alex Certify
ಕನ್ನಡ ದುನಿಯಾ       Mobile App
       

Kannada Duniya

ಅಸ್ಥಿಪಂಜರದಂಥ ಸುಂದರ ಬೈಕ್ ಮಾರುಕಟ್ಟೆಗೆ ಲಗ್ಗೆ

SKELETON BIKEನೋಡೋಕೆ ಥೇಟ್ ಅಸ್ಥಿಪಂಜರದಂತಿದೆ, ಆದ್ರೆ ಸ್ಕೆಲಿಟನ್ ಅಲ್ಲ, ಸುಂದರ ಮೋಟಾರ್ ಬೈಕ್. ವೈಮಾನಿಕ ಕಂಪನಿ ಏರ್ ಬಸ್ ಈ ವಿಶಿಷ್ಟ ಬೈಕ್ ಅನ್ನು ತಯಾರಿಸಿದೆ.

ಇದೊಂದು ಹಗುರವಾದ ಇ-ಬೈಕ್. ಇದಕ್ಕೆ ಸೂಪರ್ ಸ್ಟ್ರಾಂಗ್ 3 ಡಿ ಪ್ರಿಂಟ್ ನ ಫ್ರೇಮ್ ಕೂಡ ಇದೆ. 3 ಡಿ ಮುದ್ರಣ ತಂತ್ರಜ್ಞಾನಲ್ಲಿ ಏನೆಲ್ಲ ಮಾಡಲು ಸಾಧ್ಯ ಅನ್ನೋದನ್ನು ಜಗತ್ತಿಗೆ ಪರಿಚಯಿಸುವ ದೃಷ್ಟಿಯಿಂದ ಫ್ರಾನ್ಸ್ ನ ಸಂಸ್ಥೆ ಏರ್ ಬಸ್ ಈ ಬೈಕನ್ನು ತಯಾರಿಸಿದೆ.

ಎಲೆಕ್ಟ್ರಿಕ್ ಬ್ಯಾಟರಿಯಿಂದ ಈ ಬೈಕ್ ಚಲಿಸುತ್ತೆ. ಇದನ್ನು ಲೈಟ್ ರೈಡರ್ ಅಂತಾನೇ ಕರೆಯಲಾಗ್ತಿದೆ. ಸಂಪೂರ್ಣ ಕಂಪ್ಯೂಟರ್ ವಿನ್ಯಾಸ ರಚನೆ ಹೊಂದಿರುವುದು ವಿಶೇಷ. ಕೇವಲ 13 ಪೌಂಡ್ ತೂಕವಿರುವ ಈ ಬೈಕ್, 220 ಪೌಂಡ್ ಭಾರದ ವ್ಯಕ್ತಿಗಳನ್ನೂ ಹೊತ್ತೊಯ್ಯಬಲ್ಲದು. ಒಮ್ಮೆ ಬ್ಯಾಟರಿ ಚಾರ್ಜ್ ಮಾಡಿದ್ರೆ ಆರಾಮಾಗಿ 35 ಮೈಲು ದೂರ ಬೈಕ್ ಓಡುತ್ತೆ. ತುಂಬಾ ಫ್ಯಾನ್ಸಿಯಾಗಿರೋದ್ರಿಂದ ಬೈಕ್ ಕೊಂಚ ದುಬಾರಿ. ಲೈಟ್ ರೈಡರ್ ಬೈಕ್ ಬೆಲೆ 56,000 ಡಾಲರ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...