alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಹಳ್ಳಿಯಲ್ಲಿ ಪಶು-ಪಕ್ಷಿಯಿಂದ ಹಿಡಿದು ಎಲ್ಲರೂ ಕುರುಡರೆ…!

ವಿಶ್ವದಲ್ಲಿ ಚಿತ್ರವಿಚಿತ್ರ ಹಳ್ಳಿಗಳಿವೆ. ವಿಭಿನ್ನ ಜನರಿದ್ದಾರೆ. ಒಂದೊಂದು ಹಳ್ಳಿಯ ಸಂಪ್ರದಾಯ, ಪದ್ಧತಿ, ಆಹಾರ, ಉಪಚಾರ ಎಲ್ಲವೂ ಬೇರೆ ಬೇರೆ. ಈ ಹಳ್ಳಿ ಕೂಡ ವಿಚಿತ್ರ ಕಾರಣದಿಂದ ಎಲ್ಲರ ಗಮನ ಸೆಳೆದಿದೆ. ಈ ಹಳ್ಳಿಯಲ್ಲಿ ಸ್ತ್ರೀ, ಪುರುಷ ಎನ್ನದೆ ಪ್ರಾಣಿ- ಪಕ್ಷಿಗಳವರೆಗೆ ಎಲ್ಲರೂ ಕುರುಡರು.

ಈ ಹಳ್ಳಿಯಲ್ಲಿರುವ ಪಕ್ಷಿಗಳು ಹಾರಾಡುವುದಿಲ್ಲ. ಇಲ್ಲಿನ ಮನುಷ್ಯರಿಗೆ ಕೂಡ ಕಣ್ಣು ಕಾಣಿಸುವುದಿಲ್ಲ. ಹುಟ್ಟಿದ ವೇಳೆ ಮಗುವಿಗೆ ದೃಷ್ಟಿಯಿರುತ್ತದೆ. ಆದ್ರೆ ಕೆಲ ಸಮಯದ ನಂತ್ರ ಮಗು ದೃಷ್ಟಿ ಕಳೆದುಕೊಳ್ಳುತ್ತದೆ. ಕುರುಡರ ಹಳ್ಳಿಯಿರುವುದು ಟಿಟ್ಲೆಪಕ್ ಗ್ರಾಮದಲ್ಲಿ. ಜೊಪೊಟೆಕ್ ಜಾತಿಯ ಸುಮಾರು 300 ರೆಡ್ ಇಂಡಿಯನ್ಸ್ ಇಲ್ಲಿ ವಾಸವಾಗಿದ್ದಾರೆ.

ಇವರು ಕಲ್ಲುಗಳ ಮೇಲೆ ಮಲಗ್ತಾರೆ. ಬೀನ್ಸ್, ಮೆಕ್ಕೆಜೋಳ ಹಾಗೂ ಮೆಣಸಿನ ಕಾಯಿಯನ್ನು ತಿನ್ನುತ್ತಾರೆ. ಮರದಿಂದ ಮಾಡಿದ ವಸ್ತುಗಳು ಇವರ ಬಳಿಯಿವೆ.

ರಸ್ತೆ ಬದಿಯಲ್ಲಿ ಸುಮಾರು 70 ಗುಡಿಸಲುಗಳಲ್ಲಿ ಇವರು ವಾಸವಾಗಿದ್ದಾರೆ. ಗುಡಿಸಲಿಗೆ ಕಿಟಕಿ ಅಥವಾ ಬಾಗಿಲು ಇಲ್ಲ. ಇವರಿಗೆ ಬೆಳಕು ಕಾಣಿಸುವುದಿಲ್ಲ. ಬೆಳಿಗ್ಗೆ ಪ್ರಾಣಿ- ಪಕ್ಷಿಗಳ ಕೂಗಿಗೆ ಏಳುವ ಇವರು ರಾತ್ರಿ ಒಂದಾಗಿ ಊಟ ಮಾಡ್ತಾರೆ. ನಂತ್ರ ಮದ್ಯ ಸೇವನೆ ಮಾಡಿ ನೃತ್ಯ ಮಾಡ್ತಾರೆ.

ಇಲ್ಲೊಂದು ಜಾತಿಯ ಮರವಿದೆ. ಅದನ್ನು ನೋಡಿದ್ರೆ ಅಂಧರಾಗ್ತಾರೆ ಎಂಬ ನಂಬಿಕೆ ಇಲ್ಲಿನ ಜನರದ್ದು. ಆದ್ರೆ ವಿಜ್ಞಾನಿಗಳು ಇದು ತಪ್ಪು ಕಲ್ಪನೆ ಎಂದಿದ್ದಾರೆ. ಕಪ್ಪು ಬಣ್ಣದ ಸೊಳ್ಳೆಯೊಂದು ಕಚ್ಚಿದ್ರೆ ಬ್ಯಾಕ್ಟೀರಿಯಾವೊಂದು ದೇಹ ಸೇರಿ ಕುರುಡುತನಕ್ಕೆ ಕಾರಣವಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...