alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಜಲಚರವನ್ನು ಮುಟ್ಟಿದರೆ ಶಾಕ್ ಹೊಡೆಯುತ್ತೆ !!

An electric eel (Electrophorus electricus) is pictured in this undated handout photo obtained by Reuters December 4, 2014. REUTERS/Kenneth Catania/Handout via Reuters

ನೀರು, ಗಾಳಿ ಮತ್ತು ಬೆಳಕಿಗೆ ವಿದ್ಯುತ್ ಉತ್ಪಾದಿಸುವ ಶಕ್ತಿ ಇದೆಯೆಂಬುದು ನಮಗೆ ಗೊತ್ತು. ಆದರೆ ಸಮುದ್ರದಲ್ಲಿ ಸ್ವತಂತ್ರವಾಗಿ ಈಜಾಡಿಕೊಂಡಿರುವ ಮೀನುಗಳು ಕರೆಂಟ್ ಉತ್ಪಾದಿಸುವುದು ಆಶ್ಚರ್ಯದ ಸಂಗತಿಯಲ್ಲವೇ..?

ಕೆಲವು ಬಗೆಯ ಮೀನುಗಳಿವೆ. ಇವು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮತ್ತು ಬೇಟೆಯನ್ನು ಬೀಳಿಸಲು ವಿದ್ಯುತ್ ಉತ್ಪಾದಿಸುತ್ತವೆ. ಈ ಮೀನುಗಳ ಸ್ನಾಯುಗಳು ವಿದ್ಯುತ್ ಕೋಶಗಳನ್ನು ಒಳಗೊಂಡಿರುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಶಾಕ್ ನೀಡುವ ಮೀನುಗಳು ಕೂಡ ಇತರ ಮೀನುಗಳಂತೆಯೇ ಇರುತ್ತವೆ. ಇವುಗಳಲ್ಲಿ ವಿದ್ಯುತ್ ಮೀನು (Electric cel) ತುಂಬ ಅಪಾಯಕಾರಿ. ಇವು ಹೆಚ್ಚಾಗಿ ದಕ್ಷಿಣ ಅಮೆರಿಕಾದ ಅಮೆಜಾನ್ ಮತ್ತು ಔರಿನೋಕೋ ಜೌಗು ಪ್ರದೇಶಗಳಲ್ಲಿ ಕಂಡುಬರುತ್ತವೆ. ಇದನ್ನು ಬ್ರೆಸಿಲಿಯನ್ ವಿದ್ಯುತ್ ಮೀನು ಎಂದೂ ಕರೆಯುವುದುಂಟು. ಈ ವಿದ್ಯುತ್ ಮೀನಿನ ಉದ್ದ 1.8 ಮೀಟರ್ ನಷ್ಟಿದ್ದು, ಕಪ್ಪಗಿರುತ್ತದೆ. ಇದರ ವಿದ್ಯುತ್ ಉತ್ಪಾದನಾ ಅಂಗಗಳು ಬಾಲದ ಕೆಳಗಿರುತ್ತವೆ. ವಿದ್ಯುತ್ ಶಾಕ್ ಕೊಡುವುದರ ಮೂಲಕ ಕುದುರೆಯಂತಹ ಪ್ರಾಣಿಗಳಿಂದಲೂ ಇವು ಪಾರಾಗುತ್ತವಂತೆ!

ವಿದ್ಯುತ್ ಮೀನಿನ ಹೊರತಾಗಿ ಕ್ಯಾಟ್ ಫಿಶ್, ಟಾರ್ಪಿಡೋ ರೇ, ಎಲೆಕ್ಟ್ರಿಕ್ ರೇ ಮುಂತಾದ ಮೀನುಗಳು ಕೂಡ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿವೆ. ಇಂತಹ ಮೀನುಗಳು 400 ರಿಂದ 650 ವೋಲ್ಟ್ ವಿದ್ಯುತ್ ಶಕ್ತಿಯನ್ನು ಉತ್ಪಾದಿಸುತ್ತವೆ. ಕೆಲವೊಮ್ಮೆ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಮುಗಿಯುತ್ತದೆ. ಆಹಾರ ಮತ್ತು ವಿಶ್ರಾಂತಿಯ ನಂತರ ಈ ಸಾಮರ್ಥ್ಯ ಮರಳಿ ಬರುತ್ತದೆ

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...