಮೋ ಪೇಂಟ್ ನಂತೆಯೇ ಕಾರ್ಯನಿರ್ವಹಿಸುತ್ತದೆ. ಫ್ಲಾಶ್ ಬೇಸ್ಡ್ ಆನ್ ಲೈನ್ ಟೂಲ್ ಇದು.

Vectr.com: ಲೋಗೋ, ಬ್ಯಾನರ್, ಐಕಾನ್, ಸ್ಕೆಚ್ ಮಾಡಲು ಬೇಕಾದ ಟೂಲ್ ಗಳು ಇದರಲ್ಲಿ ಲಭ್ಯವಿವೆ. ಟ್ಯುಟೋರಿಯಲ್ ವಿಡಿಯೋಗಳು ಕೂಡ ಇರುವುದರಿಂದ ನಿಮಗೆ ಕೆಲಸ ಸುಲಭವಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...